ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ


Team Udayavani, Mar 30, 2020, 4:02 PM IST

ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ

ಮುಂಬಯಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ದೇಶಕ್ಕೆ ದೇಶವೇ 21 ದಿನಗಳ ಲಾಕ್ ಡೌನ್ ಸ್ಥಿತಿಗೆ ಒಳಗಾಗಿರುವ ಈ ಸಂದರ್ಭದಲ್ಲಿ ಅವಶ್ಯಕ ಸೇವೆಗಳನ್ನು ಮಾತ್ರವೇ ಮುಂದುವರೆಸಲು ಸರಕಾರ ಅನುಮತಿ ನೀಡಿದೆ. ಅವಶ್ಯಕ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಗಳೂ ಒಳಗೊಳ್ಳುತ್ತವೆ.

ಆದರೆ ಬ್ಯಾಂಕಿಗೆ ಗ್ರಾಹಕರು ಬಂದಲ್ಲಿ ಆ ಮೂಲಕ ಈ ವೈರಸ್ ಹಬ್ಬುವ ಭೀತಿ ಇಲ್ಲದಿಲ್ಲ. ಹಾಗಾಗಿಯೇ ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚು ಬಳಸುವಂತೆ ವಿನಂತಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಐಸಿಐಸಿಐ ಬ್ಯಾಂಕ್ ವಾಟ್ಸ್ಯಾಪ್ ಮೂಲಕ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.

ಈ ನೂತನ ವಾಟ್ಸ್ಯಾಪ್ ಸೇವೆಗಳ ಮೂಲಕ ಪ್ರತೀನಿತ್ಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವ ತನ್ನ ಗ್ರಾಹಕರು ಈ ಲಾಕ್ ಡೌನ್ ಅವಧಿಯಲ್ಲಿ ತಾವಿರುವ ಸ್ಥಳದಿಂದಲೇ ಸುಲಭವಾಗಿ ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಅನುಕೂಲವಾಗಲಿದೆ. ಇದರಲ್ಲಿ ಬ್ಯಾಂಕ್ ಬ್ಯಾಲೆನ್ಸ್ ನೋಡುವುದು, ಕೊನೆಯ ಮೂರು ವ್ಯವಹಾರಗಳ ವಿವರಗಳನ್ನು ಪಡೆದುಕೊಳ್ಳುವುದು, ಕ್ರೆಡಿಟ್ ಕಾರ್ಡ್ ಮಿತಿಯ ವಿವರಗಳನ್ನು ಪಡೆದುಕೊಳ್ಳುವುದು, ಈ ಮೊದಲೇ ಜಾರಿಯಾಗಿರುವ ಸಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು ಮತ್ತು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬ್ಲಾಕ್ ಆಥವಾ ಅನ್ ಬ್ಲಾಕ್ ಮಾಡಿಕೊಳ್ಳುವ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳುವುದು ಹೇಗೆ?
1. ಐಸಿಐಸಿಐ ಬ್ಯಾಂಕಿನ ಅ‍ಧಿಕೃತ ವಾಟ್ಸ್ಯಾಪ್ ನಂಬರನ್ನು (9324953001) ಗ್ರಾಹಕರು ಸೇವ್ ಮಾಡಿಕೊಳ್ಳಬೇಕು. ಬಳಿಕ <Hi> ಎಂಬ ಸಂದೇಶವನ್ನು ಗ್ರಾಹಕರು ತಾವು ಬ್ಯಾಂಕಿಗೆ ನೀಡಿರುವ ಮೊಬೈಲ್ ನಂಬರಿನಿಂದಲೇ ಈ ನಂಬರಿಗೆ ಕಳುಹಿಸಬೇಕು. ಬಳಿಕ ಲಭ್ಯವಿರುವ ಸೇವಾ ವಿವರಗಳೊಂದಿಗೆ ನಿಮ್ಮ ಮೊಬೈಲ್ ಗೆ ಬ್ಯಾಂಕಿನಿಂದ ಪ್ರತಿಕ್ರಿಯೆ ಸಂದೇಶ ಬರುತ್ತದೆ.

2. ಬಳಿಕ ಸೇವಾ ಪಟ್ಟಿಗಳನ್ನು ನೋಡಿಕೊಂಡು ನಿಮಗೆ ಅಗತ್ಯವಿರುವ ಸೇವೆಯನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ:, <Balance>, <Block> ಇತ್ಯಾದಿ.

ವಾಟ್ಸ್ಯಾಪ್ ಮೂಲಕ ಲಭ್ಯವಿರುವ ಸೇವೆಗಳು ಮತ್ತು ಅದನ್ನು ಬಳಸಿಕೊಳ್ಳಬಹುದಾದ ವಿಧಾನ ಇಲ್ಲಿದೆ:

ಅಕೌಂಟ್ ಬ್ಯಾಲೆನ್ಸ್ ನೋಡಲು: <transaction>, <bal>, <ac bal> ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಆರಿಸಿಕೊಂಡು ಈ ಕೀ ವರ್ಡ್ ಗಳನ್ನು ಟೈಪ್ ಮಾಡಿ ಬ್ಯಾಂಕಿನ ಅಧಿಕೃತ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.

ಕೊನೆಯ ಮೂರು ಟ್ರಾನ್ಸಾಕ್ಷನ್ ಗಳ ವಿವರ ಪಡೆದುಕೊಳ್ಳಲು: <transaction>, <stmt>, <history> ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಟೈಪ್ ಮಾಡಿ ಕಳುಹಿಸಿ.

ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿರುವ ಬ್ಯಾಲೆನ್ಸ್ ಮೊತ್ತ ಹಾಗೂ ಕ್ರೆಡಿಟ್ ಮಿತಿ ತಿಳಿದುಕೊಳ್ಳಲು: <limit>, <cclimit>, <ccbalance> ಗಳಲ್ಲಿ ನಿಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿ ಟೈಪ್ ಮಾಡಿ ಮೆಸೇಜ್ ಮಾಡಿ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ತಕ್ಷಣವೇ ಬ್ಲಾಕ್ ಮಾಡಿಸಿಕೊಳ್ಳಲು: <block>, <Lost my card>, <Unblock> ಕೀ ವರ್ಡ್ ಗಳಲ್ಲಿ ನಿಮಗೆ ಸಂಬಂಧಿಸಿರುವುದನ್ನು ಟೈಪ್ ಮಾಡಿ ಮೆಸೇಜ್ ಮಾಡಿ.

ಇನ್ನು ಈ ಮೊದಲೇ ಮಂಜೂರಾಗಿರುವ ಸಾಲಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು: <Loan>, <home loan>, <personal loan>, <instant loans> ಗಳಲ್ಲಿ ನಿಮ್ಮ ಆಯ್ಕೆಯನ್ನು ಟೈಪ್ ಮಾಡಿ ಮೆಸೇಜ್ ಮಾಡಬೇಕು.

ನಿಮಗೆ ಸಮೀಪದಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂ ಮಾಹಿತಿಯನ್ನು ಪಡೆದುಕೊಳ್ಳಲು: ಟೈಪ್ <ATM>, <Branch>

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

2-haldiram

Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.