ಪೂರ್ವ ಮಾಹಿತಿ ನೀಡದ ದೊಡ್ಡ ಮೊತ್ತದ ಚೆಕ್ಗಳು ಬೌನ್ಸ್!
ಜ.1ರಿಂದ ಬರಲಿದೆ ಹೊಸ ನಿಯಮ
Team Udayavani, Dec 11, 2020, 6:08 AM IST
ಹೊಸದಿಲ್ಲಿ: ಬ್ಯಾಂಕ್ ಚೆಕ್ಗಳ ಮೂಲಕ ನಡೆಯ ಬಹುದಾದ ವಂಚನೆ ಗಳನ್ನು ತಡೆಯುವ ಉದ್ದೇಶದಿಂದ ಆರ್ಬಿಐ ಹೊಸ ನಿಯಮಗಳನ್ನು ಜಾರಿಗೊಳಿ ಸುತ್ತಿದೆ. 2021ರ ಜನವರಿ 1ರಿಂದ ಹೊಸ ಚೆಕ್ ಪಾವತಿಗೆ “ಪಾಸಿಟಿವ್ ಪೇ ಸಿಸ್ಟಮ…’ ಅನ್ನು ಪರಿಚಯಿಸಲಾಗುತ್ತಿದೆ. ಇದರನ್ವಯ ಯಾವುದೇ ಮುನ್ಸೂಚನೆ ನೀಡದೆ ನೀಡುವ ದೊಡ್ಡ ಮೊತ್ತದ ಚೆಕ್ಗಳು ಬೌನ್ಸ್ ಆಗುವ ಸಾಧ್ಯತೆಯೂ ಇರುತ್ತದೆ. 50,000 ರೂ. ಮೇಲ್ಪಟ್ಟ ಮೊತ್ತದ ಚೆಕ್ಗೆ ಬ್ಯಾಂಕ್ಗಳು ಹೆಚ್ಚುವರಿ ಮಾಹಿತಿ ಪಡೆಯುವ ಅವಕಾಶವನ್ನು ನೀಡಲಾಗಿದೆ.
ಪಾಸಿಟಿವ್ ಪೇ ಸಿಸ್ಟಮ್ ಅಡಿಯಲ್ಲಿ ಚೆಕ್ ನೀಡುವವರು ಎಸ್ಎಂಎಸ್, ಮೊಬೈಲ್ ಆ್ಯಪ್, ಇಂಟರ್ನೆಟ್ ಬ್ಯಾಂಕಿ ಂಗ್ ಅಥವಾ ಎಟಿಎಂ ಮೂಲಕ ಕೆಲವು ಮಾಹಿತಿಯನ್ನು ಇನ್ನು ಮುಂದೆ ಸಲ್ಲಿಸಬೇಕು. ಇದರಿಂದ ಬ್ಯಾಂಕ್ಗಳು ನಿರ್ದಿಷ್ಟ ಚೆಕ್ಗಳು ಬಂದಾಗ ಖಾತೆದಾರ ಎಲೆ ಕ್ಟ್ರಾನಿಕ್ ಮಾಧ್ಯಮದ ಮೂಲಕ ನೀಡಿದ ಪೂರ್ವ ಮಾಹಿತಿಯನ್ನು ತಾಳೆ ಹಾಕಿ ಚೆಕ್ ಅನ್ನು ಮಾನ್ಯ ಮಾಡುತ್ತವೆ. ಈ ರೀತಿಯ ಮಾಹಿತಿ ಇಲ್ಲದ ಸಂದರ್ಭ ಬ್ಯಾಂಕ್ ಚೆಕ್ ಅನ್ನು ಅಮಾನ್ಯಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ. 50 ಸಾವಿರ ರೂ. ಅಥವಾ ಹೆಚ್ಚಿನ ಮೊತ್ತಕ್ಕೆ ಈ ಮಾಹಿತಿಯನ್ನು ಬ್ಯಾಂಕ್ಗಳು ಕೇಳಬಹುದು. ಆದರೆ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಗಳಿಗೆ ಮಾತ್ರ “ಪಾಸಿಟಿವ್ ಪೇ ಸಿಸ್ಟಮ್’ ಅನ್ನು ಕಡ್ಡಾಯವಾಗಿ ಅನ್ವಯಿಸುವಂತೆ ಆರ್ಬಿಐ ಈಗಾಗಲೇ ತಿಳಿಸಿದೆ. ಕೆಲವು ಬ್ಯಾಂಕ್ಗಳು ಈ ನಿಟ್ಟಿನಲ್ಲಿ ಗ್ರಾಹಕರಿಗೆ ಮಾಹಿತಿ ನೀಡಲಾರಂಭಿಸಿವೆ.
ಏನೆಲ್ಲ ಮಾಹಿತಿ?
ಚೆಕ್ ನೀಡುವಾಗಲೇ ಆ ಖಾತೆದಾರರ ಬ್ಯಾಂಕ್ಗೆ ಮಾಹಿತಿ ನೀಡಬೇಕು. ಚೆಕ್ ಸಂಖ್ಯೆ, ದಿನಾಂಕ, ಯಾರ ಹೆಸರಿಗೆ ಚೆಕ್ ನೀಡಲಾಗುತ್ತಿದೆ, ಖಾತೆ ಸಂಖ್ಯೆ, ಎಷ್ಟು ಮೊತ್ತ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕು. ಮೊತ್ತ ನಗದು ಮಾಡಿಕೊಳ್ಳಲು ನೀಡುವ ಮುನ್ನ ಮಾಹಿತಿಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಚೆಕ್ ಪಾವತಿ ಸಂದರ್ಭ ವ್ಯತ್ಯಾಸಗಳು ಕಂಡುಬಂದಲ್ಲಿ ಚೆಕ್ ಅನ್ನು ಸಲ್ಲಿಸುವ ಹಾಗೂ ಸ್ವೀಕರಿಸುವ ಎರಡೂ ಬ್ಯಾಂಕ್ನಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಆರ್ಬಿಐ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.