ರೆಡ್ ಮಿ ಗೋ ಬಳಕೆದಾರರಿಗೆ ಜಿಯೋ ಲೈಫ್ ಕೊಡುಗೆ; 2,200 ಕ್ಯಾಶ್ ಬ್ಯಾಕ್
Team Udayavani, Apr 5, 2019, 2:34 PM IST
ಮುಂಬೈ: ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಜಿಯೋ ತನ್ನ ವಿಶಿಷ್ಟ ರೆಡ್‌ಮಿ ಗೋ ಕೊಡುಗೆಯೊಡನೆ ಮತ್ತೊಂದು ಆಕರ್ಷಕ ಡಿಜಿಟಲ್ ಲೈಫ್ ಕೊಡುಗೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.
#AapkiNayiDuniya ಎಂದು ಇತ್ತೀಚೆಗೆ ಪರಿಚಯಿಸಲಾದ, ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್‌ಮಿ ಗೋ ಬಳಕೆದಾರರಿಗೆ ಜಿಯೋದಿಂದ ಆಕರ್ಷಕ ಕ್ಯಾಶ್‌ಬ್ಯಾಕ್ ಹಾಗೂ ಹೆಚ್ಚುವರಿ ಡೇಟಾ ಕೊಡುಗೆ ದೊರಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ನೊಂದಿಗೆ ಡಿಜಿಟಲ್ ಜೀವನದ ಅನುಭವ ಪಡೆಯಲು ಅಪೇಕ್ಷಿಸುವ ಲಕ್ಷಾಂತರ ಭಾರತೀಯರಿಗೆ ಅತ್ಯುತ್ತಮ ಮೌಲ್ಯ ನೀಡುವ ಉದ್ದೇಶದಿಂದ ಜಿಯೋ-ರೆಡ್‌ಮಿ ಗೋ ಕೊಡುಗೆಯನ್ನು ರೂಪಿಸಲಾಗಿದೆ. ಈ ಕೊಡುಗೆಯು ರೆಡ್‌ಮಿ ಗೋ ಗ್ರಾಹಕರಿಗೆ ರೂ. 2200 ವಿಶೇಷ ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ರೆಡ್‌ಮಿ ಗೋ ಮಾರ್ಚ್ 22ರಿಂದ ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗಿದೆ.
ಜಿಯೋ-ರೆಡ್‌ಮಿ ಗೋ ಕೊಡುಗೆ:
ಶಿಯೋಮಿ ರೆಡ್‌ಮಿ ಗೋ ಸಾಧನಗಳಿಗೆ ಜಿಯೋ ಅನನ್ಯ ಪಾಲುದಾರ ಸಂಸ್ಥೆಯಾಗಿದ್ದು, ಈ ಕೊಡುಗೆಯು ಡಿಜಿಟಲ್ ಜೀವನಶೈಲಿಯನ್ನು ಎಲ್ಲ ಭಾರತೀಯರಿಗೂ ತಲುಪಿಸಲಿದೆ. ಶಿಯೋಮಿ ರೆಡ್‌ಮಿ ಗೋ ಸಾಧನದ ಮೇಲೆ ನೀಡಲಾಗುವ ರೂ. 2200 ತಕ್ಷಣದ ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ 198 ರೂ. ಹಾಗೂ 299 ರೂ. ರೀಚಾರ್ಜ್‌ಗಳಿಗೆ ಅನ್ವಯಿಸಲಿದೆ.
ಮೈಜಿಯೋ ಆ್ಯಪ್‌ನಲ್ಲಿ ತಲಾ 50 ರೂ. ಮೌಲ್ಯದ 44 ರಿಯಾಯಿತಿ ಕೂಪನ್ನುಗಳ ರೂಪದಲ್ಲಿ 2200 ರೂ. ಕ್ಯಾಶ್‌ಬ್ಯಾಕ್ ಅನ್ನು ಅರ್ಹ ಗ್ರಾಹಕರಿಗೆ ನೀಡಲಾಗುವುದು. ಈ ವೋಚರುಗಳನ್ನು ಆಮೇಲಿನ 198 ರೂ. ಹಾಗೂ 299 ರೂ. ರೀಚಾರ್ಜ್ ಗಳ ಮೇಲೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಆಮೇಲಿನ ರೀಚಾರ್ಜ್ ಗಳಲ್ಲಿ ಕ್ಯಾಶ್‌ಬ್ಯಾಕ್ ವೋಚರ್ ಬಳಸುವ ಮೂಲಕ 198 ರೂ. ರೀಚಾರ್ಜ್ 148 ರೂ. ದೊರಕಲಿದೆ. ಇದೇ ರೀತಿ, ಗ್ರಾಹಕರು 299 ರೂ. ರೀಚಾರ್ಜ್ ಅನ್ನು ವಾಸ್ತವಿಕವಾಗಿ 249 ರೂ. ಪಡೆದುಕೊಳ್ಳಬಹುದು.
100 ಜಿಬಿ ಹೆಚ್ಚುವರಿ ಡೇಟಾವನ್ನು ಗ್ರಾಹಕರು ತಲಾ 10 ಜಿಬಿಯ ಹೆಚ್ಚುವರಿ ಡೇಟಾ ಕೂಪನ್ನುಗಳ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇವುಗಳನ್ನು ವಾಯಿದೆಯ ಅವಧಿಯಲ್ಲಿ ಗರಿಷ್ಠ ಹತ್ತು (10) ಆಮೇಲಿನ ರೀಚಾರ್ಜುಗಳನ್ನು ಮಾಡಿದಾಗ ಬಳಸಿಕೊಳ್ಳಬಹುದು.
ನೆಟ್‌ವರ್ಕ್ ಅನುಕೂಲತೆ:
ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ, ಭಾರತ ಹಾಗೂ ಭಾರತೀಯರಿಗಾಗಿ ಹಲವು ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆಗಿರುವುದಷ್ಟೇ ಅಲ್ಲದೆ, ದೇಶದ ಅತಿವೇಗದ ನೆಟ್‌ವರ್ಕ್ ಎಂಬ ಹೆಗ್ಗಳಿಕೆಯನ್ನೂ ಜಿಯೋ ಸ್ಥಿರವಾಗಿ ಪಡೆಯುತ್ತ ಬಂದಿದೆ.
ಜಿಯೋ ಜಾಲದ ಆಧುನಿಕ ತಂತ್ರಜ್ಞಾನ, ಅತಿವೇಗದ ಡೇಟಾ, ಉಚಿತ ಎಚ್‌ಡಿ ವಾಯ್ಸ್ ಹಾಗೂ ಪ್ರೀಮಿಯಂ ಕಂಟೆಂಟ್‌ಗಳ ಮೂಲಕ ರೆಡ್‌ಮಿ ಗೋ ತನ್ನ ಬಳಕೆದಾರರಿಗೆ ತೊಡಕಿಲ್ಲದ ಅತಿವೇಗದ ಡೇಟಾ ಅನುಭವವನ್ನು ನೀಡಲಿದೆ. ದೇಶವ್ಯಾಪಿ 4ಜಿ ಡೇಟಾ ಹಾಗೂ ವಾಯ್ಸ್ ಸೇವೆಗಳ (VoLTE) ಸರಿಸಾಟಿಯಿಲ್ಲದ ಅನುಭವವನ್ನು ನೀಡುವ ಏಕೈಕ ಜಾಲ ಜಿಯೋ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.