ನಾಳೆಯಿಂದ ತೆರಿಗೆಯಲ್ಲಿ ಭಾರೀ ಬದಲಾವಣೆ
Team Udayavani, Aug 31, 2019, 5:30 AM IST
ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರಗಳ ಬದಲಾವಣೆಯ ನಡುವೆಯೇ ರವಿವಾರದಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳು ಆಗಲಿವೆ. ಕೆಲ ಕ್ಷೇತ್ರಗಳಲ್ಲಿ ಟಿಡಿಎಸ್ ಅನ್ನು ಚಾಲ್ತಿಗೆ ತಂದಿದ್ದರೆ, ಆಧಾರ್ ಜತೆಗೆ ಹೊಂದಾಣಿಕೆ ಮಾಡದ ಪ್ಯಾನ್ ಕಾರ್ಡ್ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ.
ಏನೇನು ಬದಲಾವಣೆ?
1 ಸ್ಥಿರಾಸ್ತಿ ಖರೀದಿ ವೇಳೆ ಟಿಡಿಎಸ್ ಕಡಿತ
ಇದುವರೆಗೆ 50 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಖರೀದಿ ಮಾಡುವ ವೇಳೆ ಯಷ್ಟೇ ಖರೀದಿದಾರ ಟಿಡಿಎಸ್ ಪಾವತಿಸ ಬೇಕಿತ್ತು. ಆದರೆ, ಇನ್ನು ಮುಂದೆ ಕ್ಲಬ್, ಪಾರ್ಕಿಂಗ್, ವಿದ್ಯುತ್, ನೀರಿನ ಶುಲ್ಕದಂಥ ಸೇವೆಗಳಿಗೆ ಹಣ ಪಾವತಿಸುವಾಗಲೂ ಟಿಡಿಎಸ್ ಅನ್ನು ಕಡಿತಮಾಡಿಕೊಳ್ಳಲಾಗುತ್ತದೆ.
2 ಸಣ್ಣ ಪುಟ್ಟ ಹಣ ವರ್ಗಾವಣೆ ಮೇಲೂ ಕಣ್ಣು
ಇದುವರೆಗೆ ಖಾತೆಯೊಂದರಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹಣದ ವಹಿವಾಟು ನಡೆದಿದ್ದರೆ ಮಾತ್ರ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಅಂದರೆ, ಈ ಮಿತಿ 50 ಸಾವಿರ ರೂ.ಗಳಿಗೆ ನಿಗದಿ ಮಾಡಲಾಗಿತ್ತು. ಆದರೆ, ಇನ್ನು ಮುಂದೆ ಸಣ್ಣಪುಟ್ಟ ಹಣ ವರ್ಗಾವಣೆ ವಿವರಗಳನ್ನೂ ಐಟಿ ಇಲಾಖೆ ಕೇಳಿದಲ್ಲಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ನೀಡಬೇಕಾಗಿದೆ. ಕಳೆದ ಬಜೆಟ್‌ನಲ್ಲಿ ಈ ಸಂಬಂಧ ನಿಯಮ ರೂಪಿಸಲಾಗಿದೆ.
3 ದುಬಾರಿ ಮದುವೆಗೂ ಟಿಡಿಎಸ್
ಸಿರಿವಂತಿಕೆ ತೋರಿಸಿಕೊಳ್ಳುವ ಸಲುವಾಗಿ ಭಾರೀ ವೆಚ್ಚ ಮಾಡಿ ಮದುವೆ ಮಾಡಿದರೆ, ಶೇ.5 ತೆರಿಗೆ ಪಕ್ಕಾ! ಹೌದು, ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬದ ವ್ಯಕ್ತಿಯೊ ಬ್ಬರು ಮನೆ ನವೀಕರಣ ಮಾಡುವ ಅಥವಾ ಮದುವೆ ಮಾಡಿಸುವ ಇವೆಂಟ್ ಮ್ಯಾನೇಜ್‌ಮೆಂಟ್ ಗುತ್ತಿಗೆದಾರನಿಗೆ ವರ್ಷದಲ್ಲಿ 50 ಲಕ್ಷ ರೂ.ಗಿಂತ ಹೆಚ್ಚು ಹಣ ಪಾವತಿಸಿದಲ್ಲಿ ಶೇ.5 ಟಿಡಿಎಸ್ ನೀಡಬೇಕಾಗುತ್ತದೆ. ಆದಾಯ ತೆರಿಗೆ ಕಾನೂನಿನಲ್ಲಿ ಈ ನಿಯಮ ಹೊಸದಾಗಿ ಸೇರಿಸಲಾಗಿದೆ.
