ವಿದೇಶ ವಿನಿಮಯ ಮೀಸಲು ಐತಿಹಾಸಿಕ ಎತ್ತರಕ್ಕೆ : 379.3 ಬಿಲಿಯ ಡಾಲರ್
Team Udayavani, May 27, 2017, 4:18 PM IST
ಹೊಸದಿಲ್ಲಿ : ಭಾರತದ ವಿದೇಶ ವಿನಿಮಯ ಮೀಸಲು ಇದೇ ಮೇ 19ರಂದು 379.3 ಬಿಲಿಯ ಡಾಲರ್ಗಳ ಐತಿಹಾಸಿಕ ಎತ್ತರವನ್ನು ತಲುಪಿರುವುದಾಗಿ ಆರ್ಬಿಐ ಮೂಲಗಳು ತಿಳಿಸಿವೆ.
ವಿದೇಶೀ ಹೂಡಿಕೆದಾರರ ಮೂಲಕ ನಿರಂತರವಾಗಿ ಡಾಲರ್ ಹರಿದು ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಕಳೆದ ಒಂದು ವಾರದಲ್ಲಿ ದೇಶದ ಒಟ್ಟಾರೆ ಮೀಸಲು 4.03 ಬಿಲಿಯ ಡಾಲರ್ಗಳಷ್ಟು ಹೆಚ್ಚಾಗಿತ್ತು. ವಿದೇಶೀ ಬಂಡವಾಳ ಶೇರು ಮಾರುಕಟ್ಟೆಗೆ ನಿರಂತರವಾಗಿ ಹರಿದುಬರುತ್ತಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿನ್ನೆ ಶುಕ್ರವಾರ ಇದೇ ಮೊದಲ ಬಾರಿಗೆ 31,000 ಅಂಕಗಳ ಗಡಿ ದಾಟಿರುವುದು ಹೊಸ ಸಾರ್ವಕಾಲಿಕ ದಾಖಲೆಯಾಗಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿರುವುದು ಗಮನಾರ್ಹವಾಗಿದೆ.
ಇದೇ ವೇಳೆ ಚಿನ್ನ ಮೀಸಲು 20.43 ಬಿಲಿಯ ಡಾಲರ್ ಪ್ರಮಾಣದಲ್ಲಿ ಯಥಾವತ್ತಾಗಿ ಉಳಿದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.