ಪಿಂಚಣಿದಾರರ ಸೂತ್ರ ಬದಲು

Team Udayavani, May 21, 2020, 5:47 AM IST

ಪಿಂಚಣಿದಾರರ ಸೂತ್ರ ಬದಲು

ಸಾಂದರ್ಭಿಕ ಚಿತ್ರ

ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರಿಗೆ/ಪಡೆಯುವವರಿಗೆ ಸಹಾಯವಾಗಲೆಂದೇ ಕೇಂದ್ರಸರ್ಕಾರ, ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಈ ಸೂತ್ರಗಳನ್ನು ಹೊರಡಿಸುವ ಮೂಲಕ, 65 ಲಕ್ಷ ಪಿಂಚಣಿದಾರರ ಸಹಾಯಕ್ಕೆ ಟೊಂಕಕಟ್ಟಿದೆ. ಹೊಸ ಬದಲಾವಣೆಗಳು ಹೀಗಿವೆ:

1. ಪಿಂಚಣಿದಾರರು ತಮ್ಮ ಮೊದಲ ಪಿಂಚಣಿ ಹಣ ಪಡೆಯಲು, ಬ್ಯಾಂಕ್‌ಗಳಿಗೆ ಹೋಗಲೇಬೇಕಿಲ್ಲ. ಪಿಂಚಣಿ ಖಾತೆ ತೆರೆಯಲು, ಪಿಂಚಣಿದಾರನ ಉಪಸ್ಥಿತಿ ಅಗತ್ಯವಿಲ್ಲ.

2. ಒಂದು ವೇಳೆ ಪಿಂಚಣಿದಾರ ಸಂಗಾತಿಯೊಂದಿಗೆ ಬ್ಯಾಂಕ್‌ನಲ್ಲಿ ಜಂಟಿ ಖಾತೆ ಹೊಂದಿದ್ದರೆ, ಅವರು ಮೃತಪಟ್ಟ ನಂತರ ಅವರ ಸಂಗಾತಿ ಬ್ಯಾಂಕ್‌ಗೆ ಫಾರ್ಮ್ 14 ಅನ್ನು ಸಲ್ಲಿಸುವ ಅಗತ್ಯವಿಲ್ಲ. ಬ್ಯಾಂಕ್‌ಗಳು ಹೊಸ ಖಾತೆ ತೆರೆಯಿರಿ ಎಂದು ಹೇಳುವಂತೆಯೂ ಇಲ್ಲ. ಸಂಗಾತಿ ಮರಣಪ್ರಮಾಣಪತ್ರ ಸಲ್ಲಿಸಿದರೆ ಸಾಕು.

3. ಪಿಂಚಣಿದಾರರು ಮೃತಪಟ್ಟ ವೇಳೆ, ಬ್ಯಾಂಕ್‌ಗಳು ತಾವಾಗಿಯೇ ಪಿಂಚಣಿ ಯಾರಿಗೆ ಸಲ್ಲಬೇಕು ಎನ್ನುವುದನ್ನು ಗುರ್ತಿಸಬೇಕು. ಒಂದು ವೇಳೆ ಸಂಗಾತಿ ಹೊರತುಪಡಿಸಿ, ಇತರೆ ಸಂಬಂಧಿಕರಿಗೆ ಸಲ್ಲುವುದಾದರೆ, ಅವರು ತಾವು ಆರ್ಥಿಕ ಗಳಿಕೆ ಹೊಂದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು.

4. ಪಿಂಚಣಿದಾರರ ಮರಣ ನಂತರ ಸಂಗಾತಿ ಪಿಂಚಣಿ ಪಡೆಯುತ್ತಿದ್ದ ಪಕ್ಷದಲ್ಲಿ, ಪ್ರತೀ 6 ತಿಂಗಳಿಗೊಮ್ಮೆ, ತಾವು ಮದುವೆಯಾಗಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಒಂದು ವೇಳೆ ಮದುವೆಯಾದರೆ ಪಿಂಚಣಿ ರದ್ದಾಗುತ್ತದೆ.

5. ಪಿಂಚಣಿ ಪಡೆಯುವ ಪ್ರತೀ ವ್ಯಕ್ತಿ, ಪ್ರತೀವರ್ಷ ನವೆಂಬರ್‌ನಲ್ಲಿ ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್‌ಗಳು ಅಂತರ್ಜಾಲದ ಮೂಲಕ ಆಧಾರ್‌ ಆಧಾರಿತ ಜೀವನ್‌ ಪ್ರಮಾಣ್‌ ಅನ್ನು ಅಂಗೀಕರಿಸಬಹುದು. ಇನ್ನು ಬ್ಯಾಂಕ್‌ಗಳು ಪ್ರತೀವರ್ಷ ಅ.24, ನ.1, ನ.15, ನ.25ಕ್ಕೆ ಎಲ್ಲ ಪಿಂಚಣಿದಾರರಿಗೆ ಎಸ್‌ಎಂಎಸ್‌, ಇಮೇಲ್‌ಗ‌ಳ ಮೂಲಕ ಜೀವಿತ ಪ್ರಮಾಣಪತ್ರ ಸಲ್ಲಿಸುವಂತೆ ಎಚ್ಚರಿಸಬೇಕು.

6. ಇನ್ನು ಪ್ರತೀವರ್ಷ ಡಿ.1ರಂದು ಬ್ಯಾಂಕ್‌ಗಳು ಜೀವಿತ ಪ್ರಮಾಣಪತ್ರ ಸಲ್ಲಿಸದಿದ್ದವರ ಪಟ್ಟಿ ತಯಾರಿಸಬೇಕು. ಅವರಿಗೆ ಸಂದೇಶ ಕಳುಹಿಸಿ, ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಬಂದು ಪಡೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಬೇಕು.

7. ಒಂದು ವೇಳೆ ಪಿಂಚಣಿಯು ಶಾಶ್ವತ ಅಂಗವೈಕಲ್ಯ ಮಗುವಿಗೆ ಹೋಗುತ್ತಿದ್ದರೆ, ಆ ಮಗು ಇನ್ನು ಪ್ರತೀವರ್ಷ ಅಂಗವೈಕಲ್ಯ ಹೊಂದಿರುವ ಬಗ್ಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಕೇವಲ ತಾನು ಗಳಿಕೆ ಮಾಡುತ್ತಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ತಾತ್ಕಾಲಿಕ ವೈಕಲ್ಯ ಹೊಂದಿದ್ದರೆ, 5 ವರ್ಷಕ್ಕೊಮ್ಮೆ ಪೋಷಕರು ಪ್ರಮಾಣಪತ್ರ ಸಲ್ಲಿಸಬೇಕು.

ಟಾಪ್ ನ್ಯೂಸ್

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Americ ಚುನಾವಣೆ ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

US elections ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.