ದಿನಪೂರ್ತಿ ಎದ್ದು ಬಿದ್ದ ಮುಂಬಯಿ ಶೇರು 30 ಅಂಕ ಅಲ್ಪ ಮುನ್ನಡೆ
Team Udayavani, Apr 6, 2018, 4:28 PM IST
ಮುಂಬಯಿ : ದಿನಪೂರ್ತಿ ಏರಿಳಿತಗಳನ್ನು ಕಾಣುತ್ತಾ ಎದ್ದು ಬಿದ್ದು ಸಾಗಿದ ಮುಂಬಯಿ ಶೇರು ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 30.17 ಅಂಕಗಳ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡು 33,626.51 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕ ಹಾಗೂ ವಾರ್ಷಿಕ ಫಲಿತಾಂಶಗಳು ಈಗಿನ್ನು ಪ್ರಕಟಗೊಳ್ಳಲಿದ್ದು ಹೂಡಿಕೆದಾರರು ಮತ್ತು ವಹಿವಾಟುದಾರರು ಈಗಲೇ ಎಚ್ಚರಿಕೆಯ ನಡೆ ತೋರಿರುವುದು ಇಂದಿನ ವಹಿವಾಟಿನಲ್ಲಿ ಸ್ಪಷ್ಟವಾಗಿತ್ತು. ಇಂದು ಕೊನೇ ಕ್ಷಣದಲ್ಲಿ ಕಂಡು ಬಂದ ಖರೀದಿಯ ಬಲದಲ್ಲಿ ಫಾರ್ಮಾ, ಇಂಧನ ಮತ್ತು ಬ್ಯಾಂಕ್ ಶೇರುಗಳು ಸೆನ್ಸೆಕ್ಸ್ ಮುಗ್ಗರಿಸದಂತೆ ನೋಡಿಕೊಂಡವು.
ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 578 ಅಂಕಗಳ ಅದ್ಭುತ ಜಿಗಿತವನ್ನು ದಾಖಲಿಸಿತ್ತು.
ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ ಇಂದು ಕೇವಲ 6.45 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 10,331.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸಾಪ್ತಾಹಿಕ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ ಒಟ್ಟು 658.20 ಅಂಕಗಳನ್ನು ಸಂಪಾದಿಸಿದೆ; ನಿಫ್ಟಿ 217.90 ಅಂಕಗಳನ್ನು ಸಂಪಾದಿಸಿದೆ.
ನಿನ್ನೆ ಗುರುವಾರ ದೇಶೀಯ ಸಾಂಸ್ಥಿಕ ಹೂಡಿಕೆದಾರರು 615.28 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ವಿದೇಶೀ ಹೂಡಿಕೆದಾರರು 108.02 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಾಟ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.