ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ
ಡೀಸೆಲ್ ಮೇಲಿನ ರಸ್ತೆ ತೆರಿಗೆ ಪ್ರತಿ ಲೀಟರ್ ಗೆ ಹತ್ತು ರೂಪಾಯಿ ಏರಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
Team Udayavani, Mar 14, 2020, 11:47 AM IST
Representative Image
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಶನಿವಾರ ಹೆಚ್ಚಳ ಮಾಡಿದ್ದು, ಇದರೊಂದಿಗೆ ಪ್ರತಿ ಲೀಟರ್ ಗೆ ಸರಾಸರಿ ಮೂರು ರೂಪಾಯಿ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಕಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕ ವಿಧಿಸಿದ್ದು, ಪೆಟ್ರೊಲ್ ಬೆಲೆ 2ರಿಂದ 8 ರೂಪಾಯಿಗೆ ಹಾಗೂ ಡೀಸೆಲ್ ಬೆಲೆ 4 ರೂಪಾಯಿ ಹೆಚ್ಚಳ ಮಾಡಬಹುದಾಗಿದೆ.
ಅಷ್ಟೇ ಅಲ್ಲ ಪೆಟ್ರೋಲ್ ಮೇಲಿನ ರಸ್ತೆ ತೆರಿಗೆ ಪ್ರತಿ ಲೀಟರ್ ಗೆ ಒಂದು ರೂಪಾಯಿ ಏರಿಕೆಯಾಗಿದ್ದರೆ, ಡೀಸೆಲ್ ಮೇಲಿನ ರಸ್ತೆ ತೆರಿಗೆ ಪ್ರತಿ ಲೀಟರ್ ಗೆ ಹತ್ತು ರೂಪಾಯಿ ಏರಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 69.97 ರೂಪಾಯಿ ಇದ್ದು, ಡೀಸೆಲ್ ಪ್ರತಿ ಲೀಟರ್ ಬೆಲೆ 62.58 ರೂಪಾಯಿ. ಜನವರಿ ತಿಂಗಳಿನಿಂದ ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆರು ರೂಪಾಯಿ ಇಳಿಕೆಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.