ಹಬ್ಬದ ಸೀಸನ್ ಲಕ್ಷ, ಲಕ್ಷ ರೂ.ಡಿಸ್ಕೌಂಟ್; ಯಾವ ಕಾರಿನ ಬೆಲೆ ಎಷ್ಟು ಅಗ್ಗವಾಗಿದೆ ಗೊತ್ತಾ?
Team Udayavani, Sep 16, 2019, 12:45 PM IST
ನವದೆಹಲಿ:ದೇಶಿ ಆಟೋ ಮೊಬೈಲ್ ಕ್ಷೇತ್ರಗಳಲ್ಲಿ ವಾಹನ ಮಾರಾಟ ಕುಸಿತ ಕಾಣುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಬ್ಬದ ಸೀಸನ್ ಆರಂಭದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಟಾಟಾ ಮೋಟಾರ್ಸ್, ಮಾರುತಿ ಸುಝುಕಿ, ಮಹೀಂದ್ರಾ ಸೇರಿದಂತೆ ಹಲವು ಕಾರು ತಯಾರಿಕಾ ಕಂಪನಿಗಳು ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ್ದವು. ಇದೀಗ ಜಪಾನ್ ಮೂಲದ ಐಶಾರಾಮಿ ಕಾರು ತಯಾರಿಕ ಸಂಸ್ಥೆಯಾದ ಹೋಂಡಾ ಭರ್ಜರಿ ದರ ಇಳಿಕೆ ಘೋಷಿಸಿದೆ.
ಹೋಂಡಾ ಸಿವಿಕ್ ಮತ್ತು ಹೋಂಡಾ ಸಿಆರ್-ವಿ ಕಾರು ಕೊಳ್ಳುವವರಿಗೆ ಭರ್ಜರಿ ದರ ಕಡಿತದ ಆಫರ್ ನೀಡಿದೆ.
ಹೋಂಡಾ ಸಿವಿಕ್ ಗೆ 2.5 ಲಕ್ಷ ರೂಪಾಯಿ ಭರ್ಜರಿ ಡಿಸ್ಕೌಂಟ್:
ಈ ವರ್ಷವಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೋಂಡಾ ಸಿವಿಕ್ ಪೆಟ್ರೋಲ್ ಕಾರಿನ ಬೆಲೆಯಲ್ಲಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಡೀಸೆಲ್ ಕಾರುಗಳ ಮೇಲೂ 2.5 ಲಕ್ಷ ಡಿಸ್ಕೌಂಟ್ ಇದ್ದು, ಪೆಟ್ರೋಲ್ ಕಾರು ಎಕ್ಸ್ ಚೇಂಚ್ ಮಾಡಿಕೊಳ್ಳುವುದಿದ್ದರೆ ಹೆಚ್ಚುವರಿಯಾಗಿ 25 ಸಾವಿರ ರೂಪಾಯಿ ಬೋನಸ್ ಇರುವುದಾಗಿ ಹೋಂಡಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ಶ್ರೇಣಿಯಲ್ಲಿ ಹೋಂಡಾ ಸಿವಿಕ್ ಕಾರು ಲಭ್ಯವಿದ್ದು, ಇದರ ಪೆಟ್ರೋಲ್ ಕಾರಿನ ಮಾರುಕಟ್ಟೆ ಬೆಲೆ 17.70 ಲಕ್ಷದಿಂದ 21 ಲಕ್ಷ ರೂಪಾಯಿ ಇದೆ. ಹೋಂಡಾ ಸಿವಿಕ್ ಡೀಸೆಲ್ ಕಾರುಗಳ ಬೆಲೆ 20.50ಲಕ್ಷದಿಂದ 22.30 ಲಕ್ಷ ರೂಪಾಯಿ.
10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಹೋಂಡಾ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ವಿಭಾಗದಲ್ಲಿ 6 ಸ್ಪೀಡ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಗಳು ಆಯ್ಕೆ ಮಾಡಬಹುದಾಗಿದೆ. ಎಲ್ ಇಡಿ ಟೈಲ್ಸ್ ಬೆಳಕು, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸೌಲಭ್ಯ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 8 ಏರ್ ಬ್ಯಾಗ್ ವ್ಯವಸ್ಥೆ ಸೌಲಭ್ಯ ಇದೆ.
ಹೋಂಡಾ ಸಿಆರ್ ವಿಗೆ 4 ಲಕ್ಷ ರೂಪಾಯಿ ಡಿಸ್ಕೌಂಟ್:
ಕಾರು ತಯಾರಿಕೆ ಕಂಪನಿಗಳಿಗೆ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಹೆಚ್ಚಿಸಿಕೊಳ್ಳಲು ಒದಗಿ ಬರುವ ಸುಸಂದರ್ಭವಾಗಿದೆ. ಈ ಹಿನ್ನೆಲೆಯಲ್ಲಿ ಹೋಂಡಾ ಸಿಆರ್ ವಿ ಡೀಸೆಲ್ ಕಾರಿನ ಬೆಲೆಯಲ್ಲಿ 4 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಬಿಎಸ್ 4 (ಭಾರತ್ ಸ್ಟೇಜ್)ನ ವಾಹನಗಳ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಹೊಂದಿರುವುದಾಗಿ ವಾಹನ ತಯಾರಿಕೆ ಸಂಸ್ಥೆಗಳಿ ನಿರೀಕ್ಷೆ ಹೊಂದಿವೆ.
ಪ್ರಸ್ತುತ ಹೋಂಡಾ ಮಾರ್ಕೆಟ್ ಶೇರುಗಳು ಶೇ.4.65ರಷ್ಟಿದ್ದು, ಒಂದು ವರ್ಷದ ಹಿಂದೆ ಶೇ.0.84ರಷ್ಟು ಕುಸಿತ ಕಂಡಿತ್ತು. ಇದೀಗ ಭಾರೀ ರಿಯಾಯ್ತಿ ಘೋಷಣೆಯಿಂದ ಮಾರುಕಟ್ಟೆ ಶೇರುಗಳ ಮೌಲ್ಯ ಹೆಚ್ಚಳವಾಗಲು ನೆರವಾಗಲಿದೆ ಎಂಬುದು ಹೋಂಡಾ ಕಂಪನಿಯ ಲೆಕ್ಕಚಾರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.