ಜಿಡಿಪಿ ಏರಿಕೆ ನಿರೀಕ್ಷೆ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ, ಹೊಸ ದಾಖಲೆ
Team Udayavani, Nov 28, 2019, 4:22 PM IST
ಮುಂಬೈ: ಎರಡನೇ ತ್ರೈಮಾಸಿಕದ ಜಿಡಿಪಿ ಸಂಖ್ಯೆ ಏರಿಕೆ ಕಾಣಲಿದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಗುರುವಾರವೂ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ದಾಖಲೆಯ ವಹಿವಾಟು ನಡೆಸಿದೆ. ಬ್ಯಾಂಕಿಂಗ್, ಮೆಟಲ್ ಹಾಗೂ ಫೈನಾಶ್ಶಿಯಲ್ ಶೇರುಗಳ ಭರ್ಜರಿ ಖರೀದಿಯಾದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 109.56 ಅಂಕಗಳ ಏರಿಕೆಯೊಂದಿಗೆ 41,130.17 ಅಂಕಗಳೊಂದಿಗೆ ದಾಖಲೆ ವಹಿವಾಟು ಮುಗಿಸಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 53.60 ಅಂಕಗಳ ಏರಿಕೆಯೊಂದಿಗೆ 12,154.30 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಮಂಗಳವಾರ ಕೂಡಾ ಮೊದಲ ಬಾರಿ 41,000 ಅಂಕಗಳ ಗಡಿ ದಾಟುವ ಮೂಲಕ ಮುಂಬೈ ಶೇರುಪೇಟೆ ದಾಖಲೆ ನಿರ್ಮಿಸಿತ್ತು. ಬುಧವಾರವೂ ಕೂಡಾ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 199 ಅಂಕ ಏರಿಕೆ ಕಂಡು 41,020ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.
ಭರ್ಜರಿ ಶೇರು ಪೇಟೆ ಸೆನ್ಸೆಕ್ಸ್ ಸೂಚ್ಯಂಕ ಏರಿಕೆಯಿಂದ ಯೆಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎಸ್ ಬಿಐ, ಭಾರ್ತಿ ಏರ್ ಟೆಲ್ ಶೇರುಗಳಿಗೆ ಹೆಚ್ಚಿನ ಲಾಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.