ಜಿಯೋ ಪ್ರೈಮ್‌ಗೆ ಐಡಿಯಾ ಸಡ್ಡು : 348 ರೂ.ಗೆ ಹಲವು ಲಾಭಗಳ ಪ್ಲಾನ್
Team Udayavani, Apr 3, 2017, 12:01 PM IST
ಹೊಸದಿಲ್ಲಿ : ರಿಲಯನ್ಸ್ ಜಿಯೋ ಪ್ರೈಮ್ ಮೆಂಬರ್‌ಶಿಪ್ ಕೊಡುಗೆಗೆ ಸಡ್ಡು ಹೊಡೆಯಲು ಇದೀಗ ಐಡಿಯಾ ಸೆಲ್ಯುಲರ್ ಸಂಸ್ಥೆ ಸಜ್ಜಾಗಿದೆ.ಅಂತೆಯೇ ತನ್ನ ಪ್ರೀಪೇಡ್ ಬಳಕೆದಾರರಿಗೆ 348 ರೂ.ಗಳ ಪ್ಲಾನ್‌ಗೆ ಕೆಲವೊಂದು ಹೊಸ ಲಾಭಗಳನ್ನು ಸೇರಿಸಿದೆ.
ಐಡಿಯಾ ಸೆಲ್ಯುಲರ್ ಇದೀಗ ತನ್ನ ಗ್ರಾಹಕರಿಗೆ ದೇಶಾದ್ಯಂತ ಲಭ್ಯವಿರುವ ಅನ್‌ಲಿಮಿಟೆಡ್ ವಾಯ್ಸ ಕಾಲಿಂಗ್ ಜತೆಗೆ ದಿನಕ್ಕೆ 1 ಜಿಬಿ 4ಜಿ ಡಾಟಾ ಕೊಡಲು ಮುಂದಾಗಿದೆ. 4ಜಿ ಮೊಬೈಲ್ ಫೋನ್ ಹೊಂದಿರುವ ಗ್ರಾಹಕರು ಈ ಹೊಸ ಲಾಭಗಳನ್ನು ಪಡೆಯಬಹುದಾಗಿದೆ.
ಕುತೂಹಲದ ವಿಷಯವೆಂದರೆ ಐಡಿಯಾ ಸೆಲ್ಯುಲರ್‌ನ 348 ರೂ.ಗಳ ಪ್ಲಾನ್‌ಗೆ ಇನ್ನೊಂದು ಮೌಲ್ಯವರ್ಧನೆಯನ್ನು ಮಾಡಲಾಗಿದೆ. 50 ಎಂಬಿ ಡಾಟಾದೊಂದಿಗೆ ಐಡಿಯಾ ಗ್ರಾಹಕರಿಗೆ ಈಗ ದೇಶಾದ್ಯಂತ ಎಲ್ಲ ಜಾಲಗಳಗಿಗೆ ಫ್ರೀ ಕಾಲ್ ಸೌಕರ್ಯವನ್ನು ಒದಗಿಸಲಾಗಿದೆ.
ಇದೇ ಟ್ಯಾರಿಫ್ ಪ್ಲಾನ್‌ನಡಿ ಐಡಿಯಾ ತನ್ನ ಬಳಕೆದಾರರಿಗೆ ವಾಯ್ಸ ಬೆನಿಫಿಟ್ ಜತೆಗೆ ದಿನಕ್ಕೆ 1 ಜಿಬಿ ಡಾಟಾ ಸಿಗಲಿದೆ. ಇದು 28 ದಿನಗಳಿಗೆ ಅನ್ವಯವಾಗುವ ಪ್ಲಾನ್ ಆಗಿರುತ್ತದೆ. ಈ ಮೊದಲು ಕಂಪೆನಿಯು ತನ್ನ ಗ್ರಾಹಕರಿಗೆ ದಿನಕ್ಕೆ ಕೇವಲ 0.5 ಜಿಬಿ ಡಾಟಾ ಕೊಡುತ್ತಿತ್ತು. ಕಡಿಮೆ ಇಂಟರ್‌ನೆಟ್ ಬಳಕೆ ಮಾಡುವ ಗ್ರಾಹಕರನ್ನು ದೃಷ್ಟಿಯಲ್ಲಿರಿಸಿಕೊಂಡು ಐಡಿಯಾ ಇದೀಗ ಈ ಹೆಜ್ಜೆಯನ್ನು ಇರಿಸಿದೆ.
ಅಂದ ಹಾಗೆ ಐಡಿಯಾ ಬಳಿ ಕೇವಲ 148 ರೂ. ಗಳ ಫೀ ವಾಯ್ಸ ಕಾಲಿಂಗ್ ಮತ್ತು ಡಾಟಾ ಪ್ಲಾನ್ ಇದೆ. ಇದರ ಮೂಲಕ ಐಡಿಯಾ ಬಳಕೆದಾರರು ಕಂಪೆನಿ ಜಾಲದಲ್ಲಿ, ದೇಶಾದ್ಯಂತ, ಉಚಿತ ಲೋಕಲ್ ಮತ್ತು ಎಸ್‌ಟಿಡಿ ಕಾಲ್‌ಗಳನ್ನು ಮಾಡಬಹುದಾಗಿದೆ ಮತ್ತು 50 ಎಂಬಿ ಡಾಟಾ ಕೂಡ ಪಡೆಯಬಹುದಾಗಿದೆ.
4 ಜಿ ಮೊಬೈಲ್ ಫೋನ್ ಹೊಂದಿರುವ ಐಡಿಯಾ ಬಳಕೆದಾರರು 300 ಎಂಬಿ ಡಾಟಾವನ್ನು ವಾಯ್ಸ ಕಾಲಿಂಗ್ ಬೆನಿಫಿಟ್ ಜತೆಗೆ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.