7 ತಿಂಗಳ ಕುಸಿತದ ದಾಖಲೆ ಬಳಿಕ ಭಾರತದ ಸೇವಾ ಕ್ಷೇತ್ರದಲ್ಲಿ ಚೇತರಿಕೆ
ಈ ಸೂಚ್ಯಂಕ 50ಕ್ಕಿಂತ ಜಾಸ್ತಿಯಾದರೆ ಅದು ಪ್ರಗತಿಯ ಸಂಕೇತ
Team Udayavani, Nov 5, 2020, 11:17 AM IST
ನವದೆಹಲಿ: ಭಾರತದ ಸೇವಾಕ್ಷೇತ್ರ ಸುಧಾರಣೆಯತ್ತ ಸಾಗಿದೆ. ಸತತ 7 ತಿಂಗಳ ಕುಸಿತದ ದಾಖಲೆಯನ್ನು ಮುರಿದಿರುವ ಅದು ಅಕ್ಟೋಬರ್ ತಿಂಗಳಲ್ಲಿ ಏರಿಕೆ
ಸಾಧಿಸಿದೆ. ಐಎಚ್‌ಎಸ್ ಮರ್ಕಿಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ.
ಫೆಬ್ರವರಿ ನಂತರ ಮೊದಲ ಬಾರಿಗೆ ಖರೀದಿ ನಿರ್ವಾಹಕ ಸೂಚ್ಯಂಕ (ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) 50ನ್ನು ದಾಟಿದೆ. ಸೆಪ್ಟೆಂಬರ್‌ನಲ್ಲಿ ಸೂಚ್ಯಂಕ 49.8ರಷ್ಟಿತ್ತು. ಅದು ಅಕ್ಟೋಬರ್‌ನಲ್ಲಿ 54.1ಕ್ಕೇರಿದೆ. ಈ ಸೂಚ್ಯಂಕ 50ಕ್ಕಿಂತ ಜಾಸ್ತಿಯಾದರೆ ಅದು ಪ್ರಗತಿಯ ಸಂಕೇತ, ಕಡಿಮೆಯಾದರೆ ಕುಸಿತದ ಸಂಕೇತ.
ಕೋವಿಡ್ ಕಾರಣಕ್ಕೆ ಭಾರತದಲ್ಲಿ ವ್ಯಾಪಕ ನಿರ್ಬಂಧಗಳನ್ನು ಹೇರಲಾಗಿತ್ತು. ಅದರ ಪರಿಣಾಮ ಸೇವಾಕ್ಷೇತ್ರ ಸೇರಿದಂತೆ ಎಲ್ಲ ವಲಯಗಳೂ ಆರ್ಥಿಕ
ಕುಸಿತ ಅನುಭವಿಸಿದ್ದವು. ಇದೀಗ ನಿರ್ಬಂಧಗಳು ಸಡಿಲವಾಗಿರುವುದರಿಂದ ಅದರ ಪರಿಣಾಮ ಎಲ್ಲ ಕಡೆ ಕಾಣಿಸುತ್ತಿದೆ.
ಎಸ್‌ಬಿಐ ಲಾಭ ಶೇ.55ರಷ್ಟು ಏರಿಕೆ
ಎಸ್‌ಬಿಐ, ಕೋವಿಡ್ ಮಧ್ಯೆಯೇ ಲಾಭದಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದರೆ 2ನೇ ತ್ತೈಮಾ ಸಿಕದಲ್ಲಿ ನಿವ್ವಳ ಲಾಭ ಶೇ.55ರಷ್ಟು ಹೆಚ್ಚಾಗಿದೆ.
ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಅದು ಗಳಿಸಿರುವ ಲಾಭ 5,245.88 ಕೋಟಿ ರೂ. 2019ರ ಇದೇ ಅವಧಿಯಲ್ಲಿ 3,375.40 ಕೋಟಿ ರೂ. ಲಾಭವನ್ನು ಎಸ್‌ಬಿಐ ಗಳಿಸಿತ್ತು. ಒಟ್ಟಾರೆ ಅದರ ಆದಾಯ 95,373.50 ಕೋಟಿ ರೂ. ಸಂಸ್ಥೆ ಈ ಪ್ರಮಾಣದಲ್ಲಿ ಲಾಭ ಪಡೆಯಲು ಕಾರಣ, ಹಿಂಪಾವತಿಯಾಗದ ಸಾಲದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.