ಜನವರಿಯಿಂದ ಹೆಚ್ಚಳವಾಗಲಿದೆ ಹೀರೋ ಬೈಕ್ – ಸ್ಕೂಟರ್ ಬೆಲೆ
Team Udayavani, Dec 9, 2019, 8:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶದ ಅತೀದೊಡ್ಡ ಮೋಟಾರು ಸೈಕಲ್ ಮತ್ತು ಸ್ಕೂಟರ್ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಲಿಮಿಟೆಡ್ ತನ್ನ 2020ರ ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಇಂದು ಘೋಷಣೆ ಮಾಡಿದೆ.
ತನ್ನ ಎಲ್ಲಾ ಮೋಟಾರು ಬೈಕುಗಳು ಮತ್ತು ಸ್ಕೂಟರ್ ಗಳ ಬೆಲೆಯನ್ನು ಸುಮಾರು 2000 ರೂಪಾಯಿಗಳವರೆಗೆ ಹೆಚ್ಚಿಸುವುದಾಗಿ ಸಂಸ್ಥೆಯು ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೊಂಡಿದೆ. ದೇಶದಲ್ಲಿನ ಹಲವಾರು ಕಾರು ಮತ್ತು ಬೈಕ್ ತಯಾರಿ ಕಂಪೆನಿಗಳು ಡಿಸೆಂಬರ್ ತಿಂಗಳಿನಲ್ಲಿ ವರ್ಷಾಂತ್ಯದ ಮಾರಾಟವನ್ನು ಉತ್ತೇಜಿಸುವ ಉದ್ದೇಶದಿಂದ ಗ್ರಾಹಕರನ್ನು ಸೆಳೆಯಲು ಜನವರಿಯಿಂದ ವಾಹನಗಳ ಮಾರಾಟ ಬೆಲೆ ಹೆಚ್ಚಳವಾಗಲಿದೆ ಎಂಬ ಪ್ರಕಟನೆಯನ್ನು ಕಳೆದ ಕೆಲವು ದಿನಗಳಿಂದ ಮಾಡುತ್ತಾ ಬಂದಿವೆ. ಇದೀಗ ಈ ಸಾಲಿಗೆ ಹೀರೋ ಮೋಟೋ ಕಾರ್ಪ್ ಸಹ ಸೇರ್ಪಡೆಯಾದಂತಾಗಿದೆ.
ಕಳೆದ ವಾರವಷ್ಟೇ ದೇಶದ ಅತೀದೊಡ್ಡ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಝುಕಿ ತನ್ನ ಉತ್ಪನ್ನಗಳ ಬೆಲೆಯನ್ನು ಜನವರಿ ತಿಂಗಳಿನಿಂದ ಹೆಚ್ಚಿಸುವುದಾಗಿ ಪ್ರಕಟನೆ ಹೊರಡಿಸಿತ್ತು. ಆದರೆ ತನ್ನ ಕಾರುಗಳ ಬೆಲೆ ಏರಿಕೆಯ ನಿರ್ಧಿಷ್ಟ ದಿನಾಂಕವನ್ನು ಅದು ಪ್ರಕಟಿಸಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.