ತೆರಿಗೆ ಉಳಿಸುವ ಮನಸ್ಸಿದೆಯಾ? ದಾರಿಗಳಿವೆ

2019-20ರ ಅವಧಿಗಾಗಿ ತೆರಿಗೆ ಉಳಿಸಲು ಇನ್ನೂ ಹೂಡಿಕೆ ಮಾಡಬಹುದು; ಜೂ.30ರೊಳಗೆ ಪ್ರಕ್ರಿಯೆ ಮುಗಿಸಿ

Team Udayavani, Jun 22, 2020, 12:30 PM IST

ತೆರಿಗೆ ಉಳಿಸುವ ಮನಸ್ಸಿದೆಯಾ? ದಾರಿಗಳಿವೆ

ಕೇಂದ್ರ ಸರ್ಕಾರ 2019-20 ವಿತ್ತೀಯ ವರ್ಷದ ಆದಾಯ ತೆರಿಗೆ ಹಿಂಪಾವತಿ ದಾಖಲೆ ಸಲ್ಲಿಸಲು, ಗಡುವನ್ನು ವಿಸ್ತರಿಸಿದೆ. ಕೊರೊನಾ ದಿಗ್ಬಂಧನದ ಹಿನ್ನೆಲೆಯಲ್ಲಿ ನ.30ರವರೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ನಿಮಗೊಂದು ಅಪೂರ್ವ ಅವಕಾಶ. ನೀವಿನ್ನೂ ತೆರಿಗೆ ಹಣ ಉಳಿಸಲು ಸಾಕಷ್ಟು ಹೂಡಿಲ್ಲವೇ? ಹಾಗಾದರೆ ಚಿಂತೆಯಿಲ್ಲ, ಹೀಗೆ ಹೂಡಿಕೆ ಮಾಡಲೂ ಮಾ.31ರಿಂದ ಜೂ.30ರವರೆಗೆ ಕೇಂದ್ರ ಅವಕಾಶ ವಿಸ್ತರಿಸಿದೆ! ಯಾವ್ಯಾವ ರೀತಿಯಲ್ಲಿ ಹೂಡಿಕೆ ಮಾಡಬಹುದು ಎನ್ನುವುದಕ್ಕೆ ಇಲ್ಲಿವೆ ದಾರಿಗಳು.

ಭವಿಷ್ಯನಿಧಿ, ಸುಕನ್ಯ ಸಮೃದ್ಧಿ ಯೋಜನೆ
ತೆರಿಗೆದಾರರು ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ), ಸುಕನ್ಯ ಸಮೃದ್ಧಿ ಯೋಜನೆ ಖಾತೆ ಹೊಂದಿದ್ದು, ದಿಗ್ಬಂಧನದ ಕಾರಣ ಪಾವತಿ ಮಾಡಲಾಗಿರದಿದ್ದರೆ, ಇಲ್ಲೂ ಹಣ ಹೂಡುವ ಅವಕಾಶವಿದೆ. ದಿಗ್ಬಂಧನದ ಹಿನ್ನೆಲೆಯಲ್ಲಿ ಮಾ.31ರೊಳಗೆ ನಿಮಗೆ ಕಂತು ಪಾವತಿ ಮಾಡಲು ಸಾಧ್ಯವಾಗದಿದ್ದರೆ ಜೂ.30ರೊಳಗೆ ಮಾಡಬಹುದು. ಆದರೆ ಮಾ.31ರಿಂದ ಜೂ.30ರ ವಿಸ್ತೃತ ಅವಧಿಯಲ್ಲಿ, ಒಂದು ಬಾರಿ ಅದಕ್ಕಾಗಿ ಸೂಚಿಸಲ್ಪಟ್ಟಿರುವ ನಿರ್ದಿಷ್ಟ ಮಿತಿಯಲ್ಲಿ ಮಾತ್ರ ಹಣ ಹಾಕಲು ಸಾಧ್ಯ. ಒಂದು ವೇಳೆ ನೀವು ಆದಾಯ ತೆರಿಗೆ ಉಳಿಸಲು ಬೇಕಾದ ಎಲ್ಲ ಹೂಡಿಕೆ ಮಾಡಿದ್ದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದೇ ದಾಖಲೆ ಸಲ್ಲಿಸುವತ್ತ ಗಮನಿಸಬಹುದು.

