ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಶಿಫಾರಸು
Team Udayavani, Jul 24, 2019, 5:00 AM IST
ಹೊಸದಿಲ್ಲಿ: ಖಾಸಗಿ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲು, ಕೇಂದ್ರ ಸರಕಾರ ರೂಪಿಸಿದ್ದ ಅಂತರ ಸಚಿವಾಲಯಗಳ ಸಮಿತಿಯು, ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಿದೆ. ಅಲ್ಲದೆ, ಈ ಕರೆನ್ಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಭಾಗಿ ಯಾಗು ವವರಿಗೆ ದಂಡ ವಿಧಿಸುವಂಥ ಕಾನೂನನ್ನು ಜಾರಿಗೊಳಿಸಬೇಕೆಂದು ಒತ್ತಿ ಹೇಳಿದೆ.
ಹಣಕಾಸು ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ನೇತೃತ್ವದ ಈ ಸಮಿತಿ ಶಿಫಾರಸುಗಳನ್ನು “2019ರ ಕ್ರಿಪ್ಟೋಕರೆನ್ಸಿ ನಿಷೇಧ, ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಕಾಯ್ದೆ’ಯಡಿ ಪಟ್ಟಿ ಮಾಡಲಾಗಿದೆ. ಹಾಗೊಂದು ವೇಳೆ, ಕ್ರಿಪ್ಟೋ ಕರೆನ್ಸಿಯನ್ನು ಭಾರತದಲ್ಲಿ ಬಳಸಲು ಅನು ಮೋದನೆ ನೀಡುವ ಕಾಲ ಬಂದಾಗ, ಸರಕಾರವು ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ ಅಳವಡಿಸಿಕೊಳ್ಳಬೇಕು ಹಾಗೂ ಶಿಫಾರಸು ಗಳಲ್ಲಿ ಉಲ್ಲೇಖೀಸಿರುವ ವಿಚಾರಗಳನ್ನು ಮತ್ತೆ ಪರಾಮರ್ಶಿಸಬೇಕು ಎಂದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.