![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 2, 2023, 8:00 AM IST
ನವದೆಹಲಿ/ಮುಂಬೈ: ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್ಸಿ ಖರೀದಿ ಮತ್ತು ವಿಲೀನ ಪ್ರಕ್ರಿಯೆ ಜು., ಶನಿವಾರದಿಂದಲೇ ಚಾಲ್ತಿಗೆ ಬಂದಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಚ್‌ಡಿಎಫ್ಸಿ ಬ್ಯಾಂಕ್ ಜಗತ್ತಿನ ನಾಲ್ಕನೇ ಅತ್ಯಂತ ಹೆಚ್ಚು ಮೌಲ್ಯಯುತ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟು ಮಾತ್ರವಲ್ಲದೆ, ಗೃಹ ನಿರ್ಮಾಣ ಕ್ಷೇತ್ರದಲ್ಲಿ ಮೊತ್ತಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದ್ದ ಎಚ್‌ಡಿಎಫ್ಸಿ ಹಣಕಾಸು ಸಂಸ್ಥೆಯ ಕಾರ್ಯಾವಧಿ ತೆರೆಯ ಮರೆಗೆ ಸಂದಿದೆ.
ಈ ರೀತಿಯಾಗಿ ವಿಲೀನಗೊಂಡಿರುವುದರಿಂದಾಗಿ ಅಮೆರಿಕ ಮತ್ತು ಚೀನಾದ ಹಣಕಾಸು ಸಂಸ್ಥೆಗಳಿಗೆ ಸಮಾನವಾಗಿ ಭಾರತದ ವಿತ್ತೀಯ ಸಂಸ್ಥೆಯೊಂದು ಬೆಳೆದಿರುವುದು ಹೆಗ್ಗಳಿಕೆಯೇ ಆಗಿದೆ ಎಂದು “ಬ್ಲೂಮ್‌ಬರ್ಗ್’ ವರದಿ ಮಾಡಿದೆ.
41 ಲಕ್ಷ ಕೋಟಿ:
ವಿಲೀನಗೊಂಡಿರುವ ಎರಡೂ ವಿತ್ತೀಯ ಸಂಸ್ಥೆಗಳ ಒಟ್ಟು ವಹಿವಾಟು ಪ್ರಸಕ್ತ ವರ್ಷ ಮಾ.31ರ ಅಂತ್ಯಕ್ಕೆ 41 ಲಕ್ಷ ಕೋಟಿ ರೂ. ಆಗಿದೆ. ಸದ್ಯ ವಿಲೀನ ಪ್ರಕ್ರಿಯೆ ಪೂರ್ಣಗೊಂಡು ಎರಡೂ ಸಂಸ್ಥೆಗಳ ಮೌಲ್ಯ 4.14 ಲಕ್ಷ ಕೋಟಿ ರೂ. ಆಗಿದೆ. ಎರಡೂ ಸಂಸ್ಥೆಗಳ ಲಾಭ ಮಾ.31ರ ಮುಕ್ತಾಯದಲ್ಲಿ 60 ಸಾವಿರ ಕೋಟಿ ರೂ. ಆಗಿದ್ದರೆ, ಒಟ್ಟು ಆಸ್ತಿ 18 ಲಕ್ಷ ಕೋಟಿ ರೂ. ಆಗಲಿದೆ.
ಹೆಚ್ಚಿನ ಶಾಖೆಗಳು:
ಇದೀಗ ದೇಶಾದ್ಯಂತ 8,300ಕ್ಕೂ ಅಧಿಕ ಶಾಖೆಗಳನ್ನು ಹೊಂದಿ, ದೇಶದ ದೊಡ್ಡ ಬ್ಯಾಂಕಿಂಗ್ ಜಾಲ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಜತೆಗೆ 1,77,000 ಮಂದಿ ಉದ್ಯೋಗಿಗಳೂ ಇದ್ದಾರೆ.
12 ಕೋಟಿ ಗ್ರಾಹಕರು:
ಬ್ಯಾಂಕ್‌ನ ಗ್ರಾಹಕರ ಸಂಖ್ಯೆ 12 ಕೋಟಿ ಆಗಲಿದೆ. ಅಂದರೆ ಜರ್ಮನಿಯ ಒಟ್ಟು ಜನಸಂಖ್ಯೆಯನ್ನೂ ಅದು ಮೀರಿಸಿದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ. ಜಗತ್ತಿನ ಪ್ರಮುಖ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಾಗಿರುವ ಜೆ.ಪಿ.ಮಾರ್ಗನ್ ಚೇಸ್ ಆ್ಯಂಡ್ ಕೊ, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್, ಬ್ಯಾಂಕ್ ಆಫ್ ಅಮೆರಿಕ ಕಾರ್ಪ್‌ಗಳಿಗೆ ಸಮನಾಗಿ ವಿಲೀನಗೊಂಡ ಸಂಸ್ಥೆ ನಿಲ್ಲಲಿದೆ. ದೇಶದ ಬ್ಯಾಂಕ್‌ಗಳಾಗಿರುವ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳನ್ನು ಕೂಡ ಮಾರುಕಟ್ಟೆ ಬಂಡವಾಳದಲ್ಲಿ ಹಿಂದಿಕ್ಕಿದೆ.
ಎಚ್‌ಡಿಎಫ್ಸಿ ಸೆಕ್ಯುರಿಟೀಸ್ ಲಿ., ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್ ಲಿ., ಎಚ್‌ಡಿಎಫ್ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂ.ಲಿ., ಎಚ್‌ಡಿಎಫ್ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂ. ಲಿ., ಎಚ್‌ಡಿಎಫ್ಸಿ ಕ್ಯಾಪಿಟಲ್ ಅಡ್ವೆ„ಸರ್ಸ್ ಲಿಮಿಟೆಡ್ ಮತ್ತು ಎಚ್‌ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂ. ಲಿ ಕೂಡ ಈ ಪ್ರಕ್ರಿಯೆಯಲ್ಲಿ ಒಳಗೊಂಡಿವೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.