ದೇಶಾದ್ಯಂತ 2023ಕ್ಕೆ ಓಡಲಿವೆ ಖಾಸಗಿ ರೈಲುಗಳು
Team Udayavani, Jul 3, 2020, 7:14 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗೀಕರಣಕ್ಕೆ ಮುಂದಾಗಿದೆ.
ಅದರ ಭಾಗವಾಗಿ, ದೇಶದ ಆಯ್ದ 109 ಜೋಡಿ ರೈಲು ಮಾರ್ಗಗಳಲ್ಲಿ 151 ಅತ್ಯಾಧುನಿಕ ರೈಲುಗಳ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯಗಳಿಂದ ಟೆಂಡರ್ ಆಹ್ವಾನಿಸಿದೆ.
ನಿರೀಕ್ಷೆಯಂತೆ ಎಲ್ಲವೂ ಕೈಗೂಡಿದರೆ, ಇಲಾಖೆಗೆ 30,000 ಕೋಟಿ ರೂ. ಬಂಡವಾಳ ಹರಿದುಬರುವ ನಿರೀಕ್ಷೆಯಿದೆ.
ಕೇಂದ್ರ ಸರಕಾರ ಹಾಕಿಕೊಂಡಿರುವ ಗುರಿಯ ಪ್ರಕಾರ 2023ರ ಎಪ್ರಿಲ್‌ನಲ್ಲಿ ಖಾಸಗಿ ಕಂಪೆನಿಗಳ ರೈಲುಗಳು ಓಡಬೇಕಾಗಿದೆ.
ವಿಮಾನ ಕಂಪೆನಿಗಳ ಟಿಕೆಟ್‌ಗಳಂತೆ ರೈಲು ಟಿಕೆಟ್ ಕೂಡ ಸ್ಪರ್ಧಾತ್ಮಕವಾಗಿ ಇರಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈಲ್ವೇ ಇಲಾಖೆಯ ಖಾಸಗೀಕರಣಕ್ಕೆ ಕಳೆದ ವರ್ಷವೇ ಶ್ರೀಕಾರ ಹಾಕಲಾಗಿತ್ತು. ಐಆರ್‌ಸಿಟಿಸಿ ವತಿಯಿಂದ ಲಕ್ನೋ-ದೆಹಲಿ ಮಾರ್ಗದಲ್ಲಿ ತೇಜಸ್ ಎಕ್ಸ್‌ಪ್ರೆಸ್ ಎಂಬ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.
ವ್ಯವಹಾರ ಹೇಗೆ?: ದೇಶದ ರೈಲ್ವೇ ನೆಟ್
ವರ್ಕ್‌ನ 12 ಕ್ಲಸ್ಟರ್‌ಗಳ, 109 ನಿಲ್ದಾಣಗಳಿಂದ ಶುರುವಾಗುವ ಜೋಡಿ ಮಾರ್ಗಗಳಲ್ಲಿ 151 ಅತ್ಯಾಧುನಿಕ ರೈಲುಗಳು ಸೇವೆಗೆ ಇಳಿಯಲಿವೆ. ಪ್ರತಿ ಕಂಪೆನಿಗೆ ತಲಾ 3 ಕ್ಲಸ್ಟರ್‌ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರಲಿದೆ. ಪ್ರತಿಯೊಂದು ರೈಲಿನಲ್ಲಿ 16 ಕೋಚ್‌ಗಳು ಇರಲಿವೆ. ಪ್ರತಿ ರೈಲಿನ ಗರಿಷ್ಟ ವೇಗವನ್ನು ಗಂಟೆಗೆ 160 ಕಿ.ಮೀ.ಗಳಿಗೆ ನಿಗದಿಗೊಳಿಸಲಾಗಿದೆ.
ಯಾವುದೇ ಖಾಸಗಿ ಕಂಪನಿಯು ರೈಲ್ವೇ ಇಲಾಖೆಯ ಜೊತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ 35 ವರ್ಷದ ಕಾಲಾವಧಿ ಇರಲಿದೆ. ಪ್ರತಿ ರೈಲಿನ ಓಡಾಟಕ್ಕೆ ತಕ್ಕಂತೆ ಮಾರ್ಗ ಉಪಯೋಗಿ ಶುಲ್ಕ, ಇಂಧನ ಶುಲ್ಕವನ್ನು ಪಾವತಿಸಲಿದೆ. ಈ ರೈಲುಗಳ ಚಾಲಕ ಹಾಗೂ ಗಾರ್ಡ್‌ಗಳು ರೈಲ್ವೇ ಇಲಾಖೆಯವರೇ ಆಗಿರಲಿದ್ದಾರೆ.
ಶೇ.100 ಸಮಯ ಪಾಲನೆ ಮಾಡಿದ ರೈಲ್ವೇ
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 201 ರೈಲುಗಳು ಸರಿಯಾದ ಸಮಯಕ್ಕೆ ಬಂದು ದಾಖಲೆ ನಿರ್ಮಿಸಿವೆ! ಈ ಐತಿಹಾಸಿಕ ಘಟನೆ ನಡೆದಿರುವುದು ಜು.1ರಂದು. ಬುಧವಾರ ಎಲ್ಲ ರೈಲುಗಳು ಶೇ.100ರಷ್ಟು ಸಮಯ ಪಾಲನೆ ಮಾಡಿವೆ.
ಜೂ.23ರಂದು ಶೇ.99.54ರಷ್ಟು ರೈಲುಗಳು ಸಮಯಪಾಲನೆ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು. ಇದೀಗ ಎಲ್ಲ 201 ರೈಲುಗಳು ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿವೆ ಮತ್ತು ಅಲ್ಲಿಂದ ಹೊರಟಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಸ್ತುತ ರೈಲ್ವೆಯ ಸಾಮಾನ್ಯ ಪ್ಯಾಸೆಂಜರ್ ರೈಲುಗಳು ರದ್ದಾಗಿದ್ದು, ಅನಿವಾರ್ಯವಾಗಿ ಪ್ರಯಾಣ ಮಾಡಬೇಕಿರುವವರಿಗೆ ಅನುಕೂಲವಾಗುವಂತೆ ಆಯ್ದ ಕೆಲವು ಮಾರ್ಗಗಳಲ್ಲಿ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.