GST impact: ಅಪಾರ್ಟ್‌ಮೆಂಟ್ ದರ ಶೇ.20ರಷ್ಟು ಕಡಿಮೆಯಾಗಲಿದೆ
Team Udayavani, Jul 5, 2017, 11:11 AM IST
ಮುಂಬಯಿ : ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನುಷ್ಠಾನಗೊಂಡಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಪ್ಪು ಹಣದ ಬಳಕೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು ಡೆವಲಪರ್‌ಗಳಿಗೆ ಸಿಗುವ ತೆರಿಗೆ ಲಾಭದಿಂದಾಗಿ ಈಗಿನ್ನು ದೇಶದಲ್ಲಿ ಅಪಾರ್ಟ್‌ಮೆಂಟ್ ಬೆಲೆ ಶೇ.20ರಷ್ಟು ಇಳಿಯುವ ಸಾಧ್ಯತೆ ಇದೆ ಎಂದು ‘ಲಯಸಸ್ ಫೋರಾಸ್’ ಸಿದ್ಧಪಡಿಸಿರುವ ‘ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ – ಹಿಸ್ಟರಿ ಇನ್ ದಿ ಮೇಕಿಂಗ್’ ಎಂಬ ಶೀರ್ಷಿಕೆಯ ವರದಿಯು ತಿಳಿಸಿದೆ.
ಜಿಎಸ್‌ಟಿಯಿಂದಾಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳು ತಮ್ಮ ತೆರಿಗೆ ಪಾವತಿಯ ಮೇಲಿನ ‘ಪೂರ್ತಿ ಕ್ರೆಡಿಟ್’ ಪಡೆದುಕೊಳ್ಳುವುದಕ್ಕೆ ಅವಕಾಶವಿರುವುದರಿಂದ ವಸತಿ ಘಟಕಗಳ ನಿರ್ಮಾಣ ವೆಚ್ಚವು ಕನಿಷ್ಠ ಶೇ.20ರಷ್ಟು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಅಪಾರ್ಟ್‌ಮೆಂಟ್ ಬೆಲೆಗಳಲ್ಲಿ ಕೂಡ ಶೇ.20ರಷ್ಟು ಕಡಿತ ಉಂಟಾಗುತ್ತದೆ ಎಂದು ವರದಿ ಹೇಳಿದೆ.
ಜಿಎಸ್‌ಟಿ ಕ್ರಮದಿಂದಾಗಿ ಖರೀದಿದಾರನಿಗೆ ಮಾರುವ ಉದ್ದೇಶದಿಂದ ನಿರ್ಮಾಣವಾಗುವ ವಸತಿ ಕಟ್ಟಡ ಅಥವಾ ಅದರ ಭಾಗದ ವೆಚ್ಚಕ್ಕೆ ಶೇ.12ರ ತೆರಿಗೆ ಲಗಾವಾಗುತ್ತದೆ. ಇದು ಮುದ್ರಾಂಕ ವಚ್ಚವನ್ನು ಹೊರತುಪಡಿಸುವ ಪೂರ್ತಿ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ಅನ್ನು ಒಳಪಡುತ್ತದೆ. ಜಿಎಸ್‌ಟಿ ಅಡಿ ಡೆವಲಪರ್‌ಗಳಿಗೆ ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್ ಲಾಭವನ್ನು ಪಡೆಯಲು ಅವಕಾಶವಿದೆ. ಇದರ ಪರಿಣಾಮವಾಗಿ ವಸತಿ ಕಟ್ಟಡಗಳ ನಿರ್ಮಾಣ ವೆಚ್ಚವು ಶೇ.20ರಷ್ಟು ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ.
ವಸತಿ ಕಟ್ಟಡ ನಿರ್ಮಾಣಕ್ಕೆ ಬಳಸಲ್ಪಡುವ ವಸ್ತುಗಳು ಮತು ಸಲಕರಣೆಗಳ ಮೇಲೆ ಡೆವಲಪರ್‌ಗಳು ಪಾವತಿಸುವ ತೆರಿಗೆಯ ಮೇಲೆ ಅವರಿಗೆ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್)ಸವಲತ್ತು ಸಿಗುತ್ತದೆ. ಡೆವಲಪರ್ ಸಮುದಾಯದವರು ನೀಡಿರುವ ಅಂದಾಜಿನ ಪ್ರಕಾರ ಈ ತೆರಿಗೆಯು ವಸತಿ ಕಟ್ಟಡ ನಿರ್ಮಾಣ ವೆಚ್ಚದ ಶೇ.20ರಿಂದ ಶೇ.25ರಷ್ಟು ಆಗುತ್ತದೆ.
ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ಯಿಂದಾಗಿ ಡೆವಲಪರ್‌ಗಳಿಗೆ ಈ ಪ್ರಮಾಣದ ಲಾಭವಾಗುವುದರಿಂದ ನಿರ್ಮಾಣ ವೆಚ್ಚವು ಕಡಿಮೆಯಾಗಿ ಗ್ರಾಹಕರಿಗೆ ಶೇ.20ರಷ್ಟು ಕಡಿಮೆ ವೆಚ್ಚದಲ್ಲಿ ಅಪಾರ್ಟ್‌ಮೆಂಟ್‌ಗಳು ಸಿಗುವಂತಾಗುತ್ತದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.