2021 ಆರ್ಥಿಕ ವರ್ಷ: ಹೆಚ್ಚು ಕಾರು ಮಾರಾಟವಾದ ಟಾಪ್ ತ್ರಿ ಸಿಟಿಗಳ ಲಿಸ್ಟ್ ನಲ್ಲಿ ಬೆಂಗಳೂರು!?
Team Udayavani, May 4, 2021, 3:12 PM IST
ನವ ದಹೆಲಿ : ಕೋವಿಡ್ ಸೋಂಕಿನ ಸಂಕಷ್ಟದ ದಿನದಲ್ಲೂ ಅತಿ ಹೆಚ್ಚು ಕಾರು ಮಾರಾಟವಾದ ಭಾರತದ ಟಾಪ್ ತ್ರಿ ಮೆಟ್ರೋ ಸಿಟಿಗಳ ಪೈಕಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಹೌದು, 2021 ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್‌ಸಿಆರ್ ಪ್ರದೇಶವು ಅಂಗ್ರ ಪಂಕ್ತಿಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ 1, 28. 907 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದರೇ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆದ ಪರಿಣಾಮ ಹಾಗೂ ಸೋಂಕಿನ ಭಯವಿದ್ದ ಕಾರಣ ಹೆಚ್ಚಿನವರು ಸಾರ್ವಜನಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ವೈಯಕ್ತರಿಕ ವಾಹನಗಳನ್ನು ಹೆಚ್ಚಾಗಿ ಬಳಸುವುದಕ್ಕೆ ಪ್ರಾರಂಭಿಸಿದರು. ದೇಶದಲ್ಲಿ ದ್ವಚಕ್ರ ವಾಹನ ಹಾಗೂ ಕಾರುಗಳ ಮಾರಾಟಗಳಲ್ಲಿ ಹೆಚ್ಚಳವಾಗಿದೆ.
ಓದಿ : ರೆಮಿಡಿಸಿವಿರ್ ಅಕ್ರಮ ಮಾರಾಟ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್ ವೈ
ಭಾರತದಲ್ಲಿ ಮಾರಾಟವಾದ 10 ಕಾರುಗಳಲ್ಲಿ 6 ಕಾರುಗಳು ಭಾರತದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಮಾರಾಟವಾಗುತ್ತವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಕಾರು ತಯಾರಕರು ತಮ್ಮ ಉತ್ಪನ್ನಗಳನ್ನು ದೇಶದ ಟಾಪ್ ನಗರಗಳಲ್ಲಿ ಮೊದಲು ಬಿಡುಗಡೆಗೊಳಿಸುತ್ತಾರೆ.
ಇನ್ನು, ದೇಶದ ಪ್ರಮುಖ ನಗರಗಳು ಯುಟಿಲಿಟಿ ವಾಹನಗಳು, ಪ್ರೀಮಿಯಂ ಸೆಡಾನ್ ಗಳು ಮತ್ತು ಐಷಾರಾಮಿ ಹ್ಯಾಚ್‌ಬ್ಯಾಕ್‌ಗಳಿಗೆ ಗರಿಷ್ಠ ಬೇಡಿಕೆಯನ್ನು ಉಂಟುಮಾಡುತ್ತವೆ ಎಂದು autopunditz.com ವರದಿ ತಿಳಿಸಿದೆ.
2021 ರ ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್ ಸಿ ಆರ್ ಪ್ರದೇಶವು ಈ ವಿಷಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಷ್ಟ್ರ ರಾಜಧಾನಿ ಕಾರು ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದರೇ, ಈ ಭಾರಿ ರಾಜಧಾನಿ ನವದೆಹಲಿಯು 1,28,907 ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎನ್ ಸಿ ಆರ್ ಪ್ರದೇಶವು ನವದೆಹಲಿಯನ್ನು ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಕಾರು ಮಾರಾಟದ ವಿಚಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.