ಹೂಡಿಕೆದಾರರಲ್ಲಿ ಖುಷಿಯ ನಗು ತಂದ ಸೂಚ್ಯಂಕ
ವಾರದ ಆರಂಭದಲ್ಲಿಯೇ ತೃಪ್ತಿಕರ ವಹಿವಾಟು, ಮುಕ್ತಾಯದಲ್ಲಿ ದಾಖಲೆ ನಿರ್ಮಿಸಿದ ಬಿಎಸ್ಇ, ನಿಫ್ಟಿ
Team Udayavani, Dec 15, 2020, 1:08 AM IST
ಮುಂಬಯಿ: ಬಾಂಬೆ ಷೇರು ಪೇಟೆಯ ಹೂಡಿಕೆದಾರರಲ್ಲಿ ಸೋಮವಾರ ಖುಷಿಯ ನಗು ಮಿಂಚಿತ್ತು. ವಾರದ ಆರಂಭ ದಲ್ಲಿ ಬಿಎಸ್ಇ ವಹಿವಾಟು ಸೂಚ್ಯಂಕ 154.54 ಪಾಯಿಂಟ್ಸ್ ಗಳಷ್ಟು ಏರಿಕೆಯಾಗಿದೆ. ನಿಫ್ಟಿಯೂ ಕೂಡ 44.30 ರಷ್ಟು ಪುಟಿದೆದ್ದಿದೆ. ಬಿಎಸ್ಇ ಸೂಚ್ಯಂಕ ಮಧ್ಯಂತರ ವಹಿವಾಟಿ ನಲ್ಲಿ 46, 373.34 ಪಾಯಿಂಟ್ಸ್ ವರೆಗೆ ಏರಿಕೆಯಾಗಿ, ದಿನಾತ್ಯಕ್ಕೆ 46, 253.46ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ ಕೂಡ ವಹಿ ವಾಟಿನ ಒಂದು ಹಂತದಲ್ಲಿ 13, 597.50ರ ವರೆಗೆ ಏರಿಕೆ ಯಾಗಿ ದಿನಾಂತ್ಯಕ್ಕೆ 13, 558.15ರಲ್ಲಿ ಮುಕ್ತಾಯ ವಾಯಿತು. ಈ ಮೂಲಕ ಬಿಎಸ್ಇ, ನಿಫ್ಟಿ ಸೂಚ್ಯಂಕ ಗಳು ಏರಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದವು.
ಬಿಎಸ್ಇಯಲ್ಲಿ ಒಎನ್ಜಿಸಿ ಷೇರುಗಳು ಹೆಚ್ಚಿನ ರೀತಿಯಲ್ಲಿ ಬಿಕರಿಯಾದವು. ಅನಂತರದ ಸ್ಥಾನಗಳಲ್ಲಿ ಎಲ್ ಆ್ಯಂಡ್ ಟಿ, ಎನ್ಟಿಪಿಸಿ, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಎಚ್ಸಿಎಲ್ ಟೆಕ್, ಟೈಟನ್ ಮತ್ತು ಏಷ್ಯನ್ ಪೇಂಟ್ಸ್ ಇವೆ. ಇಷ್ಟಾದರೂ ಅಟೊ ಮೊಬೈಲ್ ಕ್ಷೇತ್ರದ ಷೇರುಗಳು ಚೇತರಿಕೆ ಕಂಡಿಲ್ಲ. ಶಾಂಘೈ, ಟೋಕ್ಯೋ ಸ್ಟಾಕ್ಎಕ್ಸ್ಚೇಂಜ್ಗಳಲ್ಲಿಯೂ ಸೂಚ್ಯಂಕ ಹಸುರಾ ಗಿಯೇ ಮುಕ್ತಾಯಗೊಂಡಿದೆ. ಐರೋಪ್ಯ ಒಕ್ಕೂಟ ದಲ್ಲಿಯೂ ಚೇತೋಹಾರಿಯಾಗಿಯೇ ನಡೆದಿತ್ತು ವಹಿವಾಟು.
ಹಣದುಬ್ಬರ ದರ ಏರಿಕೆ
ಸಗಟು ಮಾರಾಟ ಕ್ಷೇತ್ರದ ಹಣದುಬ್ಬರ 9 ತಿಂಗಳ ಗರಿಷ್ಠಕ್ಕೆ ಅಂದರೆ, ಶೇ.1.55ಕ್ಕೆ ಜಿಗಿದಿದೆ. ನವೆಂಬರ್ಗೆ ಸಂಬಂಧಿಸಿದ ಮಾಹಿತಿ ಇದಾಗಿದೆ. ಅಕ್ಟೋಬರ್ನಲ್ಲಿ ಅದರ ಪ್ರಮಾಣ ಶೇ.1.48 ಆಗಿತ್ತು. 2019 ನವೆಂಬರ್ನಲ್ಲಿ ಶೇ.0.58 ಇತ್ತು. ತರಕಾರಿ, ಆಲೂಗಡ್ಡೆ ದರ ಏರಿಕೆ ಪ್ರಮಾಣ ಕ್ರಮವಾಗಿ ಶೇ.12.24 ಮತ್ತು ಶೇ.115.12 ಆಗಿದ್ದವು. ಆಹಾರೇತರ ವಸ್ತುಗಳ ದರ ಏರಿಕೆಯೂ ಶೇ.8.43 ಆಗಿದೆ.
ಕಾರಣಗಳೇನು?
ಬ್ರಿಟನ್- ಐರೋಪ್ಯ ಒಕ್ಕೂಟದ ನಡುವೆ ಬ್ರೆಕ್ಸಿಟ್ ಮಾತುಕತೆ ಸಮಯ ವಿಸ್ತರಣೆ. ಜಗತ್ತಿನ ಇತರೆಡೆ ಉತ್ತಮ ವಹಿವಾಟು
ವಿದೇಶಿ ಹೂಡಿಕೆದಾರರ ಸತತ ಬೆಂಬಲ
ಅಕ್ಟೋಬರ್ಗೆ ಸಂಬಂಧಿಸಿದ ಕೈಗಾರಿಕಾ ಸೂಚ್ಯಂಕದಲ್ಲಿ ಧನಾತ್ಮಕ ಬೆಳವಣಿಗೆಯಿಂದ ಹೂಡಿಕೆದಾರರಲ್ಲಿ ಉತ್ಸಾಹ
ರೂಪಾಯಿ ಜಿಗಿತ
ಅಮೆರಿಕದ ಡಾಲರ್ ಎದುರು ರೂಪಾಯಿ 9 ಪೈಸೆಯಷ್ಟು ಚೇತರಿಕೆ ಕಂಡಿದೆ. 73.62 ರೂ.ನಿಂದ ವಹಿವಾಟು ಶುರುವಾಗಿ ದಿನಾಂತ್ಯಕ್ಕೆ 73.55ರಲ್ಲಿ ಮುಕ್ತಾಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.