ಜು.1ರಿಂದ ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್ ವಿಲೀನ ಅಧಿಕೃತ
Team Udayavani, Jun 28, 2023, 7:00 AM IST
ಮುಂಬೈ: ಗೃಹ ನಿರ್ಮಾಣ ಕ್ಷೇತ್ರದ ಹಣಕಾಸು ಸಂಸ್ಥೆ ಎಚ್ಡಿಎಫ್ಸಿ ಮತ್ತು ದೇಶದ ಅತಿ ದೊಡ್ಡ ಖಾಸಗಿ ಸಾಲದಾತ ಸಂಸ್ಥೆ ಎಚ್ಡಿಎಫ್ಸಿ ಬ್ಯಾಂಕ್ ವಿಲೀನ ಜು.1ರಿಂದ ಅನ್ವಯವಾಗಲಿದೆ.
ಈ ಬಗ್ಗೆ ಮಾತನಾಡಿದ ಎಚ್ಡಿಎಫ್ಸಿ ಅಧ್ಯಕ್ಷ ದೀಪಕ್ ಪರೇಖ್ 2 ಸಂಸ್ಥೆಗಳ ಮಂಡಳಿಗಳ ಸದಸ್ಯರು ಜು.30ರಂದು ಸಭೆ ಸೇರಲಿದ್ದು, ಈ ವೇಳೆ ವಿಲೀನ ಪ್ರಕ್ರಿಯೆಗೆ ಅನುಮೋದನೆ ಸಿಗಲಿದೆ.
ಜು.1ರಂದು ವಿಲೀನ ಪ್ರಕ್ರಿಯೆ ಜಾರಿಗೆ ಬರಲಿದೆ. ನಿಗಮದ ಸ್ಟಾಕ್ ಡಿಲೀಸ್ಟಿಂಗ್ ಜು.13ರಿಂದ ಜಾರಿಗೆ ಬರಲಿದೆ ಎಚ್ಡಿಎಫ್ಸಿಯ ಸಿಇಒ ಕೇಕಿ ಮಿಸ್ತ್ರಿ ತಿಳಿಸಿದ್ದಾರೆ. ಎರಡೂ ವಿತ್ತೀಯ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಬಳಿಕ ಅವುಗಳು ಹೊಂದಿರುವ ಆಸ್ತಿಯ ಮೌಲ್ಯ 18 ಲಕ್ಷ ಕೋಟಿ ರೂ. ಆಗಲಿದೆ.
2022 ಏ.4ರಂದು 3.28 ಲಕ್ಷ ಕೋಟಿ ರೂ. ಮೊತ್ತದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಎಚ್ಡಿಎಫ್ಸಿ ಯ ಷೇರುಗಳನ್ನು ಖರೀದಿ ಮಾಡಿತ್ತು. ಇದು ದೇಶದ ಕಾರ್ಪೊರೇಟ್ ಕಂಪನಿಗಳ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಖರೀದಿ ಪ್ರಕ್ರಿಯೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.