ಐಬಿಎಂ ಇಂಡಿಯಾ ಆಡಳಿತ ನಿರ್ದೇಶಕರಾಗಿ ಕರಣ್ ಬಾಜ್ವಾ ನೇಮಕ
Team Udayavani, Jan 4, 2017, 3:14 PM IST
ಹೊಸದಿಲ್ಲಿ : ಐಬಿಎಂ ಇಂಡಿಯಾ ಇದರ ಆಡಳಿತ ನಿರ್ದೇಶಕರನ್ನಾಗಿ ಕರಣ್ ಬಾಜ್ವಾ ಅವರನ್ನು ನೇಮಿಸಲಾಗಿದೆ. ಬಾಜ್ವಾ ಅವರು ವನಿತಾ ನಾರಾಯಣ ಅವರ ಉತ್ತರಾಧಿಕಾರಿಯಾಗಿದ್ದಾರೆ. ವನಿತಾ ನಾರಾಯಣ ಅವರನ್ನು ಐಬಿಎಂ ಇಂಡಿಯಾದ ಅಧ್ಯಕ್ಷ ಹುದ್ದೆಗೆ ಏರಿಸಲಾಗಿದೆ.
ಬಾಜ್ವಾ ಅವರು ಕಳೆದ ವರ್ಷ ಐಬಿಎಂನ ಏಶ್ಯ ಪೆಸಿಫಿಕ್ ವಲಯದ ವ್ಯೂಹಗಾರಿಕೆ ಕಾರ್ಯನಿರ್ವಾಹಕರಾಗಿ ಸೇರಿದ್ದರು. ಹಿಂದೆ ಇವರು ಮೈಕ್ರೋಸಾಫ್ಟ್ ಇಂಡಿಯಾ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. 2001-05ರ ಅವಧಿಯಲ್ಲಿ ಇವರು ಸಿಂಗಾಪುರದಲ್ಲಿ ಐಬಿಎಂ ನ ನೆಟ್‌ವರ್ಕಿಂಗ್ ಉದ್ಯಮದೊಂದಿಗೆ ಇದ್ದರು.
ಸರಕಾರಗಳು ಹಾಗೂ ಔದ್ಯಮಿಕ ಸಂಸ್ಥೆಗಳಿಗೆ ಡಿಜಿಟಲ್ ಟ್ರಾನ್‌ಫಾರ್ಮೇಶನ್ ನಲ್ಲಿ ನೆರವಾಗುವಲ್ಲಿ ಮುಂಚೂಣಿಯಲ್ಲಿರುವ ಐಬಿಎಂ ಗೆ ಈ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು ಐಬಿಎಂ ಜತೆಗೆ ಕೆಲಸ ಮಾಡುವ ಅವಕಾಶಕ್ಕಾಗಿ ಸಂತಸವಿದೆ ಎಂದು ಬಾಜ್ವಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.