![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 6, 2021, 5:15 PM IST
ನವ ದೆಹಲಿ : ಭಾರತೀಯ ಜೀವನ್ ನಿಗಮದ ಅಥವಾ ಎಲ್ ಐ ಸಿ ಯ ಪಾಲಿಸಿದಾರರಾಗಿದ್ದರೇ,ಈ ಸುದ್ದಿಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.
ಹೌದು, ಎಲ್ ಐ ಸಿ ಇನ್ನು ಮುಂದೆ ವಾರದಲ್ಲಿ ಕೇವಲ ಐದು ದಿನಗಳು ಮಾತ್ರ ಕೆಲಸ ಮಾಡಲಿದೆ. ಉಳಿದೆರಡು ದಿನಗಳು ಸಾರ್ವಜನಿಕ ರಜಾ ದಿನವೆಂದು ಪರಿಗಣಿಸಲಾಗುತ್ತದೆ.
ಓದಿ : ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ
ಮೇ 10 ರ ನಂತರ ನಿಮಗೆ ಎಲ್ ಐ ಸಿ ಕಚೇರಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತೆರೆದಿರುತ್ತದೆ. ಇನ್ನು ಮುಂದೆ ಪ್ರತಿ ಶನಿವಾರವನ್ನು ಎಲ್ ಐ ಸಿ ಗೆ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಎಲ್‌ಐಸಿಯ ಹೊಸ ನಿಯಮಗಳ ಪ್ರಕಾರ, ಮೇ 10 ರಿಂದ ಎಲ್‌ಐಸಿ ಕಚೇರಿಗಳು ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಈಗ ಪ್ರತಿ ಶನಿವಾರ ನೌಕರರ ರಜಾದಿನವಿರುತ್ತದೆ.
ಎಲ್ ಐ ಸಿ ಯು ಕೆಲಸದ ದಿನಗಳಲ್ಲಿ ಈ ಬದಲಾವಣೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ತಿಳಿಸಿದ್ದು, ಹೊಸ ನಿಯಮಗಳ ಪ್ರಕಾರ, ಎಲ್ ಐ ಸಿ ಯ ಕಚೇರಿ ಮೇ 10 ರ ನಂತರ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 25 ರ ಅಡಿಯಲ್ಲಿ ಪಡೆದ ಅಧಿಕಾರಗಳ ಆಧಾರದ ಮೇಲೆ ಸರ್ಕಾರವು ಎಲ್ ಐ ಸಿ ಯಲ್ಲಿ ಈ ಬದಲಾವಣೆಯನ್ನು ತಂದಿದೆ.
ಓದಿ : ಕೋವಿಡ್ ಸೋಂಕಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ!
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.