ಕೋವಿಡ್ ಸಂಕಷ್ಟದಲ್ಲಿಯೂ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ದೈತ್ಯ ಐಟಿ ಕಂಪೆನಿಗಳು..!
Team Udayavani, May 5, 2021, 3:16 PM IST
ನವ ದೆಹಲಿ : ದೇಶ ಒಂದಡೆ ಕೋವಿಡ್ ಸೋಂಕಿನ ಪರಿಣಾಮದಿಂದ ತತ್ತರಿಸಿ ಹೋಗುತ್ತಿದ್ದರೇ, ಇನ್ನೊಂದೆಡೆ ಉದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚುತ್ತಿದೆ. ಕೋವಿಡ್ ನ ದವಡೆಗೆ ಸಿಲುಕಿ ಉದ್ಯೋಗ ಕಳೆದುಕೊಂಡು ಭವಿಷ್ಯದ ಚಿಂತನೆಯಲ್ಲಿ ಹಣೆಗೆ ಕೈಯಿಟ್ಟು ಕೂತಿರುವ ಸಾವಿರ ಸಾವಿರ ನಿರುದ್ಯೋಗಿಗಳ ಪಾಲಿಗೆ ಇದು ಕೊಂಚ ಸಿಹಿ ಸುದ್ದಿಯಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಹೌದು, ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಅಗ್ರಮಾನ್ಯ ದೈತ್ಯ ನಾಲ್ಕು ಐಟಿ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಹಾಗೂ ಹೆಚ್ ಸಿ ಎಲ್ ಕಂಪನಿಗಳು ಈ ವರ್ಷ 1 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿರುವುದಾಗಿ ಒಂದು ವರದಿ ತಿಳಿಸಿದೆ.
ಓದಿ : ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಕೆ ಬಗ್ಗೆ ಕೇಂದ್ರ ಸಚಿವರ ಜೊತೆ ಶೆಟ್ಟರ್ ಮಾತುಕತೆ
ಐಟಿ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಹೆಚ್ ಸಿಎಲ್ ಟೆಕ್ ನಂತಹ ಕಂಪನಿಗಳು, ಯುರೋಪ್, ಅಮೆರಿಕಾ, ಮತ್ತು ಮಧ್ಯ-ಪೂರ್ವ ರಾಷ್ಟ್ರಗಳಲ್ಲಿ ಮಾರುಕಟ್ಟೆ ಮತ್ತೆ ಪ್ರಾರಂಭಿಸಿರುವುದರಿಂದ ಈ ವರ್ಷ ಹೊಸ 1 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬಹುತೇಕ ಎಲ್ಲಾ ಲಕ್ಷಣಗಳಿವೆ.
ಕ್ಲೌಡ್ ಕಂಪ್ಯೂಟಿಂಗ್, ಡಾಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ಮೆಷಿನ್ ಲರ್ನಿಂಗ್ ನಂತಹ ಕ್ಷೇತ್ರಗಳಲ್ಲಿ ಕೌಶಲ್ಯಕ್ಕೆ ಬೇಡಿಕೆ, 2021ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಆಕರ್ಷಕ ವೇತನಕ್ಕೆ ಕಾರಣವಾಗಿದ್ದು, ಉತ್ತಮ ವೇತನ, ಸವಲತ್ತು ಸಿಗುವ ಕಡೆಗೆ ತೆರಳಲು ನೌಕರರು ನಿರ್ಧರಿಸಿದ್ದಾರೆ.
ಇನ್ನು, ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಉದ್ಯಮ ಕ್ಷೇತ್ರದ ವೀಕ್ಷಕರು ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಅನೇಕ ಕಂಪನಿಗಳು ಡಿಸೆಂಬರ್ 2021ರವರೆಗೂ ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್)ಮಾಡಲು ನೀಡಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಕ್ಲೈಂಟ್ ಜಿಯೋಗ್ರಾಫಿಸ್ ಐಟಿ ಕಂಪನಿಯಲ್ಲೂ ನೇಮಕ ಏರಿಕೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ.
ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಬಿ. ಪ್ರವೀಣ್ ರಾವ್ ಪ್ರತಿಕ್ರಿಯಿಸಿ, ಐಟಿ ಕಂಪನಿಗಳ ನಾಲ್ಕನೇ ತ್ರೈಮಾಸಿಕ ವಿಶ್ಲೇಷಣೆ ಪ್ರಕಾರ, 2021ರ ಹಣಕಾಸು ವರ್ಷದಲ್ಲಿ ನೌಕರರ ನಿವ್ವಳ ಸೇರ್ಪಡೆ ಕಳೆದ ಹಣಕಾಸು ವರ್ಷದಲ್ಲಿದ್ದ 49 ಸಾವಿರದಿಂದ 73 ಸಾವಿರಕ್ಕೆ ಹೆಚ್ಚಾಗಿದೆ. ದೇಶ ಹಾಗೂ ಹೊರದೇಶಗಳಲ್ಲಿ 26 ಸಾವಿರ ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಟಿಸಿಎಸ್ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಂದ್ ಪ್ರತಿಕ್ರಿಯಿಸಿ, 2022ರ ಹಣಕಾಸು ವರ್ಷದಲ್ಲಿ ಸಂಸ್ಥೆ ಸುಮಾರು 40 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆಯಲ್ಲಿ ಇದೆ ಎಂದು ತಿಳಿಸಿದ್ದಾರೆ.
ಥಿಯೆರಿ ಡೆಲಾಪೋರ್ಟೆ ವಿಪ್ರೋದ ಸಿಇಒ ಆದ ನಂತರ ಪ್ರಸ್ತಕ ಹಣಕಾಸು ವರ್ಷದಲ್ಲಿ ಹೊಸದಾಗಿ 10 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ.ಈ ವರ್ಷದ 15 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ನೊಯ್ಡಾ ಮೂಲದ ಹೆಚ್ ಸಿಎಲ್ ಕಂಪನಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಓದಿ : ಬೆಡ್ ಬ್ಲಾಕಿಂಗ್ ಪ್ರಕರಣ: ಇಬ್ಬರು ವೈದ್ಯರು ಸೇರಿ ಎಂಟು ಮಂದಿ ಸಿಸಿಬಿ ವಶಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.