ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ ಕೋಟಕ್ ಮಹೀಂದ್ರಾ ಬ್ಯಾಂಕ್..!
Team Udayavani, Mar 25, 2021, 1:46 PM IST
ನವ ದೆಹಲಿ : ಹಣದುಬ್ಬರ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನ್ನು ನೀಡುತ್ತಿದ್ದು, ಗ್ರಾಹಕ ಸ್ನೇಹಿ ಆಫರ್ ಎಂದು ಕರೆಸಿಕೊಳ್ಳುತ್ತಿದೆ. ಹೌದು, ಹಣದುಬ್ಬರದ ಈ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಸುಲಭವಾಗುವಂತೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ.
ಹೌದು, ಈ ಆಫರ್ ಅಡಿಯಲ್ಲಿ ಗೃಹ ಸಾಲದ ಆರಂಭಿಕ ಬಡ್ಡಿದರವನ್ನು ಶೇಕಡಾ 6.65ಕ್ಕೆ ಇಳಿಸಲಾಗಿದೆ ಎಂದು ಕೋಟಕ್ ಮಹೀಂದ್ರಾ ಹೇಳಿಕೊಂಡಿದೆ. ಆದರೇ, ಈ ಆಫರ್ ಸೀಮಿತ ಅವಧಿಯ ತನಕ ಮಾತ್ರ ಇರುವುದು. ಈ ಪ್ರಯೋಜನವನ್ನು ಪಡೆಯಲು ಇಚ್ಛಿಸುವವರು ಆದಷ್ಟು ಬೇಗ ಈ ಬಗ್ಗೆ ಗಮನಹರಿಸಬಹುದು.
ಓದಿ : ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್
ಇನ್ನು, ಈ ಆಫರ್ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಗೃಹ ಸಾಲ ವಲಯದಲ್ಲಿ ಈಗ ಬೇರೆ ಬ್ಯಾಂಕುಗಳಿಗಿಂತ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಗ್ಗದ ಗೃಹ ಸಾಲವನ್ನು ನೀಡುತ್ತಿರುವುದಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ಹೇಳಿಕೊಂಡಿದೆ.
ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ಗ್ರಾಹಕರಿಗೆ ಶೇಕಡಾ 6.65 ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುವುದು ಮತ್ತು ಒಟ್ಟು ಮಾಸಿಕ ಗಳಿಕೆಗೆ ಅನುಗುಣವಾಗಿ ಬ್ಯಾಂಕ್ ಸಾಲವನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಆಸಕ್ತಿ ಇರುವವರು ಹೆಚ್ಚಿನ ಸ್ಪಷ್ಟತೆಗೆ ಮತ್ತು ಮಾಹಿತಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಗಮನಿಸಬಹುದಾಗಿದೆ.
ಓದಿ : ನಟಿಯರು ಹೀರೋಯಿನ್ ಪಾತ್ರದಿಂದ ಹೊರಬರಲೇ ಬೇಕು…: ಸೋನು ಗೌಡ ನೇರ ಮಾತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.