ಇಎಲ್‌ಎಸ್‌ಎಸ್‌
ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌ ಅನ್ನು (ಈಕ್ವಿಟಿ ಸಂಬಂಧಿತ ಉಳಿತಾಯ ಯೋಜನೆ) ಕಿರಿದಾಗಿ ಇಎಲ್‌ಎಸ್‌ಎಸ್‌ ಎಂದು ಕರೆಯಲಾಗುತ್ತದೆ. ಇಎಲ್‌
ಎಸ್‌ಎಸ್‌ ಮ್ಯೂಚುವಲ್‌ ಫ‌ಂಡ್‌ಗಳಿಗೆ (ಇಲ್ಲಿನ ಬಹುತೇಕ ಹಣವನ್ನು ಈಕ್ವಿಟಿ ಅಥವಾ ಅದಕ್ಕೆ ಸಂಬಂಧಿಸಿದ ಷೇರುಗಳಲ್ಲಿ ಹೂಡಲಾಗುತ್ತದೆ), ವಾರ್ಷಿಕವಾಗಿ ಶೇ.12ರಿಂದ 15ರಷ್ಟು ಹಣ ಉಳಿಯುತ್ತದೆ. ಆದ್ದರಿಂದಲೇ ಆದಾಯ ತೆರಿಗೆ ಕಾಯ್ದೆಯ 80ಸಿ ವಿಧಿಯಡಿ ಬರುವ ದಾರಿಗಳ ಪೈಕಿ ಇದನ್ನು ಅತ್ಯುತ್ತಮ ಹೂಡಿಕೆ ಎನ್ನುತ್ತಾರೆ ತಜ್ಞರು. ಇದು ಕೇವಲ ಮೂರು ವರ್ಷದ ಅವಧಿಯ ಯೋಜನೆ. ಇಲ್ಲಿ ಹೂಡಿಕೆ ಮಾಡಿದರೆ, ತೆರಿಗೆ ಉಳಿಸುವುದರ ಜೊತೆಗೆ ಲಾಭವನ್ನೂ ಗಳಿಸಬಹುದು. ಪ್ರಸ್ತುತ ಮಾರುಕಟ್ಟೆಯೂ ಇದಕ್ಕೆ ಪೂರಕವಾಗಿದೆ.

ಪ್ರಧಾನಿ ಪರಿಹಾರ ನಿಧಿಯನ್ನೂ ಪರಿಗಣಿಸಬಹುದು!
ಈ ಆಯ್ಕೆಗಳ ಜೊತೆಗೆ ಇನ್ನೂ ಹಲವು ದಾರಿಗಳು ತೆರಿಗೆ ಉಳಿಸಲು ಮುಕ್ತವಾಗಿಯೇ ಇದೆ. ಅದರಲ್ಲೊಂದು ಪ್ರಧಾನಮಂತ್ರಿ ಪರಿಹಾರ ನಿಧಿ (ಪಿಎಂ ಕೇರ್ಸ್‌ ಫ‌ಂಡ್‌). ಇನ್ನು ಐದು ವರ್ಷದ ನಿಗದಿತ ಠೇವಣಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌), ಜೀವ ವಿಮಾ ನಿಗಮದ ಪಾಲಿಸಿಗಳಲ್ಲೂ ಹಣ ಹೂಡಬಹುದು. ಆರೋಗ್ಯ ವಿಮೆ ಖರೀದಿಸಿದರೂ ತೆರಿಗೆ ವಿನಾಯ್ತಿ ಸಿಗುತ್ತದೆ.

ಎಷ್ಟು ಹಣ ಹೂಡಿದ್ದೀರಿ, ತಿಳಿಸಿ
ಇಷ್ಟೆಲ್ಲದರ ಜೊತೆಗೆ ತೆರಿಗೆದಾರರು ಗಮನಿಸಲೇಬೇಕಾದ ಒಂದು ಸಂಗತಿಯಿದೆ. ಈ ವರ್ಷ ಜನವರಿಯಲ್ಲಿ ಕೇಂದ್ರಸರ್ಕಾರ ಸಹಜ್‌ ಅಥವಾ ಐಟಿಆರ್‌ ಪತ್ರಕವನ್ನು ಬಿಡುಗಡೆ ಮಾಡಿತ್ತು. ಅದನ್ನು ಈಗಲೂ ಹೂಡಿಕೆ ಮಾಡುವ ಆಸಕ್ತಿಯಿರುವ ವ್ಯಕ್ತಿಗಳಿಗಾಗಿ ಮತ್ತೂಮ್ಮೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶೆಡ್ನೂಲ್‌ ಡಿಐ (ಡೀಟೇಲ್ಸ್‌ ಆಫ್ ಇನ್ವೆಸ್ಟ್‌ಮೆಂಟ್‌ -ಹೂಡಿಕೆಯ ವಿವರ) ಅನ್ನು ಸೇರಿಸಲಾಗಿದೆ. ಇದರಲ್ಲಿ ಏ.1ರಿಂದ ಜ.30ರೊಳಗಿನ ಅವಧಿಯಲ್ಲಿ ಎಷ್ಟು ಹೂಡಿಕೆ ಮಾಡಲಾಗಿದೆ ಎನ್ನುವುದನ್ನು ನಮೂದಿಸಬೇಕು. ಅದರಲ್ಲಿ ತೆರಿಗೆ ವಿನಾಯ್ತಿ ಸಿಗುವ ಎಲ್ಲ ಹೂಡಿಕೆಗಳ ಮಾಹಿತಿ ಇರಬೇಕಾಗುತ್ತದೆ.

