ಎಚ್‌ಡಿಎಫ್ ಸಿ ಸಂಸ್ಥೆಗಳ ವಿಲೀನ; ಇತಿಹಾಸದಲ್ಲೇ ಅತಿದೊಡ್ಡ ಪ್ರಕ್ರಿಯೆ
Team Udayavani, Apr 5, 2022, 6:40 AM IST
ಹೊಸದಿಲ್ಲಿ: ದೇಶದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ವಿಲೀನ ವೆಂಬಂತೆ, ಭಾರತದ ಹೌಸಿಂಗ್ ಫೈನಾನ್ಸ್ ಕಂಪೆನಿಯಾದ ಎಚ್‌ಡಿಎಫ್ ಸಿ ಲಿಮಿಟೆಡ್ ಸದ್ಯದಲ್ಲೇ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್ ಸಿ ಯೊಂದಿಗೆ ವಿಲೀನಗೊಳ್ಳಲಿದೆ.
ಈ ಡೀಲ್ ಅಂತಿಮಗೊಂಡರೆ, ಮಾರು ಕಟ್ಟೆ ಬಂಡವಾಳದ ವಿಚಾರದಲ್ಲಿ ಭಾರತದ 3ನೇ ಅತಿದೊಡ್ಡ ಕಂಪನಿ ಎಂಬ ಖ್ಯಾತಿಗೆ ಎಚ್‌ಡಿಎಫ್ ಸಿ ಪಾತ್ರವಾಗಲಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಬಂಡವಾಳ ಹೊಂದಿರುವ ಜಗತ್ತಿನ ಟಾಪ್ 100 ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂಗಳಿಸಲಿದೆ.
ವಿಲೀನದ ಬಳಿಕ, ಎಚ್‌ಡಿಎಫ್ ಸಿ ಬ್ಯಾಂಕ್ ಶೇ.100ರಷ್ಟು ಸಾರ್ವಜನಿಕ ಷೇರುದಾರರನ್ನು ಹೊಂದಿದಂತಾಗಲಿದೆ. ಅಲ್ಲದೇ, ಎಚ್‌ಡಿಎಫ್ ಸಿ ಲಿ.ನ ಪ್ರಸ್ತುತ ಷೇರುದಾರರಿಗೆ ಎಚ್‌ಡಿಎಫ್ ಸಿ ಬ್ಯಾಂಕಿನ ಶೇ.41ರಷ್ಟು ಷೇರುಗಳು ಜಮೆಯಾಗಲಿದೆ.
ಅಂದರೆ, ಎಎಚ್‌ಡಿಎಫ್ ಸಿ ಲಿ.ನ ಪ್ರತಿ ಷೇರುದಾರರು ತಾವು ಹೊಂದಿರುವ ಪ್ರತಿ 25 ಷೇರುಗಳಿಗೆ ಎಎಚ್‌ಡಿಎಫ್ ಸಿ ಬ್ಯಾಂಕಿನ 42 ಷೇರುಗಳನ್ನು ಪಡೆಯಲಿದ್ದಾರೆ.
2023ರ ಏಪ್ರಿಲ್‌ನಲ್ಲಿ ಆರಂಭವಾಗುವ ಹಣಕಾಸು ವರ್ಷದ ಎರಡು ಅಥವಾ ಮೂರನೇ ತ್ತೈಮಾಸಿಕದಲ್ಲಿ ಈ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಆಸ್ತಿ ಮೌಲ್ಯವೆಷ್ಟು?: ಪ್ರಸ್ತುತ ಎಚ್‌ಡಿಎಫ್ ಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ಒಟ್ಟು ಆಸ್ತಿ ಮೌಲ್ಯ 6.23 ಲಕ್ಷ ಕೋಟಿ ರೂ.ಗಳಾಗಿದ್ದರೆ, ಎಚ್‌ಡಿಎಫ್ ಸಿ ಬ್ಯಾಂಕ್ 19.38 ಲಕ್ಷ ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದೆ.
ಹೀಗಾಗಿ, ಈ ಎರಡೂ ಕಂಪನಿ ಗಳ ಒಟ್ಟು ಮೌಲ್ಯ 25.61 ಲಕ್ಷ ಕೋಟಿ ರೂ.ಗಳಾಗಲಿವೆ. ಇನ್ನು, ಎಚ್‌ಡಿಎಫ್ ಸಿ ಬ್ಯಾಂಕು 6.8 ಕೋಟಿ ಗ್ರಾಹಕರನ್ನು ಹೊಂದಿದ್ದು, 3 ಸಾವಿರಕ್ಕೂ ಹೆಚ್ಚು ನಗರ ಗಳಲ್ಲಿ 6,342 ಶಾಖೆಗಳನ್ನು ಹೊಂದಿದೆ.
ಅನುಕೂಲತೆಗಳೇನು?
-ಎಚ್‌ಡಿಎಫ್ ಸಿ ಹೌಸಿಂಗ್ ಫೈನಾನ್ಸ್‌ನ ಶೇ.70ರಷ್ಟು ಗ್ರಾಹಕರು ಎಚ್‌ಡಿಎಫ್ ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ. ವಿಲೀನದಿಂದಾಗಿ ಬ್ಯಾಂಕ್ ಗ್ರಾಹಕರ ಸಂಖ್ಯೆ ಏರಿಕೆಯಾಗಲಿದೆ.
-ಸಂಸ್ಥೆಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಲಿದೆ
-ಎಫ್ ಪಿಐ ತಮ್ಮ ಹೂಡಿಕೆಯ ಪ್ರಮಾಣವನ್ನು ಇನ್ನೂ ಶೇ.7ರಷ್ಟು ಹೆಚ್ಚಿಸಿಕೊಳ್ಳಬಹುದು.
60 ಸಾವಿರ ದಾಟಿದ ಬಿಎಸ್‌ಇ ಸೂಚ್ಯಂಕ
ಬಾಂಬೆ ಷೇರುಪೇಟೆಯಲ್ಲಿ ಸೂಚ್ಯಂಕ 1,335.05 ಪಾಯಿಂಟ್ಲ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 60,611.74ರಲ್ಲಿ ಮುಕ್ತಾಯವಾಗಿದೆ. ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್ ಮತ್ತು ವಿತ್ತೀಯ ಸಂಸ್ಥೆಗಳ ಷೇರುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದ ರಿಂದ ಈ ಬೆಳವಣಿಗೆಯಾಗಿದೆ. ಎಚ್‌ಡಿಎಫ್ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್ ಷೇರು ಗಳೂ ಕೂಡ ಕ್ರಮವಾಗಿ ಶೇ.9.97, ಶೇ.9.30ರಷ್ಟು ಬೇಡಿಕೆ ಕಂಡವು. ನಿಫ್ಟಿ ಸೂಚ್ಯಂಕ 382.95 ಪಾಯಿಂಟ್ಸ್ ಏರಿಕೆಯಾಗುವುದರ ಮೂಲಕ 18,053.40ರಲ್ಲಿ ಮುಕ್ತಾಯ ವಾಗಿದೆ. ಐರೋಪ್ಯ ಒಕ್ಕೂಟ, ಶಾಂಘೈ, ಸಿಯೋಲ್‌ನ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ಕೂಡ ವಹಿವಾಟು ಉತ್ತಮವಾಗಿಯೇ ನಡೆದಿದೆ. ಎಚ್‌ಡಿಎಫ್ ಸಿ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್ ವಿಲೀನ ಘೋಷಣೆ ಮಾಡಿದ್ದರಿಂದ ಸೆನ್ಸೆಕ್ಸ್ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.