ತಗ್ಗಿದ ಬೇಡಿಕೆ : ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಕುಸಿತ
Team Udayavani, Apr 30, 2019, 4:03 PM IST
ಹೊಸದಿಲ್ಲಿ : ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಮಂಗಳವಾರ 10 ಗ್ರಾಂ ಅಪ್ಪಟ ಚಿನ್ನದ ಬೆಲೆ 55 ರೂ. ಕುಸಿದು 32,945 ರೂ. ಗೆ ತಲುಪಿತು.
ಜ್ಯುವೆಲ್ಲರ್ ಗಳಿಂದ ಬೇಡಿಕೆ ಪ್ರಮಾಣ ತಗ್ಗಿರುವುದೇ ಚಿನ್ನದ ಬೆಲೆ ಕುಸಿತಕ್ಕೆ ಕಾರಣವೆಂದು ಆಲ್ ಇಂಡಿಯಾ ಸರಾಫ ಅಸೋಸಿಯೇಶನ್ ಹೇಳಿತು.
ಚಿನ್ನವನ್ನು ಅನುಸರಿಸಿ ಬೆಳ್ಳಿ ಕೂಡ 200 ರೂ. ಕುಸಿತಕ್ಕೆ ಗುರಿಯಾಗಿ ಕೆಜಿಗೆ 38,500 ರೂ. ಮಟ್ಟಕ್ಕೆ ಇಳಿಯಿತು. ಕೈಗಾರಿಕಾ ಘಟಕಗಳು ಮತ್ತು ಟಂಕಸಾಲೆಯವರಿಂದ ಬೇಡಿಕೆ ಕಡಿಮೆಯಾದದ್ದೇ ಬೆಳ್ಳಿಯ ಬೆಲೆ ಇಳಿಯಲು ಕಾರಣವೆಂದು ತಿಳಿಯಲಾಗಿದೆ.
ಜಾಗತಿಕ ಸ್ಪಾಟ್ ಚಿನ್ನ ಔನ್ಸಿಗೆ 1,285.40 ಡಾಲರ್ ಬೆಲೆಯಲ್ಲಿ ವಹಿವಾಟಾಗುತ್ತಿತ್ತು. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಔನ್ಸಿಗೆ 15.06 ಡಾಲರ್ ಏರಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.