ನೀವು ಇಷ್ಟು ಮಾತ್ರ ಮಾಡಿದರೇ, ಕೋಟ್ಯಾಧಿಪತಿಯಾಗಬಹುದು..! ಏನದು..? ಮಾಹಿತಿ ಇಲ್ಲಿದೆ..!
Team Udayavani, Apr 27, 2021, 10:29 AM IST
ನವ ದೆಹಲಿ : ನೀವು ಕೋಟ್ಯಾಧಿಪತಿಯಾಗಲೂ ಯಾವ ವ್ಯವಹಾರವನನ್ನು ಆರಂಭಿಸಬೇಕಂತಿಲ್ಲ. ನಿಮಗಿರುವ ಕಡಿಮೆ ಮಿತಿಯೊಳಗೆ ನೀವು ಕೋಟ್ಯಾಧಿಪತಿಯಾಗಲು ಇಲ್ಲೊಂದು ಅವಕಾಶವಿದೆ.
ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಕೋಟ್ಯಾಧಿಪತಿ ಆಗಬಹುದು. ಹೌದು ಸರ್ಕಾರವು ನಿಮಗೊಂದು ಉತ್ತಮವಾದ ಒಂದು ಅವಕಾಶವನ್ನು ಒದಗಿಸಿಕೊಡುತ್ತಿದೆ. ಎನ್ ಪಿ ಎಸ್ ಯೋಜನೆ ಆರಂಭಿಸಿದೆ. ಇದರಿಂದ ಜನರು ಸ್ವಲ್ಪ ಹಣವನ್ನು ಠೇವಣಿ ಮಾಡುವುದರ ಮೂಲಕ ನಿವೃತ್ತಿ ಹೊಂದಿದ ನಂತರ ಈ ಹಣವನ್ನು ಮರಳಿ ಪಡೆಯಬಹುದಾಗಿದೆ.
ಹೌದು, ದಿನಕ್ಕೆ ಕೇವಲ 74 ರೂಪಾಯಿಗಳನ್ನು ಎನ್ ಪಿ ಎಸ್(National Pension System)ನಲ್ಲಿ ಠೇವಣಿ ಮಾಡುವುದರಿಂದ ನಿವೃತ್ತಿ ನಂತರ 1 ಕೋಟಿ ರೂಪಾಯಿ ಪಡೆಯುವ ಭರ್ಜರಿ ಆಫರ್ ಇದು. ನಿಮಗೆ 20 ವಯಸ್ಸಾಗಿದ್ದರೆ ಈಗಿನಿಂದಲೇ ನಿಮ್ಮ ನಿವೃತ್ತಿಯಬಗ್ಗೆ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.
ಓದಿ : “ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ಆತ್ಮ ಸ್ಥೈರ್ಯದಿಂದ ಮುನ್ನಡೆಯಬೇಕು’
ಎನ್ ಪಿ ಎಸ್ ನ ಹಣವನ್ನು ನಿಮ್ಮಲ್ಲಿ ಎರಡು ಕಡೆ ಹೂಡಿಕೆ ಮಾಡಬಹುದಾಗಿದೆ, ಸ್ಟಾಕ್ ಮಾರ್ಕೆಟ್ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್ ಗಳು ಮತ್ತು ಕಾರ್ಪೊರೇಟ್ ಬಾಂಡ್ ಗಳು. ಖಾತೆಯನ್ನು ಆರಂಭಿಸುವ ಸಮಯದಲ್ಲಿ ಮಾತ್ರ ಎನ್ ಪಿ ಎಸ್ ನ ಎಷ್ಟು ಹಣ ಇಕ್ವಿಟಿಗೆ ಹೋಗುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದಾಗಿದೆ. ಸಾಮಾನ್ಯವಾಗಿ ಶೇಕಡಾ 75 ರಷ್ಟು ಹಣ ಈಕ್ವಿಟಿಗೆ ಹೋಗುತ್ತದೆ. ಇದರರ್ಥ ನೀವು ಪಿಪಿಎಫ್ ಅಥವಾ ಇಪಿಎಫ್ ಗಿಂತ ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬಹುದು.
ಈಗ ನೀವು ಎನ್ ಪಿಎಸ್ ಮೂಲಕ ಕೋಟ್ಯಾಧಿಪತಿಯಾಗಲು ಬಯಸಿದರೆ, ಸುಲಭ ಮಾರ್ಗವಿದೆ. ಸ್ವಲ್ಪ ನಾವು ಸ್ಮಾರ್ಟ ಆಗಿ ಇರುವುದು ಕೂಡ ಅಗತ್ಯವಿದೆ.
ನಿಮಗೆ 20 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು ದಿನಕ್ಕೆ 74 ರೂಗಳನ್ನು ಉಳಿಸುವ ಮೂಲಕ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 2230 ರೂಗಳನ್ನು ಠೇವಣಿ ಹೂಡಿದರೇ, ನೀವು ಇದನ್ನು ಮಾಡಲು ಹಿಂಜರಿಯಬೇಕೆಂದಿಲ್ಲ. ಇದರಿಂದ ಈಗ ನಿಮಗೆ ಶೇಕಡಾ. 9 ರಷ್ಟು ಲಾಭ ಪಡೆಯಬಹುದು. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 1.03 ಕೋಟಿ ರೂಪಾಯಿ ಆಗಿರುತ್ತದೆ.
ಓದಿ : ದೇಶದಲ್ಲಿ ಕೋವಿಡ್ ಮಹಾಸ್ಪೋಟ : 24 ಗಂಟೆಗಳಲ್ಲಿ 3 ಲಕ್ಷ ದಾಟಿದ ಪ್ರಕರಣಗಳು
ಇನ್ನು, ನೀವು ಈ ಎಲ್ಲಾ ಹಣವನ್ನು ಒಮ್ಮೆಗೇ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ ಶೇ.60 ರಷ್ಟು ಹಿಂಪಡೆಯಬಹುದು, ಉಳಿದ ಶೇಕಡಾ. 40 ರಷ್ಟು ವರ್ಷಾಶನ ಯೋಜನೆಯಲ್ಲಿ ಹಾಕಬೇಕು, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.