ನಿರಂತರ 7ನೇ ದಿನವೂ ಗೆಲವು: ಮುಂಬಯಿ ಶೇರು 3 ವಾರಗಳ ಎತ್ತರಕ್ಕೆ
Team Udayavani, Nov 24, 2017, 4:23 PM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರ, ನಿರಂತರ ಏಳನೇ ದಿನವೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿತು. ದಿನಾಂತ್ಯಕ್ಕೆ 91 ಅಂಕಗಳ ಏರಿಕೆಯೊಂದಿಗೆ 33,679.24 ಅಂಕಗಳ ಎತ್ತರವನ್ನು ತಲುಪಿದ ಸೆನ್ಸೆಕ್ಸ್ ಆ ಮೂಲಕ 3 ವಾರಗಳ ಗರಿಷ್ಠ ಎತ್ತರವನ್ನು ತಲುಪಿದ ಸಾಧನೆ ಮಾಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 40.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,389.70 ಅಂಕಗಳ ಮಟ್ಟವನ್ನು ತಲುಪಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ನಡುವಿನಲ್ಲಿ ನಿಫ್ಟಿ ಒಂದು ಬಾರಿ 10,404.50 ಅಂಕಗಳ ದಾಖಲೆಯ ಎತ್ತರವನ್ನು ತಲುಪಿತ್ತು. ಅನಂತರದಲ್ಲಿ ಕಂಡು ಬಂದ ಲಾಭ ನಗದೀಕರಣದ ಮಾರಾಟ ಒತ್ತಡಕ್ಕೆ ಅದು ಗುರಿಯಾಗಿ 10,389.70 ಅಂಕಗಳ ಮಟ್ಟಕ್ಕೆ ಕೆಳ ತಳ್ಳಲ್ಪಟ್ಟಿತು.
ನಿರಂತರ ಗೆಲುವಿನ ಓಟದ ಈ ವಾರದಲ್ಲಿ ಸೆನ್ಸೆಕ್ಸ 336.44 ಅಂಕಗಳನ್ನು ಸಂಪಾದಿಸಿತು. ಅಂತೆಯೇ ನಿಫ್ಟಿ 106.10 ಅಂಕಗಳನ್ನು ಸಂಪಾದಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.