India ಜಾಗತಿಕ ನಾವೀನ್ಯ ಸೂಚ್ಯಂಕ ದೇಶಕ್ಕೆ 40ನೇ ರ್ಯಾಂಕ್
Team Udayavani, Sep 28, 2023, 9:38 PM IST
ನವದೆಹಲಿ:ಜಾಗತಿಕ ನಾವೀನ್ಯ ಸೂಚ್ಯಂಕದಲ್ಲಿ ಭಾರತ 40ನೇ ರ್ಯಾಂಕ್ ಅನ್ನು ಉಳಿಸಿಕೊಂಡಿದೆ. 2015ರಲ್ಲಿ ದೇಶ 81ನೇ ಸ್ಥಾನದಲ್ಲಿ ಇತ್ತು ಎಂದು ನೀತಿ ಆಯೋಗ ಗುರುವಾರ ಪ್ರಕಟಿಸಿದೆ.
ಜಿನೇವಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವ ಬೌದ್ಧಿಕ ಆಸ್ತಿ ಸಂಘಟನೆ ಪ್ರತಿ ವರ್ಷವೂ ಈ ಸೂಚ್ಯಂಕವನ್ನು ಪ್ರಕಟಿಸುತ್ತಿದೆ.
ಜ್ಞಾನ, ಸ್ಟಾರ್ಟ್ಅಪ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳು ನಡೆಸುತ್ತಿರುವ ಬಂಡವಾಳ ಹೂಡಿಕೆ ಮತ್ತು ಪರಿಶ್ರಮದಿಂದಾಗಿ ಭಾರತದ ಶ್ರೇಯಾಂಕದಲ್ಲಿ ಏರಿಕೆಯಾಗಿದೆ ಎಂದು ನೀತಿ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಆತ್ಮ ನಿರ್ಭರ ಭಾರತ’ ಪರಿಕಲ್ಪನೆಯಿಂದಲೂ ಕೂಡ ದೇಶದಲ್ಲಿ ಉತ್ಪಾದನಾ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ, ಸೂಚ್ಯಂಕದಲ್ಲಿಯೂ ದೇಶದ ರ್ಯಾಂಕ್ ಹೆಚ್ಚಾಗಿದೆ ಎಂದು ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.