ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ
Team Udayavani, Apr 19, 2021, 10:37 AM IST
ನವ ದೆಹಲಿ : ತಾಂತ್ರಿಕತೆ ಬೆಳೆದಷ್ಟು ಎಷ್ಟು ಲಾಭ ಇದೆಯೋ ಅಷ್ಟೇ ನಷ್ಟವೂ ಕೂಡ ಇದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ. ತಾಂತ್ರಿಕ ಬೆಳವಣಿಗೆಯನ್ನು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವಂಚನೆಗೆ ಬಳಸಿಕೊಳ್ಳಲು ಸೈಬರ್ ಅಪರಾಧಿಗಳು ಬಳಸುತ್ತಿರುವುದು ಹೆಚ್ಚಿತ್ತಿರುವ ಕಾರಣದಿಂದಾಗಿ ದೇಶದ ಅನೇಕ ರಾಷ್ಟ್ರೀಯ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಎಚ್ಚರಿಗೆ ನೀಡದರೂ ಕೂಡ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವುದು ಕಡಿಮೆಯಾಗುವಂತೆ ಕಾಣುತ್ತಿಲ್ಲ.
ಹೌದು, ಈ ಆನ್ ಲೈನ್ ಯುಗದಲ್ಲಿ ಆನ್ ಲೈನ್ ವಂಚನನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ನಿಗ್ರಹಿಸಲು ಹಾಗೂ ನಿರ್ಮೂಲನೆ ಮಾಡಲು ದೃಷ್ಟಿಯಿಂದ ಕೇಂದ್ರ ಸರ್ಕಾರ ಮುಂದಾಗಿದೆ.
ಓದಿ : ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ
ಇತ್ತೀಚೆಗೆ, ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಗ್ರಾಹಕರಿಗೆ ಸಹಾಯವಾಗುವಂತೆ ವಿಶೇಷ ನಂಬರ್ ವೊಂದನ್ನು ನೀಡಿದೆ.
ಹೌದು, ಆನ್ ಲೈನ್ ವಂಚನೆಯಿಂದ ನಿಮ್ಮನ್ನು ಪಾರು ಮಾಡಲು ದೆಹಲಿ ಪೊಲೀಸರು ಸಹಾಯ ವಾಣಿ ನಂಬರ್ ವೊಂದನ್ನು ಕೊಟ್ಟಿದ್ದು, 7 ರಿಂದ 8 ನಿಮಿಷಗಳಲ್ಲಿ ನಿಮಗೆ ಪರಿಹಾರ ಒದಗಿಸುವಲ್ಲಿ ಈ ನಂಬರ್ ಕಾರ್ಯ ನಿರ್ವಹಿಸುತ್ತದೆ. ಹೆಲ್ಪ್ ಲೈನ್ ನಂಬರ್ 155260 ಗೆ ಕರೆ ಮಾಡಿದ 7 ರಿಂದ 8 ನಿಮಿಷಗಳಲ್ಲಿ, ನಿಮ್ಮ ಎಲ್ಲಾ ಹಣವನ್ನು ಮತ್ತೆ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ.
ನೀವು ಸೈಬರ್ ಅಪರಾಧಿಗಳಿಂದ ನೀವು ವಂಚನೆಗೆ ಒಳಗಾಗಿದ್ದರೆ, ಮೇಲೆ ಸೂಚಿಸಿರುವ ನಂಬರ್ ಗೆ ಕರೆ ಮಾಡಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ದೂರು ಸ್ವೀಕರಾ ಮಾಡಿಕೊಳ್ಳುತ್ತಾರೆ, ಪ್ರಕರಣಕ್ಕ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಪರಿಶೀಲಿಸಲಾಗುತ್ತದೆ. ನಿಮ್ಮ ಹಣವನ್ನು ಯಾವ ಖಾತೆ ಅಥವಾ ಐಡಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಕಂಡು ಹಿಡಿಯಲಾಗುತ್ತದೆ. ಅದರ ಮಾಹಿತಿ ಸಿಕ್ಕಿದ ತಕ್ಷಣ, ಆ ಬ್ಯಾಂಕ್ ಅಥವಾ ಇ-ಸೈಟ್ ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ, ನಿಮ್ಮ ಹಣವನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂದು ಗ್ಋಹ ಸಚಿವಾಲಯ ಮಾಹಿತಿ ನೀಡಿದೆ.
ಓದಿ : ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ
155260 ಸಹಾಯವಾಣಿಗೆ0 ಕರೆ ಮಾಡಿದಾಗ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಂಚನೆ ಸಮಯ, ಬ್ಯಾಂಕ್ ಖಾತೆ ವಿವರಗಳು ಇತ್ಯಾದಿ ವಿವರಗಳನ್ನು ನೀಡಬೇಕು. ಇದಾದ ಮೇಲೆ ನಿಮ್ಮ ದೂರಿನ ಬಗ್ಗೆ ಪರಿಶೀಲಿಸಲಾಗುತ್ತದೆ.
ಮುಂದಿನ ಕ್ರಮಕ್ಕಾಗಿ ಸಹಾಯವಾಣಿ ಸಂಖ್ಯೆ ನಿಮ್ಮ ಮಾಹಿತಿಯನ್ನು ಪೋರ್ಟಲ್‌ಗೆ ಕಳುಹಿಸುತ್ತದೆ. ನಂತರ ವಂಚನೆಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ಗೆ ತಿಳಿಸಲಾಗುವುದು. ನಂತರ ಬ್ಯಾಂಕ್ ಈ ಹಣವನ್ನು ತಡೆಹಿಡಿಯುತ್ತದೆ. ಮತ್ತು ನಿಮ್ಮ ಖಾತೆಗೆ ಅದನ್ನ ವರ್ಗಾಯಿಸುತ್ತದೆ.
ಓದಿ : ದೇಶಕ್ಕೆ ಅವಳಿ ರೂಪಾಂತರಿ ಕಾಟ : ಡಬಲ್ ಮ್ಯುಟೆಂಟ್‌ಗೆ ಭಾರತವೇ ಮೂಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.