2030ರ ವೇಳೆಗೆ ಭಾರತ 3ನೇ ದೊಡ್ಡ ಆರ್ಥಿಕತೆ
Team Udayavani, Dec 27, 2020, 5:41 AM IST
ಹೊಸದಿಲ್ಲಿ: 2030ರ ವೇಳೆಗೆ ಭಾರತ ಜಗತ್ತಿನ 3ನೇ ದೊಡ್ಡ ಆರ್ಥಿಕತೆಯಾಗಿ ರೂಪುಗೊಳ್ಳಲಿದೆ ಎಂದು ಸೆಂಟರ್ ಫಾರ್ ಎಕಾನಾಮಿಕ್ಸ್ ಆ್ಯಂಡ್ ರಿಸರ್ಚ್ (ಸಿಇಬಿಆರ್) ಹೇಳಿದೆ.
ಸದ್ಯ ಭಾರತ ಐದನೇ ಅತೀದೊಡ್ಡ ಆರ್ಥಿಕತೆಯಾಗಿದೆ. ಕಳೆದ ವರ್ಷವಷ್ಟೇ ಇಂಗ್ಲೆಂಡ್ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದ ಭಾರತ, ಸದ್ಯದಲ್ಲೇ 6ನೇ ಸ್ಥಾನಕ್ಕೆ ಜಾರ ಲಿದೆ. ಆದರೆ 2025ರ ವೇಳೆಗೆ ಮತ್ತೆ 5ನೇ ಸ್ಥಾನಕ್ಕೆ ಏರಲಿದೆ ಎಂದು ಇದೇ ಸಂಸ್ಥೆ ಭವಿಷ್ಯ ನುಡಿದಿದೆ.
ಇದೇ ವರದಿಯ ಪ್ರಕಾರ, ಭಾರತ 2030ರ ವೇಳೆಗೆ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಬದಲಾಗಲಿದೆ. ಈ ಮೂಲಕ 3ನೇ ಸ್ಥಾನದಲ್ಲಿರುವ ಜಪಾನ್ ಅನ್ನು ಹಿಂದಿಕ್ಕಲಿದೆ. ಇದರ ನಡುವೆಯೇ 2025ಕ್ಕೆ ಇಂಗ್ಲೆಂಡ್, 2027ಕ್ಕೆ ಜರ್ಮನಿಯನ್ನೂ ಭಾರತ ಹಿಂದಿಕ್ಕಲಿದೆ.
ಭಾರತ 5ರಿಂದ 6ನೇ ಸ್ಥಾನಕ್ಕೆ ಜಾರಲು ರೂಪಾಯಿ ದುರ್ಬಲಗೊಂಡಿರುವುದು, ಕೊರೊನಾ ಬಿಕ್ಕಟ್ಟು ಕಾರಣ ಎಂಬುದು ಈ ಸಂಸ್ಥೆಯ ಅಭಿಪ್ರಾಯ. 2024ರ ವರೆಗೂ ಇಂಗ್ಲೆಂಡ್ 5ನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ.
ಶೇ.9ರಷ್ಟು ಪ್ರಗತಿ: ಸಿಇಬಿಆರ್ ಪ್ರಕಾರ, 2021ರಲ್ಲಿ ಭಾರತದ ಆರ್ಥಿಕತೆ ಶೇ.9ರಷ್ಟು ವೃದ್ಧಿಯಾಗಲಿದೆ. ಹಾಗೆಯೇ 2022ರ ವೇಳೆಗೆ ಆರ್ಥಿಕತೆ ಶೇ.7ರಷ್ಟು ವಿಸ್ತಾರವಾಗಲಿದೆ. ಅನಂತರದಲ್ಲಿ ಇದೇ ಲೆಕ್ಕಾಚಾರದಲ್ಲೇ ಬೆಳವಣಿಗೆ ಕಂಡು 2030ರ ವೇಳೆಗೆ ಭಾರತ 3ನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ.
2030ರ ಅನಂತರ, ಅಂದರೆ 2035ರ ವೇಳೆಗೆ ಭಾರತದ ಅಭಿವೃದ್ಧಿ ದರ(ಜಿಡಿಪಿ) ಶೇ.5.8ಕ್ಕೆ ಕುಸಿತ ಕಾಣಲಿದೆ. ಇದಕ್ಕೆ ಕಾರಣ, ಅಷ್ಟೊತ್ತಿಗಾಗಲೇ, ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲಿದ್ದು, ಹೀಗಾಗಿ ಜಿಡಿಪಿ ದರವೂ ಕುಸಿತ ಕಾಣಲಿದೆ.
2028ಕ್ಕೆ ಚೀನ ಟಾಪ್
ಇನ್ನು 2028ರ ವೇಳೆಗೆ ಚೀನ ಜಗತ್ತಿನ ನಂ.1 ಆರ್ಥಿಕತೆಯಾಗಿ ರೂಪುಗೊಳ್ಳಲಿದೆ. ಸದ್ಯ ಕೊರೊನಾ ಕಾಲದಲ್ಲೂ ಆರ್ಥಿಕತೆ ಬೀಳದಂತೆ ನೋಡಿಕೊಂಡಿರುವ ಚೀನ, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಣಲಿದೆ ಎಂದು ಇದೇ ಸಂಶೋಧನೆ ಹೇಳಿದೆ. ಹೀಗಾಗಿ, 2028ಕ್ಕೆ ಅಮೆರಿಕವನ್ನು ಚೀನ ಹಿಂದಿಕ್ಕಲಿದೆ ಎಂದಿದೆ.
ಹಾಲಿ ಟಾಪ್ 6 ದೇಶಗಳು
1. ಅಮೆರಿಕ
2. ಚೀನ
3. ಜಪಾನ್
4. ಜರ್ಮನಿ
5. ಭಾರತ
6 ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.