ದೇಶದ ಎಲ್ಲಾ ಪೋಸ್ಟ್ ಆಫೀಸ್ ಗಳಲ್ಲಿ ಐಟಿಆರ್ ಫೈಲಿಂಗ್ ಗೆ ಅವಕಾಶ
Team Udayavani, Jul 18, 2021, 5:30 PM IST
ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಎಲ್ಲರಿಗೂ ಆದಾಯ ತೆರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.
ಹೌದು, ಆದಾಯ ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ನನ್ನು ತಮಗೆ ಹತ್ತಿರದ ಪೋಸ್ಟ್ ಆಫೀಸ್ ನ ಕಾಮನ್ ಸರ್ವೀಸ್ ಸೆಂಟರ್ನಲ್ಲಿ (CSC) ಮಾಡಕೊಳ್ಳಬಹುದು ಎಂದು ಹೇಳಿದೆ.
ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ : ಮೈತ್ರಿ ಬಗ್ಗೆ ಪಕ್ಷ ಮುಕ್ತವಾಗಿದೆ : ಪ್ರಿಯಾಂಕ ಗಾಂಧಿ
ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡಿಯಾ ಪೋಸ್ಟ್, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಆದಾಯ ತೆರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿರುವುದು ದೊಡ್ಡ ಅನುಕೂಲ ಆಗಿದೆ ಎಂದು ಹೇಳಿದೆ.
ಇನ್ನು, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ಗಾಗಿ ದೂರ ಪ್ರಯಾಣ ಮಾಡಬೇಕಾಗಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಸಿ ಎಸ್ ಸಿ ಕೌಂಟರ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸೇವೆಯನ್ನು ಪಡೆಯಬಹುದು ಎಂದು ತಿಳಿಸಿದೆ.
ಪೋಸ್ಟಲ್, ಬ್ಯಾಂಕಿಂಗ್, ಇನ್ಷೂರೆನ್ಸ್ ಸೇವೆಗಳನ್ನು ಜನರಿಗೆ ಒಂದೇ ಕಡೆಯಲ್ಲಿ ನೀಡುವ ಪೋಸ್ಟ್ ಆಫೀಸ್ ನ ಕಾಮನ್ ಸರ್ವೀಸ್ ಸೆಂಟರ್ ಕೌಂಟರ್ ಗಳು ದೇಶವ್ಯಾಪಿ ಚಾಲ್ತಿಯಲ್ಲಿವೆ.
ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಇತರ ಹಲವು ಡಿಜಿಟಲ್ ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತದೆ. ಆದಾಯ ತೆರಿಗೆ ವೆಬ್ ಸೈಟ್ ಆದ https://www.incometax.gov.in./ ಹೊರತುಪಡಿಸಿ ತೆರಿಗೆ ಪಾವತಿದಾರರು ಪೋಸ್ಟ್ ಆಫೀಸ್ ನ ಕಾಮನ್ ಸರ್ವೀಸ್ ಸೆಂಟರ್ ಗಳನ್ನು ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಶರದ್ ಪವಾರ್ ಬಿಜೆಪಿಯೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು: ಅಠಾವಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.