ಕಿಸಾನ್ ವಿಕಾಸ್ ಪತ್ರ ಯೋಜನೆ; ದೀರ್ಘ ಅವಧಿಯ ಹೂಡಿಕೆಗೆ ಸುರಕ್ಷಿತ
Team Udayavani, Oct 11, 2020, 6:20 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಭಾರತೀಯ ಅಂಚೆ ಇಲಾಖೆ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು. ಅಂಚೆ ಕಚೇರಿಯ ಬೇರೆ ಉಳಿತಾಯ ಯೋಜನೆಗಳಿಗಿಂತ ಇದರಲ್ಲಿ ಬಡ್ಡಿಮೊತ್ತ ಕಡಿಮೆಯಾದರೂ ಕೂಡ ದೀರ್ಘಾವಧಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸುರಕ್ಷಿತವಾದ ಆಯ್ಕೆಯಾಗಿದೆ.
ಸಾಮಾನ್ಯ ಜನರಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಸಣ್ಣ ಮಟ್ಟದ ಉಳಿತಾಯದಿಂದ ಜನರು ದ್ವಿಗುಣ ಲಾಭ ಪಡೆಯಬಹುದು. ಇದು ಸರಕಾರ ಬೆಂಬಲಿತ ಯೋಜನೆಯಾಗಿದ್ದು, ಹೆಚ್ಚು ಸುರಕ್ಷಿತ ಕೂಡ. ಅಂಚೆ ಕಚೇರಿಯಲ್ಲಿ ಚಾಲ್ತಿಯಲ್ಲಿರುವ ಈ ಸೇವೆ ಬಗ್ಗೆ ಅನೇಕರಿಗೆ ಅರಿವಿಲ್ಲ. 1988ರಲ್ಲಿಯೇ ಈ ಯೋಜನೆ ಜಾರಿಗೆ ಬಂದಿತ್ತು. 2011ರಲ್ಲಿ ಸ್ಥಗಿತಗೊಂಡಿತಾದರೂ ಇದರ ಮಹತ್ವ ಅರಿತ ಸಮಿತಿಗಳು ಇದನ್ನು ಮತ್ತೆ ಜಾರಿಗೆ ತರುವಂತೆ ಶಿಫಾರಸು ಮಾಡಿದವು. ಇದರ ಪರಿಣಾಮ 2014ರಿಂದ ಈ ಯೋಜನೆ ಮತ್ತೆ ಚಾಲ್ತಿಗೆ ಬಂದಿತು.
ಶೇ. 6.9ರಷ್ಟು ಬಡ್ಡಿ ದರ
ತ್ತೈಮಾಸಿಕ ಹಣಕಾಸಿನ ಆಧಾರದ ಮೇಲೆ ಈ ಉಳಿತಾಯಕ್ಕೆ ಬಡ್ಡಿದರವನ್ನು ಹಣಕಾಸು ಇಲಾಖೆ ಅನುಸರಿಸುತ್ತದೆ. ಸದ್ಯ ಈ ಉಳಿತಾಯ ಖಾತೆ ಹೊಂದುವವರು ಶೇ.6.9ರಷ್ಟು ಬಡ್ಡಿಯನ್ನು ಪಡೆಯಬಹುದು. ಜಂಟಿಯಾಗಿ ಖಾತೆ ತೆರೆಯಬಹುದು 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಕಿಸಾನ್ ವಿಕಾಸ್ ಪ್ರಮಾಣ ಪತ್ರ ಪಡೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಜತೆಗೆ 18 ವರ್ಷಕ್ಕಿಂತ ಕೆಳ ಹರೆಯದವರ ಪರವಾಗಿ ಹೆತ್ತವರು ಅಥವಾ ಪೋಷಕರು ಅದರ ಜವಾಬ್ದಾರರಾಗಿರುತ್ತಾರೆ.
ಕನಿಷ್ಠ 1 ಸಾವಿರ ಹೂಡಿಕೆ
ಇದರಲ್ಲಿ ಕನಿಷ್ಠ 1,000 ರೂ.ಗಳಿಂದ ಎಷ್ಟಾದರೂ ಹಣ ಉಳಿತಾಯ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಜತೆಗೆ ಹೂಡಿಕೆ ಮಾಡಿದ ಮೊತ್ತ ಮೆಚ್ಯುರಿಟಿಗೆ ಬರಲು 10 ವರ್ಷ 4 (124)ತಿಂಗಳುಗಳು ಬೇಕಾಗಿದ್ದು , ಅಗತ್ಯಬಿದ್ದರೆ ಯೋಜನೆ ಪ್ರಾರಂಭಿಸಿದ ದಿನಾಂಕದಿಂದ ಎರಡು ಅಥವಾ ಒಂದೂವರೆ ವರ್ಷದಲ್ಲಿ ಹಣ ಹಿಂಪಡೆಯಬಹುದು. ಇದಕ್ಕೆ ನಾಮ ನಿರ್ದೇಶನ ಮಾಡುವ ಆಯ್ಕೆ ಇದ್ದು, ವ್ಯಕ್ತಿಯೊಬ್ಬರು ಕುಟುಂಬದ ಇತರ ವ್ಯಕ್ತಿಗಳಿಗೆ ಕೂಡ ನಾಮ ನಿರ್ದೇಶನ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.