ಆರೋಗ್ಯ ವಿಮೆ ವ್ಯಾಪ್ತಿಗೆ ಮತ್ತಷ್ಟು ಕಾಯಿಲೆ ; IRDA ನಿರ್ಧಾರ
Team Udayavani, Apr 19, 2020, 5:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ ವೈರಸ್ ಸೋಂಕಿನಂತಹ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಆರೋಗ್ಯ ವಿಮೆಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿ ಮಾಡುವ ನಿಟ್ಟಿನಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮಹತ್ವದ ಹೆಜ್ಜೆ ಇರಿಸಿದೆ.
ಐಆರ್‌ಡಿಎ ಆದೇಶದಂತೆ ಈಗಿರುವ ಕಾಯಿಲೆಗಳ ಜತೆಗೆ, ಮಾನಸಿಕ ರೋಗ, ಬೊಜ್ಜು, ಮೆನೋಪಾಸ್ (ಮುಟ್ಟು ನಿಲ್ಲುವ ಅವಧಿ), ಅಲ್‌ಝೈಮರ್, ಪಾರ್ಕಿನ್ಸನ್ ರೀತಿಯ ಅನಾರೋಗ್ಯ ಸಮಸ್ಯೆಗಳು ಮತ್ತು ರೋಬೋಟಿಕ್ ಸರ್ಜರಿ ಕೂಡ ಇನ್ನುಮುಂದೆ ವಿಮೆ ವ್ಯಾಪ್ತಿಗೆ ಸೇರಲಿದೆ.
ಇದರೊಂದಿಗೆ ಎಲ್ಲ ಪಾಲಿಸಿಗಳು ಒಂದೇ ರೀತಿಯ ಸೇರ್ಪಡೆ ಮತ್ತು ಹೊರಗಿರಿಸುವಿಕೆ ಅಂಶಗಳನ್ನು ಹೊಂದಿರಬೇಕು, ಪಾಲಿಸಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಕರಪತ್ರಗಳು ಏಕ ಭಾಷೆಯಲ್ಲಿ ಇರಬೇಕು ಎಂದು ಐಆರ್‌ಡಿಎ ವಿಮಾ ಕಂಪೆನಿಗಳಿಗೆ ಸೂಚನೆ ನೀಡಿದೆ.
ಈ ಎಲ್ಲ ಬದಲಾವಣೆಗಳ ಅನುಷ್ಠಾನಕ್ಕೆ ಸೆ.30ರ ಗಡುವು ನಿಗದಿ ಮಾಡಲಾಗಿದೆ. ಐಆರ್‌ಡಿಎ ಸೂಚನೆಯಂತೆ ಪಾಲಿಸಿಯಲ್ಲಿ ಬದಲಾವಣೆಗಳನ್ನು ತರಲು ವಿಮಾ ಕಂಪೆನಿಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಈ ಎಲ್ಲ ಬದಲಾವಣೆಗೆ ಅನುಗುಣವಾಗಿ ವಿಮಾ ಮೊತ್ತ ಶೇ.25ರಷ್ಟು ಹೆಚಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.