ಜಿಯೋ ಇಂಟರಾಕ್ಟ್; ಲೈವ್ ವಿಡಿಯೋ ಕಾಲ್ ಮಾಡಿ ಬಚ್ಚನ್ ಜತೆ ಮಾತಾಡಿ!
Team Udayavani, May 7, 2018, 1:01 PM IST
ಮುಂಬಯಿ: ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪ್ರಪಂಚದ ಪ್ರಥಮ ಬ್ರಾಂಡ್ ಎಂಗೇಜ್‌ಮೆಂಟ್ ವೀಡಿಯೋ ವೇದಿಕೆಯಾದ ‘ಜಿಯೋ ಇಂಟರಾಕ್ಟ್’ ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (‘ಜಿಯೋ’) ಘೋಷಿಸಿದೆ.
ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ ಸೇವೆಗಳನ್ನು ಈ ವೇದಿಕೆಯ ಮೂಲಕ ಒದಗಿಸಲಾಗುವುದು. ಈ ವೇದಿಕೆಯೊಡನೆ ಕೈಜೋಡಿಸಿರುವವರ ಪೈಕಿ ಮೊದಲಿಗರಾದ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ಈ ಮೂಲಕ ತಮ್ಮ ಮುಂಬರುವ ಚಿತ್ರ ‘102 ನಾಟ್ ಔಟ್’ದ ಪ್ರಚಾರವನ್ನು ಅತ್ಯಂತ ವಿನೂತನ ರೀತಿಯಲ್ಲಿ ಕೈಗೊಳ್ಳಲಿದ್ದಾರೆ.
186 ಮಿಲಿಯನ್ ಜಿಯೋ ಗ್ರಾಹಕರು ಹಾಗೂ ಇತರ 150 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪಬಲ್ಲ ಜಿಯೋ ಇಂಟರಾಕ್ಟ್, ಚಲನಚಿತ್ರ ಪ್ರಚಾರ ಹಾಗೂ ಬ್ರಾಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳ ಅತಿದೊಡ್ಡ ವೇದಿಕೆಯಾಗಿ ಬೆಳೆಯುವ ಗುರಿ ಹೊಂದಿದೆ. ಮುಂದಿನ ಕೆಲ ವಾರಗಳಲ್ಲಿ ವೀಡಿಯೋ ಕಾಲ್ ಸೆಂಟರ್, ವೀಡಿಯೋ ಕೆಟಲಾಗ್ ಹಾಗೂ ವರ್ಚುಯಲ್ ಶೋರೂಮ್‌ನಂತಹ ಸೇವೆಗಳನ್ನು ಈ ವೇದಿಕೆಯಲ್ಲಿ ಪರಿಚಯಿಸಲಿರುವ ಜಿಯೋ, ಗ್ರಾಹಕರಿಗೆ ವಿನೂತನ ಅನುಭವ ಕಟ್ಟಿಕೊಡಲಿದೆ.
ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಈ ಬಗೆಯಲ್ಲಿ ಬಳಸುತ್ತಿರುವುದು ಪ್ರಪಂಚದಲ್ಲೇ ಇದು ಮೊದಲ ಸಲವಾಗಿದ್ದು ಈ ಪ್ರಯತ್ನ ಬ್ರಾಂಡ್‌ಗಳು ಹಾಗೂ ಗ್ರಾಹಕರ ನಡುವಿನ ಒಡನಾಟಕ್ಕೆ ಹೊಸ ಆಯಾಮ ನೀಡಲಿದೆ.
ಜಿಯೋ ಇಂಟರಾಕ್ಟ್‌ನ ಪ್ರಥಮ ಸೇವೆ ಲೈವ್ ವೀಡಿಯೋ ಕಾಲ್ ಕುರಿತು:
ಜಿಯೋಇಂಟರಾಕ್ಟ್‌ನ ಪ್ರಥಮ ಕೊಡುಗೆಯಾದ ‘ಲೈವ್ ವೀಡಿಯೋ ಕಾಲ್’ ಸೇವೆ ಬಳಸಿ ಜಿಯೋ ಗ್ರಾಹಕರು ಹಾಗೂ ಇತರ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೆಚ್ಚಿನ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್‌ರಿಗೆ ನೇರ ವೀಡಿಯೋ ಕಾಲ್ ಮಾಡಬಹುದು. ಈ ಸೌಲಭ್ಯ ಮೇ 4ರಿಂದ ಆರಂಭವಾಗಿದೆ.
