ಜಿಎಸ್‌ಟಿ ಸಾಲ ಬಿಡುಗಡೆ: ರಾಜ್ಯಕ್ಕೆ 9,018 ಕೋ.ರೂ.
20 ರಾಜ್ಯಗಳಿಗೆ ಒಟ್ಟು 68,825 ಕೋ.ರೂ.
Team Udayavani, Oct 14, 2020, 6:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಾಕ್‌ಡೌನ್ ಅವಧಿಯ ಆದಾಯ ಕೊರತೆ ಸರಿದೂಗಿಸುವ ಸಂಬಂಧ ತಾನು ನೀಡಿದ್ದ “ಸಾಲ’ ಆಯ್ಕೆಯ ಅನ್ವಯ ಕೇಂದ್ರ ಸರಕಾರವು 20 ರಾಜ್ಯಗಳಿಗೆ 68,825 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಕರ್ನಾಟಕಕ್ಕೆ 9,018 ಕೋ.ರೂ. ಸಿಗಲಿದೆ.
ಈ ಮೊತ್ತವನ್ನು 20 ರಾಜ್ಯಗಳು ಮುಕ್ತ ಮಾರುಕಟ್ಟೆಯಿಂದ ಸಾಲದ ರೂಪದಲ್ಲಿ ಪಡೆಯಲಿವೆ. ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ಪ್ರಕಟನೆ ಹೊರಡಿಸಿದೆ.
ಸೋಮವಾರ ಜಿಎಸ್‌ಟಿ ಮಂಡಳಿ ಸಭೆ ನಡೆದಿದ್ದು, ಬಿಜೆಪಿಯೇತರ ರಾಜ್ಯಗಳು ಸಾಲ ಪಡೆಯಲು ಅಸಮ್ಮತಿ ಸೂಚಿಸಿದ್ದವು. ಆದರೆ ಈಗಾಗಲೇ 20 ರಾಜ್ಯಗಳು ಕೇಂದ್ರ ಸರಕಾರ ನೀಡಿದ್ದ ಆಯ್ಕೆ 1ರಂತೆ ಸಾಲ ಪಡೆಯಲು ಒಪ್ಪಿಗೆ ನೀಡಿವೆ. ಬಿಜೆಪಿ ಸರಕಾರೇತರ ರಾಜ್ಯಗಳ ಪ್ರತಿರೋಧ ಇದ್ದರೂ ಕೇಂದ್ರ ಸರಕಾರವು ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ. ಅಚ್ಚರಿಯೆಂದರೆ ಬಿಜೆಪಿಯೇತರ ರಾಜ್ಯವಾದ ಮಹಾರಾಷ್ಟ್ರ ಕೂಡ ಆಯ್ಕೆ 1ಕ್ಕೆ ಒಪ್ಪಿಕೊಂಡು 15,394 ಕೋ.ರೂ. ಸಾಲ ಪಡೆದಿದೆ.
20 ರಾಜ್ಯಗಳು ಯಾವುವು?
ಕರ್ನಾಟಕ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ. 8 ರಾಜ್ಯಗಳು ಒಪ್ಪಿಗೆ ಸೂಚಿಸಿಲ್ಲ.
ಆಯ್ಕೆ 1ರ ಅಡಿ ಸಿಗುವ ಸವಲತ್ತುಗಳು
– ಕೇಂದ್ರ ಹಣಕಾಸು ಸಚಿವಾಲಯ ವಿಶೇಷ ಸಾಲ ಗವಾಕ್ಷಿಯನ್ನು ರೂಪಿಸಿದೆ. ಇದು ಆದಾಯ ಕೊರತೆಯನ್ನು ಸಾಲದ ರೂಪದಲ್ಲಿ ನೀಗಿಸಲಿದೆ. ರಾಜ್ಯಗಳ ಒಟ್ಟಾರೆ ಆದಾಯ ಕೊರತೆ 1.1 ಲಕ್ಷ ಕೋ.ರೂ.ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
– ಶೇ.2ರಷ್ಟು ಹೆಚ್ಚುವರಿ ಸಾಲಕ್ಕೂ ಕೇಂದ್ರ ಒಪ್ಪಿಗೆ ನೀಡಿದ್ದು, ಈ ಪೈಕಿ ಜಿಎಸ್‌ಡಿಪಿಯ ಶೇ.0.5ರಷ್ಟು ಅಂತಿಮ ಕಂತನ್ನು ಪಡೆಯಲು ಅವಕಾಶ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.