2016-17ರ ಜಿಡಿಪಿ ಅಂದಾಜು ಶೇ.7.1; ಮೂರು ವರ್ಷಗಳಲ್ಲೇ ಕನಿಷ್ಠ
Team Udayavani, Jan 6, 2017, 7:32 PM IST
ಹೊಸದಿಲ್ಲಿ : 2016-17ರ ಹಣಕಾಸು ವರ್ಷದ ಭಾರತದ ಜಿಡಿಪಿ ಶೇ.7.1ರ ಪ್ರಮಾಣದಲ್ಲಿ ಇರುವುದೆಂದು ನಿರೀಕ್ಷಿಸಲಾಗಿದೆ. ನೋಟು ಅಪನಗದೀಕರಣದ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಡೆಸಲಾಗಿರುವ ಈ ಅಂದಾಜಿನಲ್ಲಿ ಕಂಡುಬಂದಿರುವ ದೇಶದ ಜಿಡಿಪಿಯು ಕಳೆದ 3 ವರ್ಷಗಳಲ್ಲೇ ಕನಿಷ್ಠವೆಂದು ತಿಳಿಯಲಾಗಿದೆ. 2015-16ರ ಹಣಕಾಸು ವರ್ಷದಲ್ಲಿ ಶೇ.7.6ರ ಜಿಡಿಪಿ ದಾಖಲಾಗಿತ್ತು.
ಕೇಂದ್ರ ಸಂಖ್ಯಾಶಾಸ್ತ್ರ ಕಾರ್ಯಾಲಯ (ಸಿಎಸ್‌ಓ) ಬಿಡುಗಡೆ ಮಾಡಿರುವ ಮೊದಲ ಅಂದಾಜು ಅಂಕಿ ಅಂಶಗಳ ಪ್ರಕಾರ 2016-17ರ ಸಾಲಿನಲ್ಲಿ ದೇಶದ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯ ಶೇ.4.1ರ ಅಭಿವೃದ್ಧಿ ದರವನ್ನು ದಾಖಲಿಸುವ ನಿರೀಕ್ಷೆ ಇದೆ. ಹಿಂದಿನ ಸಾಲಿನಲ್ಲಿ ಈ ವಲಯವು ಕೇವಲ ಶೇ.1.2ರ ಅಭಿವೃದ್ಧಿ ದರವನ್ನು ದಾಖಲಿಸಿತ್ತು.
2016-17ರ ಸಾಲಿನಲ್ಲಿ ಉತ್ಪಾದನಾ ವಲಯವು ಶೇ.7.4ರ ಅಭಿವೃದ್ಧಿಯನ್ನು ಕಾಣುವ ನಿರೀಕ್ಷೆ ಇದೆ. ಆದರೆ 2015-16ರ ಸಾಲಿನಲ್ಲಿ ಈ ವಲಯದ ಅಭಿವೃದ್ಧಿಯು ಶೇ.9.3ರ ದರದಲ್ಲಿ ದಾಖಲಾಗಿತ್ತು.
ಕೃಷಿ, ಅರಣ್ಯ, ಮೀನುಗಾರಿ; ಗಣಿಗಾರಿಕೆ, ವಿದ್ಯುತ್, ಅನಿಲ, ನೀರು ಪೂರೈಕೆ ಮತ್ತು ಇತರ ಯುಟಿಲಿಟಿ ಸೇವೆಗಳು, ಕಟ್ಟಡ ನಿರ್ಮಾಣ, ವಾಣಿಜ್ಯ, ಹೊಟೇಲು, ಸಾರಿಗೆ, ಸಂಪರ್ಕ ಮತ್ತು ಪ್ರಸಾರ ಸಂಬಂಧಿ ಸೇವೆಗಳು ಅನುಕ್ರಮವಾಗಿ ಶೇ.4.1 (-), ಶೇ.1.8, ಶೇ.6.5, ಶೇ.2.9 ಮತ್ತು ಶೇ.6.0 ದರದ ಅಭಿವೃದ್ಧಿಯನ್ನು ದಾಖಲಿಸುವ ನಿರೀಕ್ಷೆ ಇದೆ.
2016-17ರ ಸಾಲಿನಲ್ಲಿ ತಲಾ ಆದಾಯದಲ್ಲಿ ಅಭಿವೃದ್ಧಿಯು ಶೇ.5.6ರಲ್ಲಿ ಇರುವುದೆಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದಲ್ಲಿ ಇದು ಶೇ.6.2ರ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಕಂಡಿತ್ತು.
ಈ ಪೂರ್ವ ಅಂದಾಜಿನಲ್ಲಿ ಕಳೆದ ನ.8ರಂದು ಕೇಂದ್ರ ಸರಕಾರ ಕೈಗೊಂಡಿದ್ದ ನೋಟು ಅಪನಗದೀಕರಣದ ಪರಿಣಾಮಗಳನ್ನು ಪರಿಗಣಿಸಲಾಗಿಲ್ಲ.
ಈ ಅಂದಾಜಿನಂತೆ ದೇಶದ ಆರ್ಥಿಕತೆಯು ಶೇ.7.1ರ ಬೆಳವಣಿಗೆಯನ್ನು ಕಂಡರೆ ಅದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ನಿಧಾನಗತಿಯ ಬೆಳವಣಿಗೆ ಎಂದು ಪರಿಗಣಿತವಾಗುತ್ತದೆ. 2014-15ರಲ್ಲಿ ದೇಶದ ಆರ್ಥಿಕತೆಯು ಶೇ.7.2ರ ಪ್ರಮಾಣದಲ್ಲಿ ಅಭಿವೃದ್ಧಿಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.