5 ವರ್ಷ ಅವಧಿಯ ಅಂಚೆ ಠೇವಣಿ
ಐದು ವರ್ಷ ಅವಧಿಯ ನಿಗದಿತ ಠೇವಣಿಯನ್ನು, ನಿಮಗೆ ಸಮೀಪದಲ್ಲಿರುವ ಅಂಚೆ ಕಚೇರಿಯಲ್ಲಿ ಆರಂಭಿಸಬಹುದು. ಇದನ್ನು ಪಿಒಟಿಡಿ-ಪೋಸ್ಟ್‌ ಆಫಿಸ್‌ ಟರ್ಮ್ ಡೆಪಾಸಿಟ್‌ ಎನ್ನಲಾಗುತ್ತದೆ. 80ಸಿ ವಿಧಿಯ ಪ್ರಕಾರ ಇದಕ್ಕೆ ತೆರಿಗೆ ವಿನಾಯ್ತಿಯಿದೆ. ವಿಶೇಷವೆಂದರೆ ಈ ಖಾತೆಯನ್ನು ನೀವು ಎಲ್ಲಿಗೆ ಬೇಕಾದರೂ ವರ್ಗಾಯಿಸಿಕೊಳ್ಳಬಹುದು. ಹಾಗೆಯೇ ಕನಿಷ್ಠ 200 ರೂ.ವರೆಗೂ ಇಡಲು ಅವಕಾಶವಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಕಿರಿದಾಗಿ ಎನ್‌ಎಸ್‌ಸಿ ಎನ್ನಲಾಗುತ್ತದೆ. ಹೂಡಿಕೆಗಳ ಪೈಕಿಯೇ ಇದನ್ನು ಅತ್ಯಂತ ಸುಭದ್ರ ಎಂದು ತಜ್ಞರು ವರ್ಣಿಸುತ್ತಾರೆ. ಅಂಚೆ ಕಚೇರಿಗಳಲ್ಲಿ ನೀವು ಈ ಹೂಡಿಕೆ ಆರಂಭಿಸಬಹುದು. ವರ್ಷಕ್ಕೆ ನೀವು ಮಾಡಬೇಕಾದ ಕನಿಷ್ಠ ಹೂಡಿಕೆ 500 ರೂ. ಇಲ್ಲಿ ಗರಿಷ್ಠ ಎಷ್ಟು ಹಣವನ್ನಾದರೂ ಇಡಬಹುದು. ಒಟ್ಟು ಐದು ವರ್ಷ ಅವಧಿಯ ಈ ಹೂಡಿಕೆಯನ್ನು ಅವಧಿಗೆ ಮುಂಚೆ ಪಡೆಯಲು ಅವಕಾಶವಿಲ್ಲ. ಇದಕ್ಕೆ ಬರುವ ಬಡ್ಡಿ ಉಳಿತಾಯ ಖಾತೆಗಳು, ನಿಗದಿತ ಠೇವಣಿಗಳಿಗಿಂತ ಜಾಸ್ತಿ. ರಾಷ್ಟ್ರೀಯ ಪ್ರಮಾಣಪತ್ರ ಹೂಡಿಕೆಗೆ ವಾರ್ಷಿಕವಾಗಿ ಸರ್ಕಾರ ಶೇ.6.8ರಷ್ಟು ತೆರಿಗೆ ವಿನಾಯ್ತಿ ನೀಡುತ್ತದೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ಇದನ್ನು ಬದಲಿಸುತ್ತಿರುತ್ತದೆ.

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

Sensex-High

Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.