ರಿಸ್ಕ್ ಫ್ಯಾಕ್ಟರ್… ಹೂಡಿಕೆಗೂ ಇದೆ ವಯಸ್ಸಿನ ನಂಟು
ರಿಸ್ಕ್ ಎಂದರೆ ನೇರವಾಗಿ ನಾವು ಹೂಡುವ ಅಸಲು ಮೊತ್ತಕ್ಕೇ ಬರುವ ಸಂಚಕಾರ ಎಂದೇ ತಿಳಿಯಬೇಕಾಗುತ್ತದೆ.
Team Udayavani, Dec 11, 2020, 5:47 PM IST
ಹೂಡಿಕೆ ಮಾಡಬೇಕು ಅಂತ ಯೋಚಿಸುವಾಗಲೇ ನಮ್ಮ ದುಡ್ಡಿಗೆ ತೊಂದರೆ ಇಲ್ವಾ? ಅನ್ನೋ ಮುನ್ನೆಚ್ಚರಿಕೆಯ ಅನುಮಾನ ಕೂಡ ಸುಳಿಯುತ್ತದೆ. ಈ ಹೂಡಿಕೆಗೂ, ವಯಸ್ಸಿಗೂ ನಂಟಿದೆ. ರಿಸ್ಕ… ತೆಗೆದುಕೊಳ್ಳಲು ವಯಸ್ಸೂ ಇರಬೇಕು. ಯಾವ ವಯಸ್ಸಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು ಅನ್ನೋದರ ವಿವರ ಇಲ್ಲಿದೆ.
ನಮ್ಮ ವಯಸ್ಸಿಗೂ ಹೂಡಿಕೆಗೂ ಇರುವ ನಿಕಟ ನಂಟಿನಲ್ಲಿ ರಿಸ್ಕ್ ಫ್ಯಾಕ್ಟರ್ ಎನ್ನುವುದು ಪ್ರಧಾನ ಪಾತ್ರ ವಹಿಸುತ್ತದೆ. ಹೂಡಿಕೆಯಲ್ಲಿ ರಿಸ್ಕ್ಫ್ಯಾಕ್ಟರ್ ಎಂದರೆ ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿಯಲ್ಲದೆ ಬೇರೇನೂ ಅಲ್ಲ. ನಮ್ಮ ಹೂಡಿಕೆ ಮೇಲಿನ ಲಾಭ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಸಿಗುವುದನ್ನು ರಿಸ್ಕ್ ಎಂದು ಹೇಳಲಾಗುವುದಿಲ್ಲ. ರಿಸ್ಕ್ ಎಂದರೆ ನೇರವಾಗಿ ನಾವು ಹೂಡುವ ಅಸಲು ಮೊತ್ತಕ್ಕೇ ಬರುವ ಸಂಚಕಾರ ಎಂದೇ ತಿಳಿಯಬೇಕಾಗುತ್ತದೆ.
30 ವರ್ಷದವರು
ಉದ್ಯೋಗಕ್ಕೆ ತೊಡಗಿದಾಕ್ಷಣ ಸಿಗುವ ತಿಂಗಳ ಸಂಬಳದಲ್ಲಿ ಹೆಚ್ಚಿನ ಪ್ರಮಾಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು ನಮ್ಮ ವಯಸ್ಸಿನ ಕಾರಣಕ್ಕೆ. 25-30ರ ವಯೋ ವರ್ಗದಲ್ಲಿ ಉದ್ಯೋಗ ಸಿಕ್ಕಿದಾಗ ಬದುಕಿನಲ್ಲಿ ಆಗಷ್ಟೇ ಸೆಟಲ್ ಆಗುವ ಹಂತದಲ್ಲಿ ನಾವಿರುವುದರಿಂದ ಹೆಚ್ಚಿನ ಪ್ರಮಾಣದ ಉಳಿತಾಯ ಸಾಧ್ಯವಾಗುತ್ತದೆ. ಇವರಲ್ಲಿ ಹೆಚ್ಚಿನವರು ಬದುಕಿನಲ್ಲಿ ಹೆಚ್ಚು ರಿಸ್ಕ… ತೆಗೆದುಕೊಳ್ಳುವ ಮನೋಸ್ಥಿತಿಯಲ್ಲಿರುತ್ತಾರೆ. ಹೂಡಿಕೆ ವಿಷಯದಲ್ಲೂ ಈ ರಿಸ್ಕ… ಕೆಲಸ ಮಾಡುತ್ತದೆ. ಹೇಗೆಂದರೆ, ಹೆಚ್ಚು ರಿಸ್ಕ…, ಹೆಚ್ಚು ಲಾಭವಿರುವ ಶೇರುಗಳಲ್ಲಿ ಹಣ ಹೂಡುವುದಕ್ಕೆ ಈ ವಯೋ ವರ್ಗದವರು ಮುನ್ನುಗ್ಗುತ್ತಾರೆ.
50ವರ್ಷದವರು
ಸಾಮಾನ್ಯವಾಗಿ 40ರಿಂದ 50ರ ವಯೋವರ್ಗದಲ್ಲಿ ವಿವೇಕಯುತ ಹೂಡಿಕೆದಾರರಾಗಿರುತ್ತಾರೆಯ ಶೇರುಗಳ ಮೇಲಿನ ರಿಸ್ಕೀ ಹೂಡಿಕೆಯನ್ನು ಅವರು ಕಡಿಮೆ ಮಾಡುತ್ತಾರೆ. ಅಸಲು ಹೂಡಿಕೆ ಮೊತ್ತ ಭದ್ರವಿರಬೇಕು; ಆಕರ್ಷಕ ಲಾಭವೂ ಕೈಸೇರಬೇಕು ಎಂಬ ಯೋಜನೆಯನ್ನು ಅನುಸರಿಸುತ್ತಾರೆ. 50ರಿಂದ 60ರ ವಯೋವರ್ಗದವರು ನಿವೃತ್ತಿಯ ಕಡೆಗೆ ಸಾಗುವುದರಿಂದ ರಿಸ್ಕ… ಫ್ಯಾಕ್ಟರ್ ಶೂನ್ಯವಿರುವ ಹೂಡಿಕೆ ಮಾರ್ಗವನ್ನು ಅನುಸರಿಸುವುದು ಸಹಜವೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.