ಈ ಮೂಲಕ ಅಮಿತಾಭ್ ಹೊಸ ಚಿತ್ರ ‘102 ನಾಟ್ ಔಟ್’ ಬಗ್ಗೆ ಪ್ರಶ್ನೆಗಳನ್ನು ಕೇಳುವುದಷ್ಟೇ ಅಲ್ಲದೆ ಬುಕ್ ಮೈ ಶೋ ಸಹಯೋಗದಲ್ಲಿ ಸಿನಿಮಾ ಟಿಕೇಟುಗಳನ್ನೂ ಕಾಯ್ದಿರಿಸಬಹುದಾಗಿದೆ.
ಬಳಸುವುದು ಹೇಗೆ:
ಜಿಯೋ ಇಂಟರಾಕ್ಟ್ ಅನುಭವ ಪಡೆದುಕೊಳ್ಳಲು,
1. ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ
2. ಆಪ್ ತೆರೆದು ಜಿಯೋಇಂಟರಾಕ್ಟ್ ಐಕನ್ ಮೇಲೆ ಕ್ಲಿಕ್ ಮಾಡಿ
3. ವೀಡಿಯೋ ಕಾಲ್ ಪ್ರಾರಂಭಿಸಿ ಅಮಿತಾಭ್ ಬಚ್ಚನ್‌ರೊಡನೆ ಮಾತನಾಡಿ
4. ‘ಶೇರ್’ ಆಯ್ಕೆ ಬಳಸಿ ವೀಡಿಯೋ ಕಾಲ್ ಅನುಭವವನ್ನು ಮನೆಯವರು ಹಾಗೂ ಮಿತ್ರರೊಡನೆ ಹಂಚಿಕೊಳ್ಳುವುದೂ ಸಾಧ್ಯವಿದೆ.
ವಿಶಿಷ್ಟ ಹಾಗೂ ವಿನೂತನವಾದ ಈ ಸೇವೆ ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ಮೂಲಕ ಬಳಕೆದಾರರ ಪ್ರಶ್ನೆಗಳನ್ನು ಕೇಳಿಸಿಕೊಂಡು ಅವರಿಗೆ ಸಮರ್ಪಕ ಉತ್ತರಗಳನ್ನು ನೀಡುತ್ತದೆ.
ಅಷ್ಟೇ ಅಲ್ಲದೆ, ಇದರಲ್ಲಿರುವ ಸ್ವಯಂ ಕಲಿಕೆಯ (ಆಟೋ ಲರ್ನಿಂಗ್) ವ್ಯವಸ್ಥೆ ತಾನು ನೀಡುವ ಉತ್ತರಗಳ ನಿಖರತೆಯನ್ನು ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ. ಜಿಯೋನ ಸದೃಢ ಮೊಬೈಲ್ ವೀಡಿಯೋ ಜಾಲ ಹಾಗೂ 186 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕ ಬಳಗವನ್ನು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸ್ವಯಂಕಲಿಕೆಯಂತಹ (ಮಶೀನ್ ಲರ್ನಿಂಗ್) ಹೊಸ ತಂತ್ರಜ್ಞಾನಗಳೊಡನೆ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಿಯೋ ಇಂಟರಾಕ್ಟ್ ಉದ್ದಿಮೆಗಳಿಗಾಗಿ ಬ್ರಾಂಡ್ ಎಂಗೇಜ್‌ಮೆಂಟ್‌ನ ವಿಶಿಷ್ಟ ಮಾರ್ಗವೊಂದನ್ನು ಒದಗಿಸಿದೆ.
VCBaaS (ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್) ಎಂದು ಗುರುತಿಸಲಾಗಿರುವ ಜಿಯೋಇಂಟರಾಕ್ಟ್ ವೇದಿಕೆಯು ಕೃತಕ ಬುದ್ಧಿಮತ್ತೆ ಹಾಗೂ ವೀಡಿಯೋ ಕಾಲ್ ತಂತ್ರಜ್ಞಾನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವ ಮೂಲಕ ಪರಿಣಾಮಕಾರಿ ಬ್ರಾಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ. ಉದ್ದಿಮೆಗಳು ಹಾಗೂ ಗ್ರಾಹಕರ ನಡುವಿನ ಸಂವಹನದಲ್ಲಿ (B2C) ಈ ತಂತ್ರಜ್ಞಾನ ದೊಡ್ಡಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವ ನಿರೀಕ್ಷೆಯಿದೆ. ಈ ವೇದಿಕೆಯನ್ನು ಬಳಸಿ ವರ್ಚುಯಲ್ ಶೋರೂಮ್, ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇ ಕಾಮರ್ಸ್ ಆರ್ಡರಿಂಗ್ ಕಾರ್ಟ್‌ನಂತಹ ಅನ್ವಯಗಳನ್ನು ರೂಪಿಸುವ ಹೊಸ ಅವಕಾಶವೂ ತಂತ್ರಜ್ಞರಿಗೆ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.