ಎಲ್‌ಐಸಿ ನ್ಯೂ ಜೀವನ ಶಾಂತಿ ಯೋಜನೆ ಪರಿಷ್ಕರಣೆ
Team Udayavani, Jan 7, 2023, 5:45 AM IST
ಮುಂಬೈ:ಭಾರತೀಯ ಜೀವವಿಮಾ ನಿಗಮ(ಎಲ್‌ಐಸಿ) ತನ್ನ “ನ್ಯೂ ಜೀವನ್ ಶಾಂತಿ’ ಯೋಜನೆಯ ವರ್ಷಾಶನ(ಆ್ಯನ್ಯುಟಿ ರೇಟ್) ದರವನ್ನು ಪರಿಷ್ಕರಿಸಿದೆ. ಈ ಯೋಜನೆಯ ವರ್ಷಾಶನ ದರ ಏರಿಕೆಯಾಗಿದ್ದು, ಜ.5(ಗುರುವಾರ)ರಿಂದಲೇ ಇದು ಮಾರಾಟಕ್ಕೆ ಲಭ್ಯವಾಗಿದೆ.
ಜತೆಗೆ, ಅಧಿಕ ಖರೀದಿ ದರದ ಮೇಲೆ ನೀಡಲಾಗುವ ಪ್ರೋತ್ಸಾಹಧನವನ್ನೂ ಏರಿಕೆ ಮಾಡಲಾಗಿದೆ.
ನ್ಯೂ ಜೀವನ್ ಶಾಂತಿ ಎನ್ನುವುದು ಏಕಕಂತಿನ ವಿಮಾ ಯೋಜನೆಯಾಗಿದೆ. ಇಲ್ಲಿ ಪಾಲಿಸಿದಾರನಿಗೆ ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್ ನಿಶ್ಚಿತ ಅವಧಿಯ ವರ್ಷಾಶನದ ಆಯ್ಕೆ ಇರುತ್ತದೆ. ನಿವೃತ್ತಿ ನಂತರವೂ ಆದಾಯ ಬರಲಿ ಎಂದು ಆಶಿಸುವಂಥ ವೃತ್ತಿಪರ ಮತ್ತು ಸ್ವ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪರಿಚಯಿಸಲಾಗಿದೆ. ಜತೆಗೆ, ತಮ್ಮಲ್ಲಿ ಸಾಕಷ್ಟು ಹಣವಿದ್ದು, ಹೂಡಿಕೆ ಆಯ್ಕೆಯನ್ನು ಎದುರು ನೋಡುತ್ತಿರುವವರೂ ಈ ವಿಮೆಯನ್ನು ಮಾಡಿಸಿಕೊಳ್ಳಬಹುದು.
ನ್ಯೂ ಜೀವನ ಶಾಂತಿ ಪ್ಲ್ರಾನ್‌ನಡಿ ಸಿಗುವ ವರ್ಷಾಶನದ ಮೊತ್ತವನ್ನು ಎಲ್‌ಐಸಿ ವೆಬ್‌ಸೈಟ್ ಮತ್ತು ವಿವಿಧ ಎಲ್‌ಐಸಿ ಆ್ಯಪ್‌ಗಳ ಮೂಲಕ ಲೆಕ್ಕ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಯಾವುದಾದಲೂ ಎಲ್‌ಐಸಿ ಶಾಖೆ ಅಥವಾ ಡಿಡಿಡಿ.lಜಿcಜಿnಛಜಿಚ.ಜಿn ಅನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.