ಗೂಗಲ್‌ನಲ್ಲಿ ಸುದ್ದಿಗಳಿಗೆ ಇನ್ನು ಪೇಮೆಂಟ್
ಸುದ್ದಿಗಳನ್ನು ಬಿತ್ತರಿಸುವ ಸಲುವಾಗಿಯೇ ತಮ್ಮ ಸಂಸ್ಥೆ ಗೂಗಲ್ ನ್ಯೂಸ್ ಶೋಕೇಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಿದೆ.
Team Udayavani, Oct 2, 2020, 10:37 AM IST
ಬ್ರುಸೆಲ್ಸ್: ಗೂಗಲ್‌ನಲ್ಲಿ ಪ್ರಕಟವಾಗುವ ಸುದ್ದಿಗಳ ಮೂಲ ಹಕ್ಕುಗಳನ್ನು ಹೊಂದಿರುವ ಸುದ್ದಿ ಸಂಸ್ಥೆಗಳಿಗೆ, ಪತ್ರಿಕೆಗಳಿ ಗೆ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 7,300 ಕೋಟಿ ರೂ.ಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗುತ್ತದೆ ಎಂದು ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚ್ಚೈ ತಿಳಿಸ ದ್ದಾರೆ.
ಗೂಗಲ್ ನಲ್ಲಿ ಪ್ರಕಟವಾಗುವ ತಮ್ಮ ಕಂಟೆಂಟ್ ಗಳಿಗೆ ಪ್ರತಿಯಾಗಿ ಗೂಗಲ್ ತಮಗೆ ಸಂಭಾವನೆ ನೀಡುತ್ತಿಲ್ಲ ಎಂದು ಹಲವಾರು ಸುದ್ದಿ ಸಂಸ್ಥೆಗಳು, ಮಾಧ್ಯಮಗಳು ಕೆಲವು ವರ್ಷಗಳಿಂದ ಆರೋಪಿಸುತ್ತಾ ಬಂದಿದ್ದವು. ಅವರಲ್ಲಿ ಯೂರೋಪ್‌ನ ಲೇಖಕರು ಮುಂಚೂಣಿಯಲ್ಲಿದ್ದರು. ಈ ಎಲ್ಲಾ ಆರೋಪಗಳಿಗೆ ಗುರುವಾರ ಉತ್ತರ ನೀಡಿರುವ ಪಿಚ್ಚೈ , “ಸುದ್ದಿಗಳನ್ನು ಬಿತ್ತರಿಸುವ ಸಲುವಾಗಿಯೇ ತಮ್ಮ ಸಂಸ್ಥೆ ಗೂಗಲ್ ನ್ಯೂಸ್ ಶೋಕೇಸ್ ಎಂಬ ಸಂಸ್ಥೆಯನ್ನು
ಹುಟ್ಟು ಹಾಕಲಿದೆ.
ಮೊದಲಿಗೆ ಇದು ಜರ್ಮನಿಯಲ್ಲಿ ಕಾರ್ಯಾರಂಭ ಮಾಡಲಿದೆ. ಈ ಸಂಬಂಧ ಅಲ್ಲಿನ ಪ್ರಮುಖ ಪತ್ರಿಕೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.
ಫೇಸ್‌ಬುಕ್ ಮೆಸೆಂಜರ್:ಇನ್ ಸ್ಟಾ ಡಿಫಾಲ್ಟ್ ಸೌಲಭ್ಯ
ಇನ್ ಸ್ಟಾಗ್ರಾಂನಲ್ಲಿನ ಸಂದೇಶಗಳನ್ನು ನೇರವಾಗಿ ಫೇಸ್ ಬುಕ್‌ಗೆ ರವಾನಿಸುವ ಸೌಕರ್ಯವನ್ನು ಇತ್ತೀಚೆಗೆ ಇನ್ ಸ್ಟಾಗ್ರಾಂ ತನ್ನ ಗ್ರಾಹಕರಿಗೆ ಕಲ್ಪಿಸಿತ್ತು. ಆದರೆ, ಈ ಸೌಲಭ್ಯವನ್ನು ಮತ್ತಷ್ಟು ಉನ್ನತೀಕರಿಸಲಾಗಿದೆ.
ಅಂದರೆ, ಕಿರು ಸಂದೇಶಗಳನ್ನು ರವಾನಿಸುವ ಫೇಸ್ ಬುಕ್ ಮೆಸೆಂಜರ್ ಆ್ಯಪ್ ಇನ್ನು ಇನ್ ಸ್ಟಾಗ್ರಾಂ ಕಿರು ಸಂದೇ ಶವನ್ನೂ ನಿರ್ವಹಿಸುವ ಸಾಧನವಾಗಲಿದೆ. ಹಾಗಾಗಿ, ಫೇಸ್ ಬುಕ್-ಇನ್ ಸ್ಟಾಗ್ರಾಂ ಎರಡಕ್ಕೂ ಮೆಸೆಂಜರ್ ಕಿರು ಸಂದೇಶ ವಾಹಕವಾಗಿ ಕೆಲಸ ಮಾಡಲಿದ್ದು ಅದರಲ್ಲಿ ಟೆಕ್ಸ್ಟ್, ಆಡಿಯೋ, ವೀಡಿಯೋ ಕ್ಲಿಪ್ ಗಳನ್ನೂ ಕಳುಹಿಸಬಹುದು.
ಜತೆಗೆ, ಮೆಸೆಜ್ ತ್ರೆಡ್‌ಗಳನ್ನಲ್ಲದೆ, ಕರೆಗಳನ್ನೂ ಮಾಡಬ ಹುದಾಗಿದೆ. ಇದರಿಂದ, ಫೇಸ್ ಬುಕ್‌ನಲ್ಲಿ ಗ್ರಾಹಕರ ಪ್ರತಿ ಯೊಂದು ಪೋಸ್ಟ್‌ಗೆ ಸಿಗುವ ಕಮೆಂಟ್‌ಗಳು, ಎಮೊಜಿ ಗಳು, ಚಾಟ್ ಕಲರ್ ಆಯ್ಕೆಗಳು, ವಿಡಿಯೋವನ್ನು ಸಿಂಕಿಂಗ್ ಮೂಲಕ ಮತ್ತೂಬ್ಬರೊಂದಿಗೆ ಏಕಕಾಲದಲ್ಲಿ ವೀಕ್ಷಿಸುವ ಸೌಲಭ್ಯವೂ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.