ಪತಂಜಲಿಯಲ್ಲಿ 3,000 ಕೋಟಿ ಹೂಡುವ ಫ್ರೆಂಚ್ ಲಕ್ಷುರಿ ಸಮೂಹ
Team Udayavani, Jan 11, 2018, 12:12 PM IST
ಹೊಸದಿಲ್ಲಿ : ವಿಶ್ವ ವಿಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ಬಹು ಕೋಟಿ ಉದ್ಯಮ ”ಪತಂಜಲಿ ಆಯುರ್ವೇದ” ದಲ್ಲಿ 3,250 ಕೋಟಿ ರೂ.ಗಳನ್ನು ಹೂಡುವ ಆಸಕ್ತಿಯನ್ನು ಫ್ರೆಂಚ್ ಲಕ್ಷುರಿ ಸಮೂಹ ಎಲ್‌ವಿಎಂಎಚ್ ಮೊಯೆಟ್ ಹೆನ್‌ಸೇ – ಲೂಯಿಸ್ ವುಯಿಟನ್ ಸಂಸ್ಥೆ ಪ್ರಕಟಿಸಿದೆ.
ಪತಂಜಲಿ ವಕ್ತಾರ ಎಸ್ ಕೆ ಗುಪ್ತಾ ಅವರು ಈ ವಿಷಯವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.
“ನಾವು ಹೇಗೆ ನಮ್ಮ ಅಭಿವೃದ್ಧಿಗಾಗಿ ವಿದೇಶಿ ತಂತ್ರಜ್ಞಾನವನ್ನು ಬಳಸುತ್ತೇವೋ ಹಾಗೆಯೇ ನಮ್ಮ ದೇಶದ ಲಾಭಕ್ಕಾಗಿ ನಾವು ವಿದೇಶಿ ಬಂಡವಾಳ ಬಳಸುವುದಕ್ಕೆ ಸಂಕೋಚ ಪಡುವುದಿಲ್ಲ ಎಂದು ಪತಂಜಲಿಯ ಅಧ್ಯಕ್ಷರಾಗಿರುವ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದಾರೆ” ಎಂದು ಗುಪ್ತಾ ತಿಳಿಸಿದರು.
“ನಮ್ಮಲ್ಲಿ ಬಂಡವಾಳ ಹೂಡಬಯಸುವ ಫ್ರೆಂಚ್ ವಿಲಾಸೀ ಸಂಸ್ಥೆಯ ಹೂಡಿಕೆಯನ್ನು ನಾವು ನಮ್ಮ ಶರತ್ತುಗಳ ನೆಲೆಯಲ್ಲಿ ಸ್ವೀಕರಿಸುತ್ತೇವೆ; ಹಾಗೆಂದು ಅವರಿಗೆ ನಮ್ಮ ಕಂಪೆನಿಯ ಶೇರುಗಳನ್ನಾಗಲೀ, ಹಿತಾಸಕ್ತಿಯ ಪಾಲನ್ನಾಗಲೀ ನಾವು ನೀಡುವುದಿಲ್ಲ’ ಎಂದು ಬಾಲಕೃಷ್ಣ ಹೇಳಿರುವುದಾಗಿ ಗುಪ್ತಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.