ಐಡಿಯಾ-ವೋಡಾಫೋನ್ ವಿಲೀನ: ಇದು ದೇಶದ ಅತೀದೊಡ್ಡ ಟೆಲಿಕಾಂ ಸಂಸ್ಥೆ
Team Udayavani, Mar 20, 2017, 11:52 AM IST
ಹೊಸದಿಲ್ಲಿ : ಐಡಿಯಾ ಮತ್ತು ವೋಡಾಫೋನ್ ಸಂಸ್ಥೆಗಳು ಪರಸ್ಪರ ವಿಲಯನವನ್ನು ಪ್ರಕಟಿಸಿವೆ. ಪರಿಣಾಮವಾಗಿ ಇದು ಭಾರತದ ಅತೀ ದೊಡ್ಡ ಟೆಲಿಕಾಂ ಸೇವಾ ಸಂಸ್ಥೆ ಎನಿಸಿಕೊಂಡಿದೆ.
ವೋಡಾಫೋನ್ ಮತ್ತು ಐಡಿಯಾ ಸಂಸ್ಥೆಗಳ ವಿಲಯನ ಪ್ರಕ್ರಿಯೆಯು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಿವಿಧ ನಿನಿಯಂತ್ರಣ ಸಂಸ್ಥೆಗಳಿಂದ ಈ ವಿಲಯನಕ್ಕೆ ಅನುಮೋದನೆ ದೊರಕಬೇಕಿದ್ದು ಅದಕ್ಕೆ ವರ್ಷದ ಕಾಲಾವಕಾಶ ತಗಲಲಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಲಯನದೊಂದಿಗೆ ಆದಿತ್ಯ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲರ್ ಮತ್ತು ವೋಡಾಫೋನ್ ಇಂಡಿಯಾ ಸಂಸ್ಥೆ ದೇಶದಲ್ಲಿ ಅತೀ ದೊಡ್ಡ ದೂರಸಂಪರ್ಕ ಜಾಲ ಹೊಂದಿರುವ ಹಾಗೂ 3ಜಿ/4ಜಿ ಯಲ್ಲಿ ಪ್ಯಾನ್ ಇಂಡಿಯಾ ಫೂಟ್‌ಪ್ರಿಂಟ್ ಹೊಂದಿರುವ ಸಂಸ್ಥೆ ಎನಿಸಿದೆ.
ವೋಡಾಫೋನ್ ಪ್ರಕೃತ ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆಯಾದರೆ, ಐಡಿಯಾ ಸೆಲ್ಯುಲರ್ 3ನೇ ಅತೀ ದೊಡ್ಡ ಸಂಸ್ಥೆಯಾಗಿದೆ. ಇದು 40 ಕೋಟಿ ಗ್ರಾಹಕರನ್ನು ಹೊಂದಿವೆ. ಎಂದರೇ ದೇಶದ ಪ್ರತೀ ಮೂರನೇ ಗ್ರಾಹಕನು ಈ ಸಂಸ್ಥೆಯ ಗಾಹಕನಾಗಿದ್ದಾನೆ.
ಪ್ರಕೃತಿ ಭಾರ್ತಿ ಏರ್‌ಟೆಲ್ ಸಂಸ್ಥೆಯು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದು ದೇಶದ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ.
ಟೆಲಿಕಾಂ ಕ್ಷೇತ್ರಕ್ಕೆ ಈಚೆಗೆ ಭಾರೀ ದೊಡ್ಡ ಮಟ್ಟದಲ್ಲಿ ಪ್ರವೇಶಿಸಿರುವ ರಿಲಯನ್ಸ್ ಜಿಯೋ, ಮತ್ತು ಭಾರ್ತಿ ಏರ್‌ಟೆಲ್ ಕಂಪೆನಿಗೆ ಕತ್ತುಕತ್ತಿನ ಸ್ಪರ್ಧೆ ನೀಡಲು ವೋಡಾಫೋನ್ ಮತ್ತು ಐಡಿಯಾ ಒಗ್ಗೂಡಿರುವುದು ಕುತೂಹಲದ ಸಂಗತಿಯಾಗಿದೆ.
ಭಾರತ ಸರಕಾರದ ಡಿಜಿಟಲ್ ಇಂಡಿಯಾ ಮಹತ್ವಾಕಾಂಕ್ಷೀ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಕಂಪೆನಿಯು ಮಹತ್ತರ ಕಾಣಿಕೆ ನೀಡಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.