![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 22, 2017, 4:57 PM IST
ಹೊಸದಿಲ್ಲಿ : ಇಂಡಿಯನ್ ರೈಲ್ವೇ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ) ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಪೇಮೆಂಟ್ ಗೇಟ್‌ವೇ ಬಳಸುವ ಹಲವಾರು ಬ್ಯಾಂಕುಗಳನ್ನು ಬ್ಲಾಕ್ ಮಾಡಿದೆ. ಅನುಕೂಲತೆಯ ಶುಲ್ಕಕ್ಕೆ ಸಂಬಂಧಿಸಿದ ವಿವಾದಗಳ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಹೀಗೆ ಮಾಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಈಗಿನ ಪ್ರಕಾರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಹೊಂದಿರುವವರು ಮಾತ್ರವೇ ಅವುಗಳನ್ನು ಪಾವತಿಗಾಗಿ ಬಳಸಬಹುದಾಗಿದೆ.
ನೋಟು ಅಮಾನ್ಯದ ಬಳಿಕದಲ್ಲಿ ಐಆರ್‌ಸಿಟಿಸಿ ಗ್ರಾಹಕರಿಗೆ ತಾನು ವಿಧಿಸುತ್ತಿದ್ದ 20 ರೂ.ಗಳ ಅನುಕೂಲತೆಯ ಶುಲ್ಕವನ್ನು ಮನ್ನಾ ಮಾಡಿತ್ತು.
ಆದರೆ ರೈಲು ಪ್ರಯಾಣಿಕರು ತಾವು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವಾಗ ಭರಿಸುವ ಅನುಕೂಲತೆಯ ಶುಲ್ಕದ ಹೊರೆಯನ್ನು ಬ್ಯಾಂಕುಗಳು ಹಂಚಿಕೊಳ್ಳಬೇಕೆಂದು ಐಆರ್‌ಸಿಟಿಸಿ ನಿರೀಕ್ಷಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ) ಅನುಕೂಲತೆ ಶುಲ್ಕ ಕುರಿತ ವಿವಾದವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೇ ಜತೆಗೆ ಚರ್ಚೆ ನಡೆಸುತ್ತಿದೆ.
ರೈಲ್ವೇ ಟಿಕೆಟಿಂಗ್ ಮತ್ತು ಇತರ ಪ್ರಯಾಣಿಕ ಸೇವಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಫೆಬ್ರವರಿ 16ರಂದು ನೀಡಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ 1,000 ರೂ. ವರೆಗಿನ ವಹಿವಾಟುಗಳಿಗೆ 5 ರೂ. ಮತ್ತು 1,001 ರೂ. ಮತ್ತು 2,000 ರೂ. ವರೆಗಿನ ವಹಿವಾಟುಗಳ ಮೇಲೆ 10 ರೂ. ಶುಲ್ಕ ವಿಧಿಸಬಹುದಾಗಿದೆ. ಮಾತ್ರವಲ್ಲದೆ 2,001 ರೂ.ಗೆ ಮೀರಿದ ವಹಿವಾಟುಗಳ ಮೇಲಿನ ಎಂಡಿಆರ್ ಶೇ.0.50 ಮೀರಕೂಡದು ಎಂದು ಅದು ಹೇಳಿದೆಯಲ್ಲದೆ ಇದಕ್ಕೆ ಗರಿಷ್ಠ 250 ರೂ.ಗಳ ಮಿತಿಯನ್ನು ನಿಗದಿಸಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.