ಭಾರತೀಯ ಸ್ಟಾರ್ಟಪ್ ಗಳ ಬಗ್ಗೆ ನ್ಯಾಸ್ಕಾಮ್ ವರದಿ : 2025ರೊಳಗೆ 12.5 ಲಕ್ಷ ಉದ್ಯೋಗ
Team Udayavani, Nov 8, 2019, 1:22 AM IST
ಹೊಸದಿಲ್ಲಿ: ಭಾರತದಲ್ಲಿ ದಿನೇ ದಿನೆ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟಪ್‌ಗ್ಳಿಂದಾಗಿ, 2025ರೊಳಗೆ 12.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಆ್ಯಂಡ್ ಸರ್ವೀಸಸ್ ಕಂಪೆನೀಸ್ (ನ್ಯಾಸ್ಕಾಮ್) ಸಂಸ್ಥೆಯು ತನ್ನ ವರದಿ ಯೊಂದರಲ್ಲಿ ಹೇಳಿದೆ.
2019ರಲ್ಲಿ ಈ ಕ್ಷೇತ್ರದಲ್ಲಿ 3.9ರಿಂದ 4.3 ಲಕ್ಷದಷ್ಟು ನೇರ ಉದ್ಯೋಗ ಸೃಷ್ಟಿಯಾಗಿದೆ. 2025ರೊಳಗೆ ಇದರ ಸಂಖ್ಯೆ 12.5 ಲಕ್ಷಕ್ಕೇರ ಬಹುದು. ಅದೇ ವೇಳೆಗೆ, ಪರೋಕ್ಷ ಉದ್ಯೋಗಗಳ ಸಂಖ್ಯೆ 39 ಲಕ್ಷದಿಂದ 44 ಲಕ್ಷಕ್ಕೇರುವ ಅಂದಾಜಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಪ್ರತಿಭಾನ್ವಿತರು ಇಂದು ಮಹಾನಗರಗಳ ವ್ಯಾಪ್ತಿಯನ್ನೂ ಮೀರಿ ಬೆಳೆಯುತ್ತಿದ್ದಾರೆ. ನವ ಪದವೀಧರರು ಮೆಟ್ರೋಪಾಲಿಟನ್ ಗೀಳು ಬಿಟ್ಟು ತಮ್ಮೂರುಗಳಲ್ಲೇ ಇದ್ದುಕೊಂಡು ಸ್ಟಾರ್ಟಪ್‌ಗ್ಳ ಇಂದಿನ ಆವಶ್ಯಕತೆಗೆ ತಕ್ಕಂತೆ ಇರುವ ಹೊಸ ತಂತ್ರಜ್ಞಾನಗಳನ್ನು ಅಂತರ್ಜಾಲದ ಮೂಲಕ ಕರಗತ ಮಾಡಿಕೊಂಡಿದ್ದಾರೆ. ಇದರಿಂದ, ಉದ್ಯೋಗಗಳು ಅವರಿಗೆ ಸುಲಭವಾಗಿ ಸಿಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
2014ರಲ್ಲಿ ಶುರುವಾದ ಸ್ಟಾರ್ಟಪ್ ಟ್ರೆಂಡ್, ವಾರ್ಷಿಕವಾಗಿ ಶೇ. 40ರಷ್ಟು ಬೆಳವಣಿಗೆ ಕಾಣುತ್ತಿದ್ದು, 2025 ರೊಳಗೆ ಈಗಿನ ಬೆಳವಣಿಗೆಗಿಂತ ನಾಲ್ಕು ಪಟ್ಟು ಹೆಚ್ಚು ವೃದ್ಧಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.