ನಾಳೆ: ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಉತ್ಸವ
Team Udayavani, Nov 13, 2019, 8:38 PM IST
ಹೊಸದಿಲ್ಲಿ: 39ನೇ ಆವೃತ್ತಿಯ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಉತ್ಸವ (Indian international Trade fair 2019) ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ಗುರುವಾರ (ನವೆಂಬರ್ 14) ನಡೆಯಲಿದೆ. ನವೆಂಬರ್ 14ರಿಂದ 27ರವರೆಗೆ ನಡೆಯಲಿರುವ ಈ ಹಬ್ಬದಲ್ಲಿ ದೇಶ ವಿದೇಶಗಳ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ.
ಪ್ರತಿ ವರ್ಷ ಹೊಸ ಘೋಷಣೆಗಳ ಮೂಲಕ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಈ ವರ್ಷ ‘ವ್ಯಾಪಾರವನ್ನು ಸುಲಭಗೊಳಿಸುವುದು’ ಎಂಬ ಘೋಷವಾಕ್ಯನ್ನು ಇಟ್ಟುಕೊಳ್ಳಲಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಇರಾನ್, ಭೂತಾನ್, ಚೀನ, ಇಂಡೋನೇಷ್ಯಾ, ಟರ್ಕಿ ಮತ್ತು ವೀಯೆಟ್ನಾಂ ದೇಶಗಳು ಈ ವರ್ಷ ಭಾಗವಹಿಸುತ್ತಿವೆ.
ಸಮ್ಮೇಳವನ್ನು ಕೇಂದ್ರ ಸಚಿವ ಅವರು ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಹಲವು ದೇಶ ವಿದೇಶಗಳ ವಸ್ತು ಮಾದರಿಗಳ ಪ್ರದರ್ಶನ, ಎಲ್ಲಾ ವ್ಯಾಪಾರಗಳಿಗೆ ಸಂಬಂಧಿಸಿದ ಪ್ರದರ್ಶನ ಮಳಿಗೆ, ಮಾಹಿತಿ ಪ್ರಾತ್ಯಕ್ಷಿಕೆ ನಡೆಯಲಿದೆ.
ಸರಕಾರ ಮತ್ತು ಸರಕಾರೇತರ ಸಂಘಸಂಸ್ಥೆಗಳು ಭಾಗವಹಿಸಲಿದ್ದು, ಕೈಗಾರಿಕೆಗಳ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಸದೃಢತೆಯನ್ನು ಹೊಂದುವುದು ಇದರ ಉದ್ದೇಶವಾಗಿದೆ. ಈ ವರ್ಷ ಅಫ್ಘಾನಿಸ್ಥಾನ ಮತ್ತು ದಕ್ಷಿಣ ಕೊರಿಯಾ ದೇಶವನ್ನು ’ಫೋಕಸ್ ಕಂಟ್ರಿ’ ಎಂದು ಇಟ್ಟುಕೊಳ್ಳಲಾಗಿದೆ. ಅದೇ ರೀತಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯವನ್ನು ‘ಫೋಕಸ್ ಸ್ಟೇಟ್’ ಎಂದು ಪರಿಗಣಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.