ಮತ್ತೆ 35 ಸಾವಿರ ದಾಟಿದ ಚಿನ್ನದ ಬೆಲೆ
ಇತ್ತೀಚಿನ ವರ್ಷಗಳ ಸಾರ್ವಕಾಲಿಕ ದರ ದತ್ತ ಹಳದಿ ಲೋಹ
Team Udayavani, Jul 22, 2019, 10:22 PM IST
ಮಣಿಪಾಲ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾದ ಪರಿಣಾಮ ‘ಭಾರತದಲ್ಲೂ ಹಳದಿ ಲೋಹ ದುಬಾರಿಯಾಗಿದೆ. ಸತತ 5 ವರ್ಷಗಳಿಂದ ಚಿನ್ನದ ದರಗಳು ಏರಿಕೆಯಾಗುತ್ತಾ ಬಂದಿದ್ದು, ಕಳೆದ ವಾರ 35 ಸಾವಿರದ ಗಡಿ ದಾಟಿತ್ತು. ಇದೀಗ ಮತ್ತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಏನು ಕಾರಣ
ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಇರಾನ್ ಬಿಕ್ಕಟ್ಟು ಇದೀಗ ಮತ್ತೆ ಶುರುವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಇರಾನ್ ಬ್ರಿಟನ್ ನ ಆಯಿಲ್ ಟ್ಯಾಂಕರ್ ಅನ್ನು ಸಮುದ್ರದಲ್ಲಿ ವಶಪಡಿಸಿಕೊಂಡಿತ್ತು. ಎರಡು ವಾರಗಳ ಹಿಂದೆ ಇರಾನ್‌ನ ಹಡಗನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿತ್ತು. ಈ ಹಿನ್ನಲೆಯಲ್ಲಿ ಉಭಯ ರಾಷ್ಟ್ರಗಳಲ್ಲಿ ತಲೆದೋರಿದ ಯುದ್ಧದ ಭೀತಿಯಿಂದ ವಿದೇಶದ ಫೆಡರಲ್ ಬ್ಯಾಂಕುಗಳು ಚಿನ್ನವನ್ನು ಹೆಚ್ಚು ಖರೀದಿಸಲು ಮುಂದೆ ಬಂದಿದೆ. ಇದು ಬೆಲೆ ಏರಿಕೆಗೆ ಒಂದು ಕಾರಣವಾಗಿದೆ.
ಚಿನ್ನವು ಮುಂದಿನ ದಿನಗಳ ಸುರಕ್ಷಿತ ಹೂಡಿಕೆಯ ಕ್ಷೇತ್ರವಾಗಿದೆ. ಈ ಕಾರಣಕ್ಕೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ತಿಂಗಳ ಮೊದಲ ವಾರದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಬಂದಿದೆ. ಜಾಗತಿಕ ಮಟ್ಟದಲ್ಲಿ ಚಿನ್ನ ದುಬಾರಿಯಾದ ಕಾರಣ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 10 ಗ್ರಾಂ.ಗೆ 35,970 ರೂ. ದಾಖಲಾಗಿದೆ. ಸೋಮವಾರ 100 ರೂ. ಗಳು ಏರಿಕೆಯಾಗಿದೆ. ಇದು ಇತ್ತೀಚಿನ ವರ್ಷಗಳ ಸಾರ್ವಕಾಲಿಕ ದರವಾಗಿದೆ.
ಜಿಗಿದ ಬೆಳ್ಳಿ
ಒಂದೆಡೆ ಚಿನ್ನದ ಮಾರುಕಟ್ಟೆ ಏರುತ್ತಾ ಹೋಗುತ್ತಿದ್ದಂತೆ ಬೆಳ್ಳಿ ದರವೂ ಏರು ಗತಿಯನ್ನು ಕಂಡಿದೆ. ಸೋಮವಾರ ಕೇ.ಜಿ.ಗೆ 260 ಏರಿಕೆಯಾಗಿದ್ದು, 41,960 ರೂ. ಪರಿಷ್ಕೃತದರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.