ಬಾಡಿಗೆದಾರರು 18% ಜಿ ಎಸ್ ಟಿ ಪಾವತಿಸಬೇಕೆ ? ಏನಿದರ ಸತ್ಯಾಂಶ…
ದಿನೇಶ ಎಂ, Aug 25, 2022, 5:02 PM IST
ಹೊಸದಿಲ್ಲಿ: ಜಿ ಎಸ್ ಟಿ ಯ ಹೊಸ ನಿಯಮಗಳ ಕುರಿತಾಗಿ ಹಬ್ಬುತ್ತಿರುವ ಗಾಳಿಸುದ್ದಿಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆಯನ್ನು ನೀಡಿದೆ. ಬಾಡಿಗೆ ಮನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಜೊತೆಗೆ ಪಾವತಿಸುವ ತೆರಿಗೆಯ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿದ್ದವು. ಅದನ್ನು ನಿವಾರಿಸುವ ಪ್ರಯತ್ನ ಸರ್ಕಾರ ಮಾಡಿದೆ.
ಬಾಡಿಗೆ ಮನೆಗಳ ಮೇಲಿನ ಹೊಸ ಜಿಎಸ್‌ಟಿ ನಿಯಮ ಜುಲೈ 18 ರಿಂದ ಜಾರಿಗೆ ಬಂದಿದೆ. ಆ ನಂತರ ಬಾಡಿಗೆದಾರರು ಮನೆ ಬಾಡಿಗೆಗೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂಬ ಸುದ್ದಿಗಳು ಜನರಲ್ಲಿ ಗೊಂದಲ ಮೂಡಿಸಿದ್ದವು.
ಇವುಗಳ ಬಗ್ಗೆ ಸ್ಪಷ್ಟನೆ ನೀಡಿದ ಸರ್ಕಾರ, ವಸತಿ ಘಟಕವನ್ನು ವ್ಯಾಪಾರ ಉದ್ದೇಶದಿಂದ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ.
Claim: 18% GST on house rent for tenants #PibFactCheck
▶️Renting of residential unit taxable only when it is rented to business entity
▶️No GST when it is rented to private person for personal use
▶️No GST even if proprietor or partner of firm rents residence for personal use pic.twitter.com/3ncVSjkKxP— PIB Fact Check (@PIBFactCheck) August 12, 2022
ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮೂರು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ,
— ವ್ಯಾಪಾರ ಘಟಕವಾಗಿ ಬಾಡಿಗೆ ನೀಡಿದಾಗ ಮಾತ್ರ ವಸತಿ ಘಟಕದ ಬಾಡಿಗೆಗೆ ತೆರಿಗೆ ವಿಧಿಸಲಾಗುತ್ತದೆ.
— ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ ಜಿ ಎಸ್ ಟಿ ವಿಧಿಸಲಾಗುವುದಿಲ್ಲ.
— ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ನಿವಾಸವನ್ನು ಬಾಡಿಗೆಗೆ ಪಡೆದಿದ್ದರೂ ಸಹ ಯಾವುದೇ ಜಿ ಎಸ್ ಟಿ ಇಲ್ಲ.
ಇದರ ಜೊತೆಗೆ ವೈರಲ್ ಸಂದೇಶವಾಗಿ ಕಳುಹಿಸಲಾದ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಜನರು ಕ್ಲಿಕ್ ಮಾಡಬಾರದು ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ನಾಗರಿಕರಿಗೆ ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.