ಕೋವೊವ್ಯಾಕ್ಸ್ ಸಪ್ಟೆಂಬರ್ ನಲ್ಲಿ ಬಳಕೆಗೆ ಲಭ್ಯ : ಪೂನವಾಲಾ
Team Udayavani, Mar 28, 2021, 10:46 AM IST
ನವ ದೆಹಲಿ : ಕೋವಿಡ್ ನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕೋವಿಡ್ ಲಸಿಕೆಗೆ ದೇಶದಲ್ಲಿ ಮತ್ತು ವಿದೇಶದಲ್ಲಿ ಬೇಡಿಕೆ ಹೆಚ್ಚಿದೆ.
ಕೋವೊವ್ಯಾಕ್ಸ್ ಗಾಗಿ ಕಂಪನಿಯು 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ ಮತ್ತು ಸೆಪ್ಟೆಂಬರ್ ವೇಳೆಗೆ ಲಸಿಕೆ ಬಿಡುಗಡೆ ಮಾಡುವ ಭರವಸೆ ಇದೆ ಎಂದು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಆದರ್ ಪೂನವಾಲಾ ಮಾಹಿತಿ ನೀಡಿದ್ದಾರೆ.
ಲಸಿಕೆಯನ್ನು ನೊವಾವಾಕ್ಸ್ ಮತ್ತು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದ ಮೂಲಕ ತಯಾರಿಸಲಾಗುತ್ತದೆ … ಸೆಪ್ಟೆಂಬರ್ 2021 ರೊಳಗೆ ಲಸಿಕೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಇದ್ದೇವೆ. ಆ ಮುಖವಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪೂನವಾಲಾ ಟ್ವೀಟ್ ಮಾಡಿದ್ದಾರೆ.
ಓದಿ : OTT ಅವರು ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಪರಿಗಣಿಸಲಿಲ್ಲ – Rishab Shetty
ಪೂನವಾಲ್ಲಾ ನೀಡಿದ ಹೊಸ ಟೈಮ್ ಲೈನ್ ಅದರ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದನ್ನು ಸೂಚಿಸುತ್ತದೆ.
ಜನವರಿ 30 ರಂದು, ನೊವಾವಾಕ್ಸ್ ಮೊದಲ ಮಧ್ಯಂತರ ಪರಿಣಾಮಕಾರಿತ್ವದ ಡೇಟಾವನ್ನು ಪ್ರಕಟಿಸಿದ ನಂತರ, ವಿಶ್ವದ ಅತಿದೊಡ್ಡ ಲಸಿಕೆ ತಯಾರಕರ ಸಿಇಒ ಜೂನ್ ವೇಳೆಗೆ ಲಸಿಕೆಯನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಹೇಳಿದ್ದರು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ, ಬ್ಲೂಮ್ ಬರ್ಗ್ ಇಕ್ವಿಟಿ ಶೃಂಗಸಭೆಯಲ್ಲಿ, ಆಗಸ್ಟ್ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
ಲಸಿಕೆ ಬಹುನಿರೀಕ್ಷಿತ ಲಸಿಕೆಗಳಲ್ಲಿ ಒಂದಾಗಿದೆ.
ಕೋವೊವ್ಯಾಕ್ಸ್ ಯುಎಸ್ ಮೂಲದ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ಸೀರಮ್ ಇನ್ ಸ್ಟೀಟ್ಯೂಟ್ ನ ಆವೃತ್ತಿಯಾಗಿದೆ, ಇದು ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆಸಿದ 3 ನೇ ಹಂತದ ಪ್ರಯೋಗದಲ್ಲಿ 96% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಸಂಸ್ಥೆ ತಿಳಿಸಿತ್ತು.
ಇನ್ನು, ಏಪ್ರಿಲ್ ನಿಂದ ಕಂಪನಿಯು ಲಸಿಕೆಯನ್ನು ದಾಸ್ತಾನು ಮಾಡಲು ಪ್ರಾರಂಭಿಸುತ್ತದೆ ಎಂದು ಪೂನವಾಲ್ಲಾ ಈ ಹಿಂದೆ ಹೇಳಿದ್ದರು. ಸೀರಮ್ ಇನ್ಸ್ಟಿಟ್ಯೂಟ್ 1 ಬಿಲಿಯನ್ ಡೋಸ್ ಲಸಿಕೆಯನ್ನು ತಯಾರಿಸಲಿದ್ದು, ಇದನ್ನು ಭಾರತ ಮತ್ತು ಕೊವಾಕ್ಸ್ ಎರಡಕ್ಕೂ ಪೂರೈಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.