4 ಆಧಾರ್ ಜೋಡಣೆಯಾಗದಿದ್ದರೆ ಪ್ಯಾನ್ ಅಸ್ತಿತ್ವ ನಾಶ
ಈ ತನಕವೂ ಆಧಾರ್ ಜತೆಗೆ ಪ್ಯಾನ್ ಜೋಡಣೆ ಮಾಡಿಕೊಳ್ಳಲಿದ್ದರೆ, ಶನಿವಾರವೇ ಮಾಡಿಕೊಳ್ಳಿ. ಏಕೆಂದರೆ, ಭಾನುವಾರದಿಂದ ಚಾಲ್ತಿಗೆ ಬಂದಿರುವ ಹೊಸ ನಿಯಮದಂತೆ ಆಧಾರ್ ಜತೆಗೆ ಜೋಡಿಸದ ಪ್ಯಾನ್ ಅಸ್ತಿತ್ವ ವನ್ನೇ ಕಳೆದುಕೊಳ್ಳಲಿದೆ. ಆದರೆ, ಪ್ಯಾನ್ ಕಳೆದುಕೊಂಡ ವ್ಯಕ್ತಿ ಮುಂದೇನು ಮಾಡಬೇಕು ಎಂಬ ಬಗ್ಗೆ ಕೇಂದ್ರ ಸರಕಾರ ಏನನ್ನೂ ಹೇಳಿಲ್ಲ.
5 ಪ್ಯಾನ್ ಬದಲಿಗೆ ಆಧಾರ್ ಬಳಕೆ
ಪ್ಯಾನ್ ಇಲ್ಲದಿದ್ದರೂ ಚಿಂತೆ ಬೇಡ. ಏಕೆಂದರೆ, ಕೆಲವೊಂದು ವಹಿವಾಟುಗಳಿಗೆ ಭಾನುವಾರದಿಂದ ಪ್ಯಾನ್ ಬದಲಿಗೆ ಆಧಾರ್ ಅನ್ನು ಬಳಕೆ ಮಾಡಬಹುದು. ಈ ನಿಯಮವನ್ನೂ ಕಳೆದ ಬಜೆಟ್‌ನಲ್ಲಿ ನಿರ್ಮಲಾ ಸೀತಾ ರಾಮನ್ ಜಾರಿಗೆ ತಂದಿದ್ದಾರೆ.
6 ಜೀವ ವಿಮೆಗೂ ಟಿಡಿಎಸ್
ವಿಮೆಯ ಮೆಚೂÂರಿಟಿ ಮೊತ್ತವು ನಿಮ್ಮ ಕೈಸೇರಿದಾಗ, ಅದರ ನಿವ್ವಳ ಆದಾಯದ ಮೇಲೆ ಶೇ.5 ಟಿಡಿಎಸ್ ಕಡಿತಗೊಳ್ಳುತ್ತದೆ. ಇಲ್ಲಿ ನೀವು ಪಾವತಿಸಿದ ಒಟ್ಟು ವಿಮೆ ಕಂತುಗಳ ಮೊತ್ತವನ್ನು ನಿಮ್ಮ ಕೈಸೇರಿದ ಮೊತ್ತದಿಂದ ಕಳೆದಾಗ ಬರುವ ಮೊತ್ತವನ್ನು ನಿವ್ವಳ ಆದಾಯ ಎಂದು ಪರಿಗಣಿಸಲಾಗುತ್ತದೆ. ಆ ಆದಾಯದ ಮೇಲೆ ಶೇ.5 ಟಿಡಿಎಸ್ ಕಡಿತ ಗೊಳಿಸ ಲಾಗುತ್ತದೆ.
7 ನಗದು ವಿತ್‌ಡ್ರಾವಲ್ ವೇಳೆ ಟಿಡಿಎಸ್
ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಬ್ಯಾಂಕ್ ಖಾತೆಯಿಂದ ವರ್ಷವೊಂದರಲ್ಲಿ 1 ಕೋಟಿ ರೂ.ಗಳಿಗೂ ಹೆಚ್ಚು ಹಣ ವಿತ್‌ಡ್ರಾ ಮಾಡಿದಲ್ಲಿ ಶೇ.2 ಟಿಡಿಎಸ್ ಪಾವತಿಸಬೇಕು. ಜನರಲ್ಲಿ ನಗದು ಹರಿದಾಡುವುದನ್ನು ತಪ್ಪಿಸುವ ಸಲು ವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.