ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಮುನ್ನಡೆ
77 ಸ್ಥಾನದಿಂದ 63ಕ್ಕೆ ಜಿಗಿತ
Team Udayavani, Oct 28, 2019, 10:40 AM IST
ಆರ್ಥಿಕ ಕ್ಷೇತ್ರದಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಉತ್ಪಾದನೆ ಹಾಗೂ ಮಾರಾಟ ವಲಯದ ಕುಸಿತಕ್ಕೆ ಕಾರಣವಾಗಿತ್ತು. ಆದರೆ ಜಾಗತಿಕ ವ್ಯಾವಹಾರಿಕ ಸೂಚ್ಯಂಕದಲ್ಲಿ ಭಾರತ ಆರ್ಥಿಕ ವಲಯದ ಕಾರ್ಯಕ್ಷಮತೆ ಸುಧಾರಿಸಿದೆ ಎಂದು ವಿಶ್ವ ಬ್ಯಾಂಕ್‌ನ ವರದಿ ತಿಳಿಸಿದೆ. ಈ ಸುಧಾರಣೆಗೆ ಕಾರಣವೇನು? ವರದಿ ಏನು ಹೇಳುತ್ತದೆ ಇಲ್ಲಿದೆ ಮಾಹಿತಿ.
ಏನಿದು ಸಮೀಕ್ಷೆ : ವ್ಯಾವಹಾರಿಕ ಚಟುವಟಿಕೆಗಳಲ್ಲಿ ವಿಶ್ವದ ದೇಶಗಳ ಕಾರ್ಯಕ್ಷಮತೆ ಹಾಗೂ ಬೆಳವಣಿಗೆಯನ್ನು ಅಳೆಯಲು ವಿಶ್ವ ಬ್ಯಾಂಕ್ ಪ್ರತಿ ವರ್ಷ ಈ ಸಮೀಕ್ಷೆ ನಡೆಸುತ್ತದೆ. 2003ರಲ್ಲಿ ಆರಂಭವಾದ ಈ ಸಮೀಕ್ಷೆಗೆ “ಡೂಯಿಂಗ್ ಬಿಸಿನೆಸ್ ರಿಪೋರ್ಟ್’ (ಡಿಬಿ) ಎಂದು ಕರೆಯಲಾಗುತ್ತಿದೆ.
190 ದೇಶಗಳು ಭಾಗಿ: ಈಗ ವಿಶ್ವ ಬ್ಯಾಂಕ್ ಈ ಸಮೀಕ್ಷೆಯನ್ನು ನಡೆಸುತ್ತಿದ್ದು, ಭಾರತ ಒಳಗೊಂಡತೆ 190 ದೇಶಗಳನ್ನು ಪ್ರತಿವರ್ಷ ಸಮೀಕ್ಷೆಗೆ ಒಳಪಡಿಸಲಾಗುತ್ತದೆ.
14 ಸ್ಥಾನಗಳ ಮುನ್ನಡೆ : ಪ್ರಸಕ್ತ ಸಾಲಿನ ವ್ಯವಹಾರ ಸೂಚ್ಯಂಕದಲ್ಲಿ ಭಾರತಕ್ಕೆ 63ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷ 77ನೇ ಸ್ಥಾನದಲ್ಲಿತ್ತು. ಈ ವರ್ಷ 14 ಸ್ಥಾನಗಳ ಮುನ್ನಡೆ ಸಾಧಿಸಿದೆ.
ಮೇಕ್ ಇನ್ ಇಂಡಿಯಾ : ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದು, ಬಂಡವಾಳ ಹೂಡಿಕೆ ಚಟುವಟಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ.
ಈ ಕ್ಷೇತ್ರಗಳಲ್ಲಿ ಮಹತ್ತರಸುಧಾರಣೆ : ಆರ್ಥಿಕ ಕ್ಷೇತ್ರದಲ್ಲಿನ ದಿವಾಳಿತನವನ್ನು ನಿವಾರಿಸುವುದು, ನಿರ್ಮಾಣ ಪರವಾನಿಗೆಗಳನ್ನು ನಿಭಾಯಿಸುವುದು, ಆಸ್ತಿಯನ್ನು ನೋಂದಾಯಿಸುವುದು, ಗಡಿಯುದ್ದಕ್ಕೂ ವ್ಯಾಪಾರ ಮಾಡುವುದು ಮತ್ತು ತೆರಿಗೆ ಸೂಚಕಗಳನ್ನು ಪಾವತಿಸುವಲ್ಲಿ ಗಮನಾರ್ಹ ಸುಧಾರಣೆಗಳನ್ನು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಮಾನದಂಡಗಳು :
ನೂತನ ವ್ಯವಹಾರ ಪ್ರಾರಂಭ, ಪರವಾನಿಗೆ ವಿತರಣೆ, ವಿದ್ಯುತ್ ಸಂಪರ್ಕ, ಆಸ್ತಿ ನೋಂದಣಿ, ಸಣ್ಣ ಮಟ್ಟದ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ, ತೆರಿಗೆ ಪಾವತಿ, ಗಡಿ ಭಾಗದಲ್ಲಿ ವ್ಯಾಪಾರ ಚಟುವಟಿಕೆ, ದಿವಾಳಿತನ ಸಮಸ್ಯೆ ನಿವಾರಣೆ ಮೊದಲಾದ ಅಂಶಗಳನ್ನು ಸೂಚ್ಯಂಕದಲ್ಲಿ ದೇಶವೊಂದರ ನಿರ್ದಿಷ್ಟ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ. ಈ 10 ಮಾನದಂಡಗಳ ಪೈಕಿ ಭಾರತ 7ರಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ಪಾಲ್ಗೊಂಡಿದೆ.
ಟಾಪ್ 10 ದೇಶಗಳು :
- ನ್ಯೂಜಿಲ್ಯಾಂಡ್
- ಸಿಂಗಾಪುರ್
- ಹಾಂಗ್ ಕಾಂಗ್
- ಡೆನ್ಮಾರ್ಕ್
- ರಿಪಬ್ಲಿಕ್ ಆಫ್
- ಕೊರಿಯಾ
- ಅಮೆರಿಕ
- ಜಾರ್ಜಿಯಾ
- ಯುನೈಟೆಡ್
- ಕಿಂಗ್‌ಡಮ್
- ನಾರ್ವೆ
- ಸ್ವೀಡನ್
108ನೇ ಸ್ಥಾನ: 2019ನೇ ಸಾಲಿನ ವ್ಯಾವಹಾರಿಕ ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ಥಾನ ಪಡೆದುಕೊಂಡಿರುವ ದರ್